ಬಿಸಿ ಬಿಸಿ ಸುದ್ದಿ

ಆಶಾ-ಅಂಗನವಾಡಿ, ಬಿಸಿಯೂಟ ಸಿಬ್ಬಂದಿಗಳ ಪ್ರತಿಭಟನೆ

ವಾಡಿ: ಕೋವಿಡ್-೧೯ ಕೆಲಸದ ಮುಂಚೂಣಿ ಕೆಲಸಗಾರರಾಗಿ ತೊಡಗಿಸಿಕೊಂಡವರು ಯಾವುದೇ ಸ್ವರೂಪದಲ್ಲಿ ಸತ್ತರೂ ಅವರಿಗೆ ೫೦ ಲಕ್ಷ ರೂ. ವಿಮಾ ಸೌಲಭ್ಯ ಸಮಾನವಾಗಿ ನೀಡುವುದನ್ನು ಖಾತ್ರಿಪಡಿಸಬೇಕು. ಖಾಯಂ ಉದೋಗ ಕಲ್ಪಿಸಬೇಕು. ಇಡೀ ಕುಟುಂಬಕ್ಕೆ ಕೋವಿಡ್ ೧೯ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯ ಒದಗಿಸಬೇಕು. ಮಾಸಿಕ ರೂ.೨೧೦೦೦ ವೇತನ ಹಾಗೂ ವಾರ್ಷಿಕ ೧೦,೦೦೦ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗಾಗಿ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತರು ಸರಕಾರವನ್ನು ಆಗ್ರಹಿಸಿದರು.

ಶುಕ್ರವಾರ ಪಟ್ಟಣದ ಶ್ರೀನಿವಾಸಗುಡಿ ವೃತ್ತದಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಕೊರೊನಾ ವಾರಿಯರ್ಸ್‌ಗಳು, ಸರಕಾರ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ, ಸಾಂಕ್ರಾಮಿಕ ರೋಗದ ಅಪಾಯಕಾರಿ ದಿನಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳು ರೋಗವನ್ನು ಹತೋಟಿಯಲ್ಲಿಡಲು ಶ್ರಮಿಸುತ್ತಿದ್ದಾರೆ. ಸುರಕ್ಷತಾ ಕ್ರಮಗಳನ್ನು ವಹಿಸಲು, ವಿಮೆ ಇತ್ಯಾದಿ ಸೌಲಭ್ಯ ಒದಗಿಸಲು, ಅಪಾಯಕಾರಿ ಕೆಲಸಕ್ಕೆ ಪರಿಹಾರ ಭತ್ಯೆ ಇತ್ಯಾದಿ ನೀಡಬೇಕೆಂದು ಕೇಂದ್ರ ಕಾರ್ಮಿಕರ ಸಂಘಟನೆಗಳು ಪದೇಪದೆ ಹೋರಾಟಗಳನ್ನು ನಡೆಸಿ, ಮನವಿ ನೀಡಿ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಮಂಡಿಸುತ್ತಲೇ ಬಂದಿವೆ. ಆದರೆ, ಭಾರತ ಸರ್ಕಾರವು ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಲೇ ಬರುತ್ತಿದೆ ಎಂದು ದೂರಿದರು.

ಮೂಲಭೂತ ಸೇವೆಗಳಾದ ಆರೋಗ್ಯ (ಆಸ್ಪತ್ರೆಯನ್ನೂ ಒಳಗೊಂಡು) ಪೋಷಕಾಂಶಗಳು (ಐಸಿಡಿಎಸ್, ಮಧ್ಯಾಹ್ನದೂಟ ಯೋಜನೆಯನ್ನೂ ಒಳಗೊಂಡು) ಮತ್ತು ಶಿಕ್ಷಣವೇ ಮುಂತಾದ ಅಗತ್ಯ ಮೂಲಭೂತ ಸೇವೆಗಳ ಖಾಸಗಿಕರಣದ ಪ್ರಸ್ತಾಪಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸೇವೆಗಳ ಖಾಸಗಿಕರಣ ನಿಲ್ಲಿಸಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದೂಟ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಶನ್ (ಎನ್.ಎಚ್.ಎಂ) ಯೋಜನೆ ಮುಂತಾದ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಸಾಕಷ್ಟು ಬಜೆಟ್ ಅನುದಾನದ ಹಂಚಿಕೆಯನ್ನು ಮಾಡುವ ಜೊತೆಗೆ ಯೋಜನೆಗಳನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ ವೆಂಕನಗೌಡ ಪಾಟೀಲ ಸ್ವೀಕರಿಸಿದರು.

sajidpress

Recent Posts

ಭಕ್ತ ಸಾಗರ ನಡುವೆ ಶ್ರೀರೇವಣಸಿದ್ದೇಶ್ವರ ಅದ್ಧೂರಿ ಬೆಳ್ಳಿ ಪಲ್ಲಕ್ಕಿ ಉತ್ಸವ

ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ಧಾರ್ಮಿಕ ದತ್ತಿ ಇಲಾಖೆಯ ರಟಕಲ್ (ರೇವಗ್ಗಿ) ಶ್ರೀ ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.…

16 mins ago

ಸಾಮೂಹಿಕ ಯಜ್ಞೋಪವಿತ ಧಾರಣ ಕಾರ್ಯಕ್ರಮ

ಸುರಪುರ: ನಗರದ ಬಸ್ ನಿಲ್ದಾಣದ ಬಳಿಯ ಶ್ರೀ ಕೃಷ್ಣದ್ವೈಪಾಯನ ತೀರ್ಥರ ಮಠದಲ್ಲಿ ಸಾಮೂಹಿಕ ಯಜ್ಞೋಪವಿತ ಧಾರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ…

22 mins ago

ಪ್ರತಿಯೊಬ್ಬ ಮನುಷ್ಯನಿಗೆ ಮೋಕ್ಷ ಎನ್ನುವುದು ತುಂಬಾ ಮುಖ್ಯ

ಸುರಪುರ: ಬದುಕಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಮೋಕ್ಷ ಎನ್ನುವುದು ತುಂಬಾ ಮುಖ್ಯವಾದುದು,ಆ ಮೋಕ್ಷವನ್ನು ಕಾಣಬೇಕಾದರೆ ಸಂಸ್ಕಾರಯುಕ್ತ ಆಚರಣೆಗಳು ಹಾಗೂ ಧರ್ಮ ಮತ್ತು…

24 mins ago

ನುಲಿಯ ಚಂದಯ್ಯನವರು ಕಾಯಕ ಜೀವಿ ಶರಣರಾಗಿದ್ದರು

ಸುರಪುರ: 12ನೇ ಶತಮಾನದ ಬಸವಾದಿ ಶರಣರ ಸವiಕಾಲಿನ ಶರಣರಲ್ಲಿ ನುಲಿಯ ಚಂದಯ್ಯನವರು ಕಾಯಕ ಜೀವಿ ಶರಣರಾಗಿದ್ದರು ಎಂದು ತಹಸಿಲ್ದಾರ್ ಕೆ.ವಿಜಯಕುಮಾರ…

26 mins ago

ರಾಜ್ಯಪಾಲರು ಸಂವಿಧಾನ ವಿರೋಧಿ ನಡೆ ಹೊಂದಿದ್ದಾರೆ: ಶಾಸಕ ಬಿ.ಆರ್ ಪಾಟೀಲ್

ಪ್ರಾಸಿಕ್ಯೂಷನ್ ವಿರುದ್ಧ ಕಲಬುರಗಿಯಲ್ಲಿ ಭುಗ್ಗಿಲ್ಲೆದ ಆಕ್ರೋಶ ಕಾಂಗ್ರೆಸ್ ಶಾಸರಕ ನೇತೃತ್ವದಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಕಲಬುರಗಿ: ರಾಜ್ಯಪಾಲರ ಥಾವರ್ ಚಂದ್…

36 mins ago

ರಕ್ಷಾ ಬಂಧನ, ಭಾವ ಸಂಗಮ ಕಾರ್ಯಕ್ರಮ

ಕಲಬುರಗಿ: ಓಂ ನಗರ ಬಡಾವಣೆ ಅಂಚಿನಲ್ಲಿರುವ  ಪದ್ಮಸಾಲಿ ಸಮಾಜದ ದೇವಸ್ಥಾನದ ಆವರಣದಲ್ಲಿ ನೇಕಾರರ ನೂಲು ಹುಣ್ಣಿಮೆ ನಿಮಿತ್ತ ರಕ್ಷಾ ಬಂಧನ…

56 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420