ಬಿಸಿ ಬಿಸಿ ಸುದ್ದಿ

ವಾಡಿ ಜಲ ಶುದ್ಧೀಕರಣ ಘಟಕದಿಂದ ಕಲುಷಿತ ನೀರು!

ವಾಡಿ: ತುಕ್ಕು ಹಿಡಿದ ಮೋಟಾರು ಯಂತ್ರಗಳು. ವರ್ಷದ ಹಿಂದೆ ನಿಷ್ಕ್ರೀಯಗೊಂಡ ಮೂರು ಪಿಎಸಿ ಪೌಡರ್ ಮಿಶ್ರಣ ಘಟಕ, ನಾಲ್ಕು ವರ್ಷಗಳ ಹಿಂದೆಯೇ ಕೆಟ್ಟು ಕೆರಹಿಡಿದುಹೋದ ಕ್ಲೋರಿನೇಷನ್ ಯಂತ್ರಗಳು. ಆಲಂ ಮತ್ತು ಬ್ಲೀಚಿಂಗ್ ಪೌಡರ್ ನೇರವಾಗಿ ನೀರಿಗೆ ಎಸೆದು ಸಂಪ್ರದಾಯ ಪೂರೈಸುವ ಸಿಬ್ಬಂದಿಗಳು. ಆಲಂ ಕೋಣೆಯಲ್ಲಿ ನಾಯಿಗಳ ಮಲ ಮೂತ್ರ. ಬಳಕೆಯಾಗದೆ ಐದು ವರ್ಷಗಳಿಂದ ಬೀದಿಗೆ ಬಿದ್ದ ಎರಡು ಕ್ಲೋರಿನೇಷನ್ ಸೆಲ್‌ಗಳು. ರಿಪೇರಿ ಭಾಗ್ಯ ಕಳೆದುಕೊಂಡ ನೀರು ಸರಬರಾಜು ಮೋಟಾರ್ ಯಂತ್ರ. ಜಲ ಶುದ್ಧೀಕರಣ ಘಟಕದಲ್ಲಿ ಸಿಗಲಿಲ್ಲ ಕುಡಿಯಲು ಶುದ್ಧ ನೀರು!.

ಹೀಗೆ ಸಂಪೂರ್ಣ ನಿಷ್ಕ್ರೀಯಗೊಂಡು ನಿಂತಿದ್ದ ವಾಡಿ ನಗರದ ಪುರಸಭೆಗೆ ಸೇರಿದ ಕುಂದನೂರು ಭೀಮಾನದಿ ದಡದಲ್ಲಿರುವ ಜಲ ಶುದ್ಧೀಕರಣ ಘಟಕ್ಕಕ್ಕೆ ರವಿವಾರ ದಿಢೀರ್ ಭೇಟಿ ನೀಡಿದ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ನೇತೃತ್ವದ ನಾಯಕರ ತಂಡ, ಅಧಿಕಾರಿಗಳ ದೀರ್ಘ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿತು. ಶುದ್ಧ ನೀರಿನ ಹೆಸರಿನಲ್ಲಿ ಸಾರ್ವಜನಿಕರ ಹಣ ಹೇಗೆ ಲೂಟಿಯಾಗುತ್ತಿದೆ ಎಂಬುದನ್ನು ಕಣ್ಣಾರೆ ಕಂಡು ದಂಗಾದರು. ಪ್ರತಿ ವರ್ಷ ಜಲ ಶುದ್ಧೀಕರಣ ಘಟಕಕ್ಕೆ ರೂ.೭೦ ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗುತ್ತಿದ್ದರೂ ಜನತೆಗೆ ಕಲುಷಿತ ನೀರನ್ನೇ ಪೂರೈಕೆ ಮಾಡುತ್ತಿರುವ ಪುರಸಭೆ ಅಧಿಕಾರಿಗಳ ಕ್ರಮದ ವಿರುದ್ಧ ಸಿಡಿಮಿಡಿಗೊಂಡರು.

ಕಲುಷಿತ ಜಲ ಶುದ್ಧೀಕರಣಕ್ಕೆ ಬೇಕಾದ ಎಲ್ಲಾ ಯಂತ್ರೋಪಕರಣಗಳು ರಿಪೇರಿ ಮಾಡಿಸಲಾಗಷ್ಟು ಹಾಳಾಗಿವೆ. ಯಂತ್ರದ ಮೂಲಕ ನೀರಿಗೆ ಮಿಶ್ರಣ ಮಾಡಬೇಕಾದ ಆಲಂ ಅನ್ನು ಅವೈಜ್ಞಾನಿಕವಾಗಿ ನೀರಿಗೆ ಹಾಕಲಾಗುತ್ತಿದೆ. ಮೂರು ಪದರಿನ ಮರಳಿನಲ್ಲಿ ನೀರು ಸಾಗಿ ಬರಬೇಕಾದ ಘಟಕದ ರೀತಿ ಸರಿಯಾಗಿಲ್ಲ. ನದಿಯಿಂದ ಘಟಕದಲ್ಲಿ ಸಂಗ್ರಹಗೊಳ್ಳುವ ನೀರನ್ನೇ ನೇರವಾಗಿ ಬಡಾವಣೆಗಳಿಗೆ ತಲುಪಿಸಲಾಗುತ್ತಿದೆ. ಜನರು ಮಾತ್ರ ಅಶುದ್ಧ ನೀರನ್ನೇ ಕುಡಿದು ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಘಟಕದ ದುಸ್ಥಿತಿ ನೋಡಿದರೆ ಜಲ ಶುದ್ಧೀಕರಣದ ಹೆಸರಿನಲ್ಲಿ ಪ್ರತಿ ವರ್ಷ ಕೋಟಿಗಟ್ಟಲೇ ಹಣ ದುರ್ಬಳಕೆಯಾಗುತ್ತಿದೆ. ಈ ಕುರಿತು ತನಿಖೆಯಾಗಬೇಕು. ನಗರದ ವಿವಿಧ ಬಡಾವಣೆಗಳಲ್ಲಿರುವ ನೀರಿನ ಟ್ಯಾಂಕ್‌ಗಳ ಸ್ವಚ್ಚತೆ ಮರೆತಿರುವ ಅಧಿಕಾರಿಗಳು, ಜನರ ಹೊಟ್ಟೆಗೆ ರಾಡಿ ನೀರು ಹಾಕುತ್ತಿದ್ದಾರೆ. ಕೂಡಲೇ ವಾಡಿ ಜಲ ಶುದ್ಧೀಕರಣ ಘಟಕಕ್ಕೆ ನೂತನ ಯಂತ್ರೋಪಕರಣ ಅಳವಡಿಕೆಯಾಗಬೇಕು.

ವಾರದಲ್ಲಿ ವಾಡಿ ಜನತೆಗೆ ಶುದ್ಧ ನೀರು ಪೂರೈಕೆಯಾಗದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಎಚ್ಚರಿಕೆ ನೀಡಿದರು. ಪಕ್ಷದ ಸದಸ್ಯರಾದ ವೆಂಕಟೇಶ ದೇವದುರ್ಗಾ, ಮಲ್ಲಿನಾಥ ಹುಂಡೇಕಲ್, ಅರುಣಕುಮಾರ ಹಿರೇಬಾನರ್ ಈ ಸಂದರ್ಭದಲ್ಲಿ ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago