ಸುರಪುರ: ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದ ಛಾಯಾ ಭಗವತಿ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಕುರಿ ಮೇಯಿಸಲು ಹೋಗಿ ಕೃಷ್ಣಾ ನದಿ ಪ್ರವಾಹದಿಂದ ಕಳೆದ ಐದು ದಿನಗಳಿಂದ ಗುಡ್ಡದಲ್ಲಿಯೇ ಕಾಲಕಳೆದಿದ್ದ ಕುರಿಗಾಹಿಯನ್ನು ಎನ್‌ಡಿಆರ್‌ಎಫ್ ತಂಡ ರಕ್ಷಿಸಿದ ಘಟನೆ ನಡೆದಿದೆ.
ಕುರಿಗಾಹಿ ಟೋಪಣ್ಣ ಎನ್ನುವವರು ಕುರಿ ಮೇಯಿಸಲು ಗುಡ್ಡದಲ್ಲಿ ಹೋದಾಗ ಪ್ರವಾಹ ಬಂದಿದ್ದರಿಂದ ಗುಡ್ಡದ ಸುತ್ತಲು ನೀರು ಸುತ್ತುವರೆದಿದ್ದು ಆಚೆ ಬರಲಾಗದೆ ಕಳೆದ ಐದು ದಿನಗಳಿಂದ ಗುಡ್ಡದಲ್ಲಿ ಸಿಲುಕಿದ್ದ.ಈ ಸುದ್ದಿ ತಿಳಿದು ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ಸುಪುತ್ರ ಮಣಿಕಂಠಗೌಡ ಛಾಯಾ ಭಗವತಿ ದೇವಸ್ಥಾನದ ಬಳಿಯಿಂದ ಡ್ರೋಣ್ ಕ್ಯಾಮರಾ ಬಳಸಿ ಗುಡ್ಡದಲ್ಲಿ ಕುರಿಗಾಹಿ ಇರುವುದನ್ನು ಶನಿವಾರ ಪತ್ತೆ ಹಚ್ಚಲಾಗಿತ್ತು.
ನಂತರ ಶಾಸಕ ರಾಜುಗೌಡ ಕಾಳಜಿವಹಿಸಿ ಎನ್‌ಡಿಆರ್‌ಎಫ್ ತಂಡವನ್ನು ತರಿಸಿ ರವಿವಾರ ಮುಂಜಾನೆ ಹನ್ನೊಂದು ಗಂಟೆಯ ವೇಳೆಗೆ ಕುರಿಗಾಹಿಯನ್ನು ಕರೆತರುವ ಕಾರ್ಯಾಚರಣೆ ಆರಂಭಿಸಲಾಗಿತ್ತು.ಅದರಂತೆ ಎನ್‌ಡಿಆರ್‌ಎಫ್ ತಂಡ ಗುಡ್ಡದಲ್ಲಿದ್ದ ಕುರಿಗಾಹಿ ಟೋಪಣ್ಣನನ್ನು ಕರೆತರಲು ಹೋಗಿತ್ತು.ಆದರೆ ೨೦೦ಕ್ಕೂ ಹೆಚ್ಚಿನ ಕುರಿಗಳನ್ನು ಬಿಟ್ಟು ಬರಲು ಟೋಪಣ್ಣ ಒಪ್ಪದಿದ್ದಾಗ ತಂಡ ಹೇಗೊ ಮನವೊಲಿಸಿ ಟೋಪಣ್ಣ ಹಾಗು ಜೊತೆಯಲ್ಲಿದ್ದ ಶ್ವಾನವನ್ನು ಕರೆತರಲಾಯಿತು.
ಕುರಿಗಾಹಿ ಟೋಪಣ್ಣನನ್ನು ಕರೆತರುತ್ತಿದ್ದಂತೆ ಜನರಲ್ಲಿ ಹರ್ಷ ಉಕ್ಕಿಬಂತು.ಎಲ್ಲರು ಎನ್‌ಡಿಆರ್‌ಎಫ್ ತಂಡದ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಜಯಕಾರ ಹಾಕಿದರು.ನಂತರ ಶಾಸಕ ರಾಜುಗೌಡ ಎಲ್ಲಾ ಎನ್‌ಡಿಆರ್‌ಎಫ್ ತಂಡದ ಸದಸ್ಯರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಡ್ರೋಣ್ ಕ್ಯಾಮರಾ ಮೂಲಕ ಕುರಿಹಾಗಿಯನ್ನು ಪತ್ತೆ ಹಚ್ಚಿದ ಶಾಸಕರ ಸುಪುತ್ರ ಮಣಿಕಂಠಗೌಡನ ಶ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು ತಾಲೂಕು ಪಂಚಾಯತಿ ಇಒ ಅಂಬ್ರೇಶ ಹಾಗು ಪೊಲೀಸ್ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.ಇಡೀ ರಾಜ್ಯದ ಜನರ ಗಮನ ಸೆಳೆದಿದ್ದ ಕುರಿಗಾಹಿಯ ಸಂಗತಿ ಭಾನುವಾರ ಸುಖಾಂತ್ಯ ಕಂಡಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…