ವಾಡಿ: ದೇಶದ ಸ್ವಾತಂತ್ರ್ಯಕ್ಕಾಗಿ ಮೊಟ್ಟ ಬದಲ ಬಾರಿಗೆ ಗಲ್ಲುಗಂಬಕ್ಕೆ ಕೊರಳೊಡ್ಡಿದ ಧೀರ ಹುತಾತ್ಮ ಖುದಿರಾಂ ಬೋಸ್, ಅಗ್ನಿ ಯುಗದ ಹರಿಕಾರರಾಗಿ ಮತ್ತು ಯುವಜನರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿ ಇಂದಿಗೂ ಜೀವಂತವಾಗಿದ್ದಾರೆ ಎಂದು ಎಐಡಿವೈಒ ನಗರ ಸಮಿತಿ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್ ಹೇಳಿದರು.
ಲಾಡ್ಲಾಪುರ ಗ್ರಾಮದಲ್ಲಿ ಎಐಡಿವೈಒ ಕ್ರಾಂತಿಕಾರಿ ಯುವಜನ ಸಂಘಟನೆ ವತಿಯಿಂದ ಏರ್ಪಡಿಸಲಾಗಿದ್ದ ಖುದಿರಾಂ ಬೋಸ್ ಅವರ ೧೧೨ನೇ ಹುತಾತ್ಮ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬ್ರಿಟೀಷರಿಂದ ಭಾರತೀಯರು ಎದುರಿಸುತ್ತಿದ್ದ ಎಲ್ಲಾ ರೀತಿಯ ಶೋಷಣೆಗಳಿಂದ ಮುಕ್ತಗೊಳಿಸುವ ಕನಸು ಕಂಡಿದ್ದರು. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ಅರ್ಪಿಸಲು ಮುಂದೆ ಬಂದ ದೈರ್ಯಶಾಲಿ ಹೋರಾಟಗಾರ ಖುದಿರಾಂ ಅವರ ಸಂಘರ್ಷದ ಜೀವನವನ್ನು ವಿದ್ಯಾರ್ಥಿ ಯುವಜನರು ಆದರ್ಶವಾಗಿ ಸ್ವೀಕರಿಸಬೇಕು. ನಾವಿಂದು ಎದುರಿಸುತ್ತಿರುವ ಸ್ವಾತಂತ್ರ್ಯ ಭಾರತದೊಳಗಿನ ಅನ್ಯಾಯ, ದೌರ್ಜನ್ಯ, ಅಸತ್ಯಗಳ ವಿರುದ್ಧ ಹೋರಾಡಬೇಕಿದೆ. ವೈಜ್ಞಾನಿಕ ಶಿಕ್ಷಣ ಮತ್ತು ಉದ್ಯೋಗ ಹಕ್ಕಿಗಾಗಿ ಚಳುವಳಿ ಕಟ್ಟಲು ಮುಂದಾಗಬೇಕಿದೆ ಎಂದು ಹೇಳಿದರು.
ಯುವಜನ ಮುಖಂಡ ರಾಜು ಒಡೆಯರ ಹಾಗೂ ಎಸ್‌ಯುಸಿಐ ಗ್ರಾಮ ಘಟಕ ಕಾರ್ಯದರ್ಶಿ ಗುಂಡಣ್ಣ ಎಂ.ಕೆ ಮಾತನಾಡಿದರು. ಬಸವರಾಜ ನಾಟೇಕರ, ಮಲ್ಲಣ್ಣ ದಂಡಬಾ, ಅವಿನಾಶ ಒಡೆಯರ, ಸಾಬು ಯಾದವ, ನಾಗರಾಜ ಅಕ್ಕಿ, ಸುನೀಲ ಜಂಗಮ, ಸಾಯಿಬಣ್ಣ ಸುಣಗಾರ, ಬಸವರಾಜ ಪೂಜಾರಿ, ಆಶಪ್ಪ ದಂಡಬಾ, ಚಂದ್ರು ದಂಡಬಾ ಮತ್ತಿತರರು ಪಾಲ್ಗೊಂಡಿದ್ದರು. ಹಳಕರ್ಟಿ ಹಾಗೂ ವಾಡಿ ನಗರದಲ್ಲಿ ಕ್ರಾಂತಿಕಾರಿ ಖುದಿರಾಂ ಬೋಸ್ ಅವರ ಹುತಾತ್ಮ ದಿನಾಚರಣೆ ನಡೆಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…