ಆಳಂದ: ಪಟ್ಟಣದ ಉಮರಗಾ ಹೆದ್ದಾರಿಯಲ್ಲಿನ ಯಡಿಯೂರ, ಗದಗ, ಡಂಬಳದ ಜಗದ್ಗರು ಲಿಂ| ಡಾ| ತೋಂಟದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದಲ್ಲಿನ ಗೋ ಶಾಲೆಗೆ ಸಹಾಯಕ ಆಯುಕ್ತ ರಾಮಚಂದ್ರ ಗಡದೆ ಅವರು ಭೇಟಿ ನೀಡಿ ವೀಕ್ಷಿಸಿದರು.
ಕಳೆದ ಸಾಲಿನ ಬರಗಾಲದಲ್ಲಿನ ಸರ್ಕಾರ ಆರಂಭಿಸಿದ ಗೋಶಾಲೆಗೆ ಅನುಭವ ಮಂಟಪದಿಂದ ಒದಗಿಸಿದ ನೀರು, ಮೇವು ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸಿದ ಕಾರ್ಯವನ್ನು ಆಯುಕ್ತರು ಪರಿಶೀಲಿಸಿ ವಿಶಾಲವಾದ ನಿಸರ್ಗ ಸೌಂದರ್ಯದ ಕುರಿತು ಮೆಚ್ಚಿಗೆ ವ್ಯಕ್ತಪಡಿಸಿದರು. ಪ್ರವಾಹ ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಗಂಜಿ ಕೇಂದ್ರ ತರೆಯುವುದು ಜನ, ಜಾನುವಾರ ಸಂರಕ್ಷಣೆ ಸೇರಿ ಇನ್ನಿತರ ಕಾರ್ಯಕ್ಕೆ ಅನುಭವ ಮಂಟಪ ಸ್ಥಳದ ಆಯ್ಕೆಯ ಮಾಡುವ ಕುರಿತು ಅವರು ಪರಿಶೀಲನೆ ನಡೆಸಿದರು.
ಬಳಿಕ ಅನುಭವ ಮಂಟಪ ಕಟ್ಟಡ ಕಾಮಗಾರಿಯನ್ನು ಸುತ್ತಾಡಿ ವೀಕ್ಷಿಸಿ ಮಾಹಿತಿ ಆಲಿಸಿದ ಅವರು, ಆವರಣದಲ್ಲಿನ ಗಿಡ, ಮರಗಳ ನಿಸರ್ಗಧಾಮ ಪರಿಸರ ಕೊಂಡಾಡಿದರು. ಅಲ್ಲದೆ, ರಸ್ತೆ ಸಂಪರ್ಕಕ್ಕೆ ಶಾಸಕ ಸುಭಾಷ ಗುತ್ತೇದಾರ ಅವರು ಕೆಕೆಆರ್‍ಡಿಬಿ ಅನುದಾನದ 10 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆಯ ಕಾಮಗಾರಿಯನ್ನು ಕೈಗೊಂಡಿದ್ದ ಅವರು ಆಲಿಸಿದರು. ಅನುಭವ ಮಂಟಪದ ಮುಂದಿನ ಜನಪರ ಯೋಜನೆಗಳ ಕುರಿತು ಚೆರ್ಚಿಸಿ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನದ ಕುರಿತು ಗದಗ ಶ್ರೀಮಠದಿಂದಲೇ ಬೃಹತ್ ಪ್ರಮಾಣದಲ್ಲಿ ಕೈಗೊಂಡಿರುವುದು ಪ್ರಶಂಸನಿಯವಾಗಿದೆ ಎಂದರು.
ಆಯುಕ್ತರ ಜೊತೆಯಲ್ಲಿದ್ದ ತಹಸೀಲ್ದಾರ ದಯಾನಂದ ಪಾಟೀಲ ಅವರು, ಪ್ರಶಾಂತ ವಾತಾವರಣದಲ್ಲಿ ಸರ್ಕಾರದಿಂದ ಜನ, ಜಾನುವಾರು. ಗಂಜಿ ಕೇಂದ್ರಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ವಾಹಣೆಗೆ ಅನುಭವ ಮಂಟಪ ಬಳಕೆಗೆ ಸದಾ ಅನುಕುಲವಾಗಲಿದೆ. ಇಂಥ ಜನಪರ ಕಾರ್ಯಕ್ಕೆ ಬರೀ ಅನುಭವದ ಜೊತೆಗೆ ಅನುಭವ ಹಂಚಿಕೊಳ್ಳಲು ಅನುಭವ ಮಂಟಪ ಸ್ಥಾಪಿಸಿರುವುದು ಸಮಾಜಕ್ಕೆ ಬೇಕಾಗಿದೆ. ಲಿಂ. ಡಾ. ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಸಂಕಲ್ಪದ ಕಾರ್ಯವನ್ನು ಹಾಲಿ ಜಗದ್ಗುರು ಡಾ| ಸಿದ್ಧರಾಮ ಮಹಾಸ್ವಾಮಿಗಳು ಮುಂದುವರೆಸಿರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ ಎಂದರು.
ಅನುಭವ ಮಂಟಪದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಪತ್ರಕರ್ತ ಮಹಾದೇವ ವಡಗಾಂವ, ವಿಎ ಆನಂದ ಪೂಜಾರಿ, ಶರಣಬಸಪ್ಪ ಸಾಲೇಗಾಂವ, ಬಿ.ಆರ್. ಜಮಾದಾರ, ಲಾಡಪ್ಪ ಮಸೂಂಧೆ ಸೇರಿದಂತೆ ಮಹಾರಾಷ್ಟ್ರದ ಮುರುಮ ಗ್ರಾಮದ ಲಿಂಗಾಯತ ಸೇವಾ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…