ಶಹಾಬಾದ:ಕೊರೊನಾ ವಾರಿಯರ್ಸಗೆ ಸಂರಕ್ಷಣೆ ಮತ್ತು ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಶುಕ್ರವಾರ ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ಸಂಘಗಳ ಜಂಟಿ ಸಮಿತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಸುರೇಶ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಮೂಲಭೂತ ಸೇವೆಗಳ ಖಾಸಗಿಕರಣದ ಪ್ರಸ್ತಾಪಗಳನ್ನು ಹಿಂಪಡೆಯಿರಿ. ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸೇವೆಗಳ ಖಾಸಗಿಕರಣ ನಿಲ್ಲಿಸಿ.45 ಮತ್ತು 46 ನೇ ಭಾರತ ರಾಷ್ಟ್ರೀಯ ಕಾರ್ಮಿಕರ ಸಮ್ಮೇಳನಗಳ ಶಿಫಾರಸ್ಸಿನಂತೆ ಯೋಜನಾ ಕಾರ್ಮಿಕರನ್ನು (ಅಧಿಕೃತವಾಗಿ) ಕಾರ್ಮಿಕರು ಎಂದು ಖಾಯಂ ಮಾಡಿ. ಪ್ರತಿ ತಿಂಗಳಿಗೆ 21000 ರೂ. ಕನಿಷ್ಟ ವೇತನ ಪಾವತಿಸಿ, ಮಾಸಿಕ ಪಿಂಚಣಿ 10,000 ರೂ. ನೀಡಿ. ಎಲ್ಲಾ ಯೋಜನಾ ಕಾರ್ಗೂಮಿಕರಿಗೂ ಇಎಸ್.ಐ ಮತ್ತು ಪಿಎಫ್ ನೀಡಿ. ಕ್ರೂಢೀಕರಣದ ಹೆಸರಿನಲ್ಲಿ ಕಾರ್ಮಿಕರ ಕಾನೂನುಗಳನ್ನು ಮಾಲಿಕರ ಪರವಾಗಿ ಬದಲಾಯಿಸುವ, ಕೋವಿಡ್ ಅವಧಿಯ ನೆಪವೊಡ್ಡಿ ಕೆಲಸದ ಅವಧಿಯನ್ನು ಹೆಚ್ಚಿಸುವ ಮತ್ತು ಕಾರ್ಮಿಕರ ಕಾಯ್ದೆಗಳನ್ನೇ ಸ್ಥಗಿತಗೊಳಿಸುವ ಕ್ರಮವನ್ನು ಕೈಬಿಡಿ. ಯೋಜನಾ ಕೆಲಸಗಾರರನ್ನು ಕಾರ್ಮಿಕರೆಂಬ ಶ್ರೇಣಿಗೆ ಸೇರಿಸಿ.ಆದಾಯ ತೆರಿಗೆ ಪಾವತಿಸಲಾಗದ ಎಲ್ಲಾ ಬಡ ಕುಟುಂಬಗಳಿಗೆ 6 ತಿಂಗಳ ಕಾಲ ಪ್ರತಿ ತಿಂಗಳಿಗೆ 7500 ರೂ. ನೀಡಿ. ಅವಶ್ಯಕತೆ ಇದ್ದವರಿಗೆಲ್ಲ ಉಚಿತವಾಗಿ ರೇಷನ್ ಮತ್ತು ಆಹಾರ ಧಾನ್ಯ ನೀಡಿರಿ. ಕೆಲಸದಲ್ಲಿದ್ದಾಗ ಸೋಂಕಿತರಾಗುವ ಎಲ್ಲ ಕಾರ್ಮಿಕರಿಗೂ ಕನಿಷ್ಟ 10 ಲಕ್ಷ ರೂ. ಪರಿಹಾರ ನಿಧಿಯನ್ನು ನೀಡಿ. ಮಧ್ಯಾಹ್ನದೂಟ (ಅಕ್ಷರದಾಸೋಹ ಬಿಸಿಯೂಟ) ಕಾರ್ಮಿಕರಿಗೆ ಬೇಸಿಗೆ ರಜಾ ಅವಧಿಯನ್ನೂ ಒಳಗೊಂಡು ಶಾಲೆ ಮುಚ್ಚಿರುವ ಸಂದರ್ಭದಲ್ಲಿ ಮಾಸಿಕ 10,000 ರೂ. ಪಾವತಿಸಿ. ಅಕ್ಷರ ದಾಸೋಹದಲ್ಲಿ ಕೇಂದ್ರೀಕೃತ ಅಡುಗೆ ಪದ್ಧತಿ ಮತ್ತು ಗುತ್ತಿಗೆ ಪದ್ಧತಿ ಜಾರಿ ಮಾಡಬಾರದು.ರಾಜ್ಯದಲ್ಲಿ ಬಿಸಿಯೂಟ ನೌಕರರಿಗೆ 2020 ಎಪ್ರಿಲ್ ನಿಂದ ವೇತನ ಪಾವತಿಸಿ, ಕ್ವಾರೈಂಟೆನ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ವೇತನ ಪಾವತಿ ಕೂಡಲೇ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿ.ಐ.ಟಿ.ಯು. ಚಿತ್ತಾಪೂರ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣಾ.ಸಿ. ಹೊನಗುಂಟಾ,ಶೇಖಮ್ಮ ಕುರಿ, ರಾಘವೇಂದ್ರ ಎಮ್.ಜಿ, ಜಗನ್ನಾಥ.ಎಸ್. ಹೆಚ್,ರಾಯಪ್ಪ ಹುರಮುಂಜಿ, ತಿಮ್ಮಯ್ಯ ಬಿ. ಮಾನೆ,ರುದ್ರಮ್ಮ, ಸಂಪತ್ಕುಮಾರಿ, ಸಂಪತ್ತಬಾಯಿ, ಜ್ಯೋತಿ, ಯಲ್ಲಮ್ಮ, ಸಕ್ಕುಬಾಯಿ, ಸೇರಿದಂತೆ ಆಶಾ, ಅಂಗನವಾಡಿ, ಬಿಸಿಯೂಟದ ಕಾರ್ಯಕರ್ತರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…