ಅಂಕಣ ಬರಹ

ಶರಣ ಚರಿತೆ: ಶರಣರ ಸ್ಮಾರಕ: ಮಂಗಳವೇಡೆ: ಬಸವಣ್ಣ

ಬಸವಣ್ಣನವರಿಗೆ ಸಂಬಂಧಿಸಿದಂತೆ ಕಲ್ಯಾಣ ಎಷ್ಟು ಮುಖ್ಯವೋ ಮಂಗಳವೇಡೆ ಮತ್ತು ಕೂಡಲ ಸಂಗಮ ಕ್ಷೇತ್ರಗಳು ಕೂಡ ಅಷ್ಟೇ ಮುಖ್ಯವಾಗಿವೆ. ಹರಿಹರ, ಪಲ್ಕುರಿಕೆ ಸೋಮನಾಥ, ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತೆ ಇವುಗಳಿಂದ ಮಾತ್ರ ನಮಗೆ ಬಸವಣ್ಣನವರ ಬದುಕಿನ ಕುರಿತಾಗಿ ಮಾಹಿತಿ ಸಿಗುತ್ತವೆ. ಹರಿಹರ ತನ್ನ ರಗಳೆಯಲ್ಲಿ ಬಸವಣ್ಣನವರನ್ನು ಕೂಡಲ ಸಂಗಮದಿಂದ ಮಂಗಳವೇಡೆಗೆ ಕರೆತಂದರೆ, ಪಾಲ್ಕುರಿಕೆ ಸೋಮನಾಥನ ಕಾವ್ಯದಲ್ಲಿ ಬಸವಣ್ಣನವರನ್ನು ಕೂಡಲಸಂಗಮದಿಂದ ಕಲ್ಯಾಣಕ್ಕೆ ಕರೆ ತರುತ್ತಾರೆ. ನಂತರದಲ್ಲಿ ಶರಣರ ವಚನಗಳು ದೊರೆತ್ತಿದ್ದರಿಂದ ಲಕ್ಕಣ್ಣ ದಂಡೀಶ, ಸಿಂಗಿರಾಜರಿಗೆ ಬಸವಣ್ಣನವರ ಕುರಿತಾಗಿ ಇನ್ನೂ ಹೆಚ್ಚಿನ ವಿಷಯಗಳು ಸಿಕ್ಕವು.

ಬಸವಣ್ಣ, ರೇವಣಸಿದ್ಧೇಶ್ವರ, ಬಿಜ್ಜಳನ ಬಗೆಗಿನ ಮಾಹಿತಿಗಳು ಮಂಗಳವೇಡೆಯಲ್ಲಿ ಸಿಗುತ್ತವೆ. ಈಗಿನ ಮಹಾರಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಮಂಗಳವೇಡೆ ಈ ಮೊದಲು ಕನ್ನಡದ ಪ್ರದೇಶವಾಗಿತ್ತು. ಈಗ ಆ ಪ್ರದೇಶ ಸಂಪೂರ್ಣ ಮರಾಠಿಮಯ ಆಗಿದೆ. ಈ ಮಂಗಳವೇಡೆಯ ಪರಿಚಯ ಮಾಡಿಕೊಂಡಾಗ ಮತ್ರ ಬಸವಣ್ಣ, ಬಿಜ್ಜಳ, ಶರಣರು ನಮಗೆ ಅರ್ಥವಾಗುತ್ತಾರೆ. ಇದು ಆಗ ಕಲಚುರಿ ಅರಸು ಮನೆತನ ಕಲ್ಯಾಣ ಚಾಲುಕ್ಯರ ಮಾಂಡಲೀಕ ಅರಸರ ಮನೆತನವಾಗಿತ್ತು. (೧೧೩೦-೧೧೬೨) ೨ನೇ ಬಿಜ್ಜಳ ರಾಜ್ಯಭಾರ ಮಾಡುತ್ತಿದ್ದ ವೇಳೆ ಬಸವಣ್ಣನ ತಾಯಿಯ ಸಹೋದರ ಸಿದ್ಧರಸರು ಅಲ್ಲಿ ಮಂತ್ರಿಗಳಾಗಿದ್ದರು. ಹೀಗಾಗಿ ಬಸವಣ್ಣ ಅಲ್ಲಿ ಕರಣಿಕನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಮಂಗಳವೇಡೆಯ ಪುರಾತನ ಕೋಟೆ

ಮಂಗಳವೇಡೆಯಲ್ಲಿ ಈಗಲೂ ಪುರಾತನ ಕೋಟೆಯಿದ್ದು, ಪೂರ್ವದ ಕಡೆ ೧೨೪೫ ಅಡಿ ಉದ್ದ, ಪಶ್ಚಿಮದ ಕಡೆ ೯೨೦ ಅಡಿ ಇದೆ. ದಕ್ಷಿಣ ಭಾಗ ೧೧೦೦ ಅಡಿ, ಎತ್ತರ ೩೫ ಅಡಿ ಇದೆ. ದಪ್ಪ ೧೩ ಅಡಿಗಳಷ್ಟು ಕೋಟೆ ಸುತ್ತುವರಿದಿರುವುದನ್ನು ಕಾಣಬಹುದು. ಇದು ಮಣ್ಣಿನ ಕೋಟೆ ಆಗಿತ್ತು. ಬೇರೆಡೆಯ ಜೈನ ಬಸದಿಯ ಕಲ್ಲುಗಳನ್ನು ತಂದು ಈ ಕೋಟೆ ಕಟ್ಟಿರಬಹುದು. ಮಣ್ಣಿನ ಈ ಕೋಟೆಗೆ ಕಲ್ಲಿನ ಹೊದಿಕೆ ಹೊದಿಸಿರುವುದನ್ನು ಕಾಣುತ್ತೇವೆ.

ಕೋಟೆಯ ಗೋಡೆ ಮುಗಿವ ಕಡೆ ರೇವಣಸಿದ್ಧೇಶ್ವರ ದೇವಾಲಯವಿದ್ದು, ಇದನ್ನು ಕಾಶಿ ವಿಶ್ವನಾಥ ದೇವಾಲಯ ಎಂದು ಕರೆಯಲಾಗುತ್ತದೆ. ಕಂಬದ ಶಿಲಾಶಾನದಲ್ಲಿನ ಲಿಖಿತದ ಪ್ರಕಾರ ಜೀರ್ಣಗೊಂಡ ಈ ಶಿವ ದೇವಾಲಯವನ್ನು ಹಿಪ್ಪರಗಿ ಕುಲಕರ್ಣಿ ೧೫೭೨ರಲ್ಲಿ ದುರಸ್ತಿ ಮಾಡಿಸುತ್ತಾರೆ ಎಂಬುದು ತಿಳಿದುಬರುತ್ತದೆ. ದೇವಾಲಯದ ಎದುರು ಪುರಾತನ ಬಾವಿಯಿದ್ದು, ಅಲ್ಲಿಯೇ ಬ್ರಹ್ಮನ ಅಪರೂಪದ ಶಿಲ್ಪ ಇದೆ.

ಶಂಕರಲಿಂಗ ದೇವಸ್ಥಾನ, ಕಲ್ಯಾಣೇಶ್ವರ ಮಹಾದೇವ ಮಂದಿರ/ಕಲ್ಯಾಣ ಸಾಹೇಬ ದರ್ಗಾ ಕೋಟೆಯ ಸುತ್ತಲೂ ಇಂತಹ ಶಿವದೇವಾಲಯಗಳಿರುವುದನ್ನು ಗಮನಿಸಬಹುದು. ಪೂರ್ವದಲ್ಲಿ ಮಂಗಳಾದೇವಿ ದೇವಾಲಯ/ಗೈಬುಪೀರ ದರ್ಗಾ ಇದ್ದು, ದೇವಾಲಯದ ಅಡಿಯಲ್ಲಿ ಅಲ್ಲಿನ ಎಲ್ಲಾ ಜಾತಿ ಜನಾಂಗದವರು ಸೇರಿ ಜನ ಜಾತ್ರಾ ಕಮೀಟಿ ರಚನೆ ಮಾಡಿಕೊಂಡಿದ್ದಾರೆ. ಮುಸ್ಲಿಂರು ಇಲ್ಲಿಯವರೆಗೆ ಚೇರ್ ಮನ್ ಆಗಿಲ್ಲ. ಆದರೆ ಎಲ್ಲ ಜಾತಿಯವರು ಸದಸ್ಯರಾಗಿದ್ದಾರೆ. ಇಂದಿಗೂ ಆ ಸೌಹಾರ್ದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಆ ದರ್ಗಾ ಇಳಿದು ಬಂದರೆ ರಾಜರು ವಾಸಿಸುತ್ತಿದ್ದ ಅರಮನೆ ಮತ್ತು ಅಂಗಳ ಇತ್ತು ಎನ್ನುವುದಕ್ಕೆ ಇನ್ನೂ ಕೆಲ ಹಳೆಯ ಸ್ಮಾರಕಗಳಿರುವುದನ್ನು ಗುರುತಿಸಬಹುದಾಗಿದೆ. ಇಲ್ಲಿಂದಲೇ ಮಂಗಳಾದೇವಿಗೆ ದೇವಾಲಯಕ್ಕೆ ಹೋಗುವ ದಾರಿ ಇರುವುದನ್ನು ಗಮನಿಸಬಹುದಗಿದೆ.

ಗ್ರಾಮದ ತುಂಬ ಹಳೆ ಕಾಲದ ದೇವಲಯ ಮುಂತದವುಗಳ ಪಳಿಯುಳಿಕೆಗಳು ಸಿಗುತ್ತವೆ. ಹೀಗಾಗಿ ಆ ಊರು ಈ ಹಿಂದೆ ಹಲವು ಧರ್ಮದವರ ದಬ್ಬಾಳಿಕೆ, ಸಂಘರ್ಷಕ್ಕೆ ಒಳಗಾಗಿದೆ ಎಂದು ಹೇಳಬಹುದು. ಊರ ಹೊರಗಡೆ ಲಿಂಗಾಯತ ಮಠವಿದೆ. ನಾಲ್ಕೈದು ಎಕರೆ ದೊಡ್ಡ ಅಂಗಳವಿದೆ. ಆದರೆ ಇದೀಗ ಖಬರ್‌ಸ್ತಾನ ಆಗಿದೆ. ಇದೇ ಮಂಗಳವೇಡೆಯಲ್ಲಿ ರೇವಣಸಿದ್ಧ ಮತ್ತು ಬಸವಣ್ಣನವರ ಪರಿಚಯ ಆಗಿರಬೇಕು ಎಂಬುದನ್ನು ಹರಿಹರ ಗುರುತಿಸಿದ್ದಾರೆ.

ರೇವಣಸಿದ್ಧರ ಜೊತೆಗೆ ಇರುವ ಮಾಯಿದೇವಿ ಮಂಗಳವೇಡೆಯವಳಾಗಿದ್ದು, ಈಕೆಗೆ ರೇವಣಸಿದ್ಧನಿಂದ ಹುಟ್ಟಿದ ಮಗಳೇ ಚೆನ್ನರೇವಣದೇವಿ ಎಂಬ ಊಹೆ ಸರಿಯೆನಿಸುತ್ತದೆ. ರೇವಣಸಿದ್ಧ ಮತ್ತು ಬಿಜ್ಜಳನ ನಡುವೆ ನಡೆದ ಸಂಘರ್ಷ ಇಲ್ಲಿಯದ್ದೆ ಆಗಿದೆ ಎಂದು ಹೇಳಬಹುದು. ರೇವಣಸಿದ್ಧರು, ಮಂಗಳವೇಡೆಯಲ್ಲಿ ಒಂದು ಸುಂದರವಾದ ಕೆರೆ ನಿರ್ಮಾಣ ಮಾಡಬೇಕೆಂದು, ತಾನೆ ಮಣ್ಣು ಆಗೆಯಲು ಪ್ರಾರಂಭಿಸಿದನು.

