ಬಿಸಿ ಬಿಸಿ ಸುದ್ದಿ

ಅಗಲಿದ ಸಾಹಿತ್ಯ ದಿಗ್ಗಜರಿಗೆ, ಶಹಾಪುರ ಕಸಾಪ ನುಡಿ ನಮನ

ಶಹಾಪುರ:  ತಮ್ಮ ಆಲೋಚನಾ ಕ್ರಮ,ವೈಚಾರಿಕತೆಯ ಚಿಂತನೆಗಳು ಹಾಗೂ ಬರಹಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ ಕಲೆ,ಸಾಹಿತ್ಯ,ಸಂಸ್ಕೃತಿ ಶ್ರೀಮಂತಗೊಳಿಸಿ ಇತ್ತೀಚೆಗೆ ನಮ್ಮಿಂದ ಅಗಲಿದ ದಿಗ್ಗಜರನು ಕಳೆದುಕೊಂಡು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.

ನಗರದ ದೇಶಮುಖ್ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಇತ್ತೀಚೆಗೆ ಅಗಲಿದ,ಕಲಬುರಗಿಯ ಸಾಹಿತ್ಯ ದಿಗ್ಗಜರಾದ ಶ್ರೀಮತಿ ಗೀತಾ ನಾಗಭೂಷಣ ಸುರಪುರದ ಎ.ಕೃಷ್ಣ ಮಾಜಿ ಸಚಿವ ಹಾಗೂ ಸಾಂಸ್ಕೃತಿಕ ಲೋಕದ ರಾಯಭಾರಿ ರಾಜಾ ಮದನಗೋಪಾಲ ನಾಯಕ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಖ್ಯಾತ ಕಥೆಗಾರರು ಹಾಗೂ ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನ್ಕಲ್ ಮಾತನಾಡಿ ಗೀತಾ ನಾಗಭೂಷಣ್ ಅವರ ಸಾಹಿತ್ಯ ಶ್ರೇಷ್ಠವಾದದ್ದು,ಕಿತ್ತು ತಿನ್ನುವ ಬಡತನ,ಅಸಹಾಯಕತೆ,ಹೆಣ್ಣಿನ ಶೋಷಣೆಯ ಕುರಿತು ಧ್ವನಿ ಎತ್ತಿದ್ದರು ಹಾಗೂ ಸಮಾಜದ ಕುರಿತು ಅಪಾರ ಕಾಳಜಿ ಹೊಂದಿದ್ದು ತಮ್ಮ ಹೋರಾಟ ಮನೋಭಾವ ಹಾಗೂ ಬರವಣಿಗೆಯ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲಿ ದವರಲ್ಲಿ ಇವರು ಪ್ರಮುಖರು ಎಂದು ಹೇಳಿದರು.

ಕನ್ನಡ ಪಂಡಿತರು ಹಾಗೂ ಹಿರಿಯ ಸಾಹಿತಿಗಳಾದ ಡಾ: ಅಬ್ದುಲ್ ಕರೀಂ ಕನ್ಯಾಕೊಳುರು ಮಾತನಾಡಿ ಎ.ಕೃಷ್ಣ ಅವರು ಬಹಳ ಮೃದು ಸ್ವಭಾವದ ಹಿರಿಯ ಸಾಹಿತಿಗಳ ಲ್ಲೊಬ್ಬರಾಗಿದ್ದುರು.ಅಲ್ಲದೆ ಅಪಾರ ಶಿಷ್ಯಂದಿರ ಬಳಗವೇ ಹೊಂದಿದ್ದರು,ಇವರು ಷಟ್ಪದಿ, ರಗಳೆ,ಕಂದಪದ್ಯ,ಚಂಪೂಕಾವ್ಯ, ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ ಈ ನಾಡಿಗೆ ನೀಡಿದ್ದಾರೆ ಎಂದು ಹೇಳಿದರು.

ಪ್ರಗತಿಪರ ಚಿಂತಕ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ ರಾಜಾ ಮದನ ಗೋಪಾಲ ನಾಯಕ್ ಅವರು ರಾಜಕಾರಣಿಯಾಗಿದ್ದರೂ ಕೂಡ ಸಾಮಾನ್ಯ ಜನರೊಂದಿಗೆ ಸರಳತೆಯಿಂದ ಬೆರೆಯುತ್ತಿದ್ದರು ಇವರಗೆ ಕಲೆ,ಸಾಹಿತ್ಯ,ಸಂಗೀತ ಎಂದರೆ ಪಂಚಪ್ರಾಣ ಇವರು ಸದಾ ಪ್ರೋತ್ಸಾಹಕರಾಗಿ ಎಲ್ಲರನ್ನೂ ಗುರುತಿಸಿ ಗೌರವಿಸುವ ಗುಣ ಹೊಂದಿದ್ದರೂ ಇಂಥ ವ್ಯಕ್ತಿಗಳು ನಾಡಿನಲ್ಲಿ ದೊರೆಯುವುದು ಅಪರೂಪ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ, ಗುರುಬಸಯ್ಯ ಗದ್ದುಗೆ,ಡಾ: ಮೊನಪ್ಪ ಶಿರವಾಳ,ನೀಲಕಂಠ ಬಡಿಗೇರ್,ಸಾಯಬಣ್ಣ ಮಡಿವಾಳಕರ್,ಶಿವಶರಣಪ್ಪ ಕಾಮಾ ಸಣ್ಣ ನಿಂಗಣ್ಣ ನಾಯ್ಕೋಡಿ,ದೇವಿಂದ್ರಪ್ಪ ಕನ್ಯಾಕೋಳೂರ,ಅಕ್ಬರ್ ಹೊಟಗಿ,ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರು, ಪಂಚಾಕ್ಷರಿ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago