ಕಲಬುರಗಿ: ಅಯೋಧ್ಯೆಯಲ್ಲಿ ರಾಮಮಂದಿರದ ಬದಲಾಗಿ ಬೌದ್ಧ ವಿಹಾರಗಳನ್ನು ನಿರ್ಮಿಸಿ ಇಲ್ಲಿಯ ಕುರುಹುಗಳನ್ನು ಸಂರಕ್ಷಿಸಬೇಕೆಂದು ದಲಿತ ಸಂಘರ್ಷ ಸಮನ್ವಯ ಸಮಿತಿಯ ಸದಸ್ಯರು ಹಾಗೂ ಮುಖಂಡರು ಜೇವರ್ಗಿ ತಹಸೀಲ್ದಾರರ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿರುವ ಆಯೋಧ್ಯ ನಗರದಲ್ಲಿ ಬೌದ್ಧಧರ್ಮದ ಅನೇಕ ಕುರುಹು ದೊರೆತರು ಇದರ ಬಗ್ಗೆ ಸರಕಾರ ಹಾಗೂ ಸುಪ್ರೀಂಕೋರ್ಟ್ ತಲೆಕೆಡಿಸಿಕೊಂಡಿಲ್ಲ. ಇದು ಅತ್ಯಂತ ಗಂಭೀರ ಸಂಗತಿಯಾಗಿದ್ದು ,ರಾಮಮಂದಿರ ನಿರ್ಮಾಣ ಪೂರ್ವದಲ್ಲಿ ಈ ಕುರಿತು ಮತ್ತೊಮ್ಮೆ ಪರಮರ್ಷಿಸಬೇಕಿದೆ. ಕ್ರಿಸ್ತಪೂರ್ವ 640 ರಲ್ಲಿ ಇಲ್ಲಿಗೆ ಭೇಟಿ ನೀಡಿದ ಅನೇಕ ವಿದೇಶಿ ಪ್ರವಾಸಿಗರು ಈ ಪಟ್ಟಣ ಒಂದು ಬೌದ್ಧ ಸ್ಮಾರಕವಾಗಿದ್ದು ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಬೌದ್ಧ ಸನ್ಯಾಸಿಗಳು ವಾಸವಾಗಿದ್ದರು . ಅಲ್ಲದೆ ಇಲ್ಲಿ ಬೌದ್ಧರು ಶಿಕ್ಷಣವನ್ನು ನೀಡಿ ಪರೀಕ್ಷೆಗೆ ಒಳಪಡಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಲಂದ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡಲಾಗುತ್ತಿತ್ತು ಎಂದು ಇದನ್ನು ಐತಿಹಾಸಿಕ ಉಲ್ಲೇಖಗಳಲ್ಲಿ ಇದೆ ಎಂದು ತಿಳಿಸಲಾಗಿದೆ.
ಮನುವೆಂಬ ವಿಚಾರವಾದಿಯ ಕುತಂತ್ರ ಜನರಿಂದ ಬೌದ್ಧಧರ್ಮದ ಸ್ಮಾರಕ ಹಾಗೂ ಶಿಕ್ಷಣ ಕೇಂದ್ರಗಳನ್ನು ನಾಶವಾಗಿ ಕ್ರಮೇಣವಾಗಿ ಈ ನಗರಕ್ಕೆ ಅಯೋಧ್ಯ ಎಂದು ಮತ್ತೊಮ್ಮೆ ನಾಮಕರಣ ಮಾಡಲಾಗಿದೆ.
ಇತಿಹಾಸವನ್ನು ತಿರುಚಲಾಗಿದೆ ವಾಸ್ತವತೆಯನ್ನು ಮರೆಮಾಚಲಾಗುತ್ತಿದೆ ಎಂದು ದಲಿತ ಸಮನ್ವಯ ಸಮಿತಿಯ ಮುಖಂಡರು ಆರೋಪಿಸಿ ರಾಷ್ಟ್ರಪತಿಗಳಿಗೆ ಪುನರ್ ಅವಲೋಕಿಸಿ ಇಲ್ಲಿ ಬುದ್ಧವಿಹಾರ ಸ್ಮಾರಕ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದಾರೆ.
ದಲಿತ ಮುಖಂಡರಾದ ಭೀಮರಾಯ ನಗನೂರು, ದವಲಪ್ಪ ಮದನ್, ಸಿದ್ದರಾಮ ಕಟ್ಟಿ, ರವಿ ಕುಳಗೇರಾ, ಶ್ರೀಹರಿ ಕರ್ಕಿಹಳ್ಳಿ, ಶ್ರೀಮಂತ ಧನಕರ, ದೇವಿಂದ್ರ ಮುದವಾಳ, ಬಸವರಾಜ ಹೆಗಡೆ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…