ಹೆಂಡತಿಗೆ ಮಣ್ಣು ಹೊತ್ತು ಹಾಕಲು ಆದೇಶಿಸುವನು. ಚೋಳದೇಶದ ರಾಜಕುಮಾರಿ ಬಸುರಿಯಾಗಿದ್ದಾಗ ಸಹಜವಾಗಿಯೇ ಆಯಾಸಗೊಂಡಳು. ಈಕೆಯ ಗರ್ಭವನ್ನು ಪಡೆದು ಅದನ್ನು ಗಡಿಗೆಯೊಳಗೆ ಹಾಕಿ ಮುಚ್ಚಳ ಮುಚ್ಚಿಟ್ಟ. ಒಂಬತ್ತು ತಿಂಗಳ ನಂತರ ಮುಚ್ಚಳ ತೆಗೆಯಲು ಮುಚ್ಚಿಟ್ಟ ಗಡಿಗೆಯಲ್ಲಿ ಗಂಡು ಮಗು ಆಡುತ್ತಿತ್ತು. ಅವನಿಗೆ ರುದ್ರಮುನಿ ಎಂದು ಹೆಸರಿಡಲಾಯಿತು ಎಂದು ಹರಿಹರ ಚಿತ್ರಿಸುವ ಪ್ರದೇಶ ಬಹುಶಃ ಇದುವೇ ಆಗಿರಬೇಕು.

ಮಂಗಳವೇಡೆಯಲ್ಲಿ ಕುಂಬಾರ ಕೆರೆ, ಪಾತರಾಬಯಿ ಕೆರೆ, ಹಾಗೂ ಸುಮಾರು ೨೫ ಎಕರೆ ವಿಸ್ತಾರದ ಕೃಷ್ಣ ಕೆರೆಯಿದ್ದು, ಇದುವೇ ರೇವಣಸಿದ್ಧರು ಕಟ್ಟಿದ ಕೆರೆಯಾಗಿರಬಹುದು. ಇಂದಿಗೂ ಆ ದಂಡೆಯಲ್ಲಿ ದೇವಸ್ಥಾನದ ಪಳಿಯುಳಿಕೆ ಕಾಣಸಿಗುತ್ತವೆ. ರೇವಣಸಿದ್ದೇಶ್ವರ ದೇವಾಲಯ/ ಸಿದ್ದನ ಕೆರೆ ಒಂದೇ ಕಡೆ ಇವೆ.

ಮಾಸನೂರಿನಲ್ಲಿ ಸೋಮೇಶ್ವರ/ರೇವಣಸಿದ್ಧ ದೇವಾಲಯವಿದ್ದು, ಅಲ್ಲಿಯೇ ಮಲ್ಲಿಕಾರ್ಜುನ ದೇವಾಲಯವಿದೆ. ಅಲ್ಲಿರುವ ಆಲದ ಮರದಲ್ಲಿ ತಗಣಿ ರೂಪ ತೊಟ್ಟ ಒಂದು ಗಂಡು ರಾಕ್ಷಸ ಮತ್ತು ಮತ್ತೊಂದು ಹೆಣ್ಣು ರಾಕ್ಷಸ ವಾಸವಾಗಿದ್ದರು. ರೇವಣಸಿದ್ಧ ಇಲ್ಲಿಗೆ ಬಂದಾಗ ಇವರನ್ನು ವಧೆ ಮಾಡಲು ರಾಕ್ಷಸರು ಬಂದವು. ರೇವಣಸಿದ್ಧರು ಅವುಗಳೆಡೆಗೆ ಬಿರಿಗಣ್ಣಿನಿಂದ ನೋಡಿದಾಗ ಅವು ಕರಗಿ ಉಕ್ಕಿನ ಎರಡು ಗುಂಡುಗಳಾದವು. ಅವುಗಳಿಂದ ಎರಡು ಖಡ್ಗ ತಯಾರಿಸಿದರು. ಒಂದನ್ನು ಆರನೇ ವಿಕ್ರಮಾದಿತ್ಯನಿಗೆ (೧೦೭೬-೧೧೨೭) ನೀಡಿದರು. ಇನ್ನೊಂದನ್ನು ದೇವಾಲಯದ ಎದುರಿಗಿನ ಭೀಮಾನದಿಯ ಮಡುವಿನಲ್ಲಿ ನಿಲ್ಲಿಸಿದರು.

ಈ ಮಡವಿನಲ್ಲಿ ಎಸೆದ ಖಡ್ಗವನ್ನು ಪಡೆದು ತಾನು ಸಾಮ್ರಾಟನಾಗಬಹುದೆಂದು ಬಿಜ್ಜಳ ಬಯಸಿ ಮಾಂತ್ರಿಕನನ್ನು ನೇಮಿಸಿದನು. ಆ ಮಾಂತ್ರಿಕ ಹೇಳಿದ ೧೨೦೦ ಕನ್ನಿಕೆಯರನ್ನು ಬಲಿಕೊಡುವ ವೇಳೆ ಒಬ್ಬ ಕನ್ನಿಕೆ ಕಡಿಮೆಯಾಗಿ ಮಾಯಿದೇವಿಯ ಮಗಳು ಚೆನ್ನರೇವಣದೇವಿಯನ್ನು ಹಿಡಿದು ತರುತ್ತಿದ್ದರು. ಮಾಯಿದೇವಿ ಜೋರಾಗಿ ರೇವಣಸಿದ್ಧರನ್ನು ಕೂಗಿದಾಗ ಮಂಗಳವೇಡಿಗೆ ಆಗಮಿಸಿ ಎಲ್ಲರನ್ನು ಬಿಡಿಸಿದ. ರೇವಣಸಿದ್ಧರು ಆ ಖಡ್ಗವನ್ನು ತದು ಕೊಡುತ್ತಿರುವಾಗ ಅದರ ಒಳಪು, ಆರ್ಭಟ ನೋಡಿ ಬಿಜ್ಜಳ ಹೆದರಿದ ಎಂಬ ಕಥೆಯೂ ಹರಿಹರ ಹೇಳುತ್ತಾನೆ. ಮಾಸನೂರಿನ ಮಡುವಿನಲ್ಲಿ ಖಡ್ಗವಿದ್ದ ಸ್ಮಾರಕದ ಕಟ್ಟಡ ಇದೇ ಎಂದು ತೋರಿಸಲಾಗುತ್ತಿದೆ.

ಮಂಗಳವೇಡಿಯಲ್ಲಿ ಏಕಾಂತರಾಮಯ್ಯನ ಶಿರಸ್ ಪವಾಡದ ಕಥೆ ಹೊಂದಿರುವ ರಾಜಮುದ್ರೆ ಇರುವ ಶಿಲ್ಪಫಲಕವಿದ್ದು, ಶರಣರ ಚರಿತ್ರೆಗೆ ಇದು ಒಳ್ಳೆಯ ದಾಖಲೆಯಾಗಿದೆ. ಅಬ್ಬಲೂರಿನ ದೇವಾಲಯದ ಕಲ್ಲಿನ ಮೇಲೆ ಕೆತ್ತಲಾದ ಶಿಲ್ಪ ಕಥೆ ಸಿಗುತ್ತದೆ.

ಬಸವ ಸಮಿತಿಯ, ಅನುಭವ ಮಂಟಪ
ಜಯನಗರ, ಕಲಬುರಗಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago