“ಉಳವೆಯ ಮಹಾತ್ಮೆ” ಕೃತಿಕಾರ ಅರಸ ಸೋದೆಸದಾಶಿವರಾಯ (೧೬೭೪-೯೭) ಕಲ್ಯಾಣಕ್ರಾಂತಿಯ ನಂತರ ಶರಣರ ದಾರಿಯನ್ನು ಗುರುತಿಸಿದ್ದಾರೆ. ಅದರ ಸುಳುಹು ಹಿಡಿದು ಹೊರಟಾಗ, ಕಲಬುರಗಿ ತಾಲ್ಲೂಕಿನ ಫರಹತಾಬಾದ ಬರುತ್ತದೆ. ಊರ ಹೊರಗೆ ಹಾಳಾದ ಗುಡಿ ಕಾಣಿಸುತ್ತದೆ. ಅದನ್ನು ಉಳಿಬಸವಣ್ಣ ಎಂದು ಕರೆಯುತ್ತಾರೆ ಎಂದು ಗ್ರಾಮದ ಹಿರಿಯರೊಬ್ಬರು ಹೇಳಿದರು.
ಈ ಊರಿಗೆ ಮೊದಲು “ಗೀಜಗನಹಳ್ಳಿ” ಎಂದು ಕರೆಯುತ್ತಿದ್ದರು. ಫಿರೋಜಶಾ ಆಡಳಿತದ ನಂತರ ಫರಹತಾಬಾದ, ಫಿರೋಜಾಬಾದ ಹೆಸರುಗಳು ಆದವು ಎಂಬುದನ್ನು ನಾವು ಗಮನಿಸಬಹುದು. ಇದೇ ಗ್ರಾಮದಲ್ಲಿ ವೀರಭದ್ರ ದೇವಾಲಯ ಇದೆ. ಊರ ಹೊರೆಗೆ ವಿರಕ್ತಮಠ ಇದೆ. ಅಲ್ಲಿ ಗವಿ, ಶಿವಲಿಂಗ ಇತ್ಯಾದಿಗಳಿವೆ.
ಫಿರೋಜಾಬಾದ ರಸ್ತೆಯ ಮೇಲೆ ಇರುವ ಖಲಿಫತ್ತುರ್ ರಹಿಮಾನ್ ದರ್ಗಾ ಇದ್ದು, ಈ ಹಿಂದೆ ಇದು ಕಲಿದೇವರಮಠ ಆಗಿತ್ತು ಎಂಬುದಕ್ಕೆ ಅಲ್ಲಿನ ಪಳಿಯುಳಿಕೆಗಳು ನಮಗೆ ಸಾಕ್ಷಿಯಾಗಿವೆ. ದರ್ಗಾದ ಎದುರಿಗೆ ದೊಡ್ಡ ಬಾವಿ ಇದೆ. ಗರ್ಭಗುಡಿ ಇರುವಲ್ಲಿ ಮಜೇರಿ ಇದೆ. ಮಜೇರಿ ದರ್ಗಾದ ನಡುವೆ ಇರಬೇಕು. ಎಡಕ್ಕೆ ನಾಲ್ಕು, ಬಲಕ್ಕೆ ನಾಲ್ಕು ಸೇರಿ ಒಟ್ಟು ೮ ಕೋಣೆಗಳಿವೆ. ದರ್ಗಾಗಳಲ್ಲಿ ಕೋಣೆಗಳಿರುವುದಿಲ್ಲ. ಈಗಲೂ ದರ್ಗಾ ಹೆಸರಲ್ಲಿ ೫೦೦ ಎಕರೆ ಜಮೀನು ಇದೆ.
ದಂಡಗುಂಡ ಮಾರ್ಗವಾಗಿ ಬಂದ ಶರಣರು ಹಾಗೂ ಕಲಬುರಗಿಯಿಂದ ಹೊರಟ ಶರಣರು ಪರಸ್ಪರ ಇಲ್ಲಿಯೇ ಕೂಡಿದರು. ಆಗ ಶರಣರ ದೊಡ್ಡ ಕ್ಯಾಂಪ್ ಇಲ್ಲಿಯೇ ವಾಸ್ತವ್ಯ ಮಾಡಿದ್ದರು ಎಂದು ಹೇಳಬಹುದು. ಈ ದರ್ಗಾದಲ್ಲಿ ಈಗಲೂ ಹಿಂದೂಗಳು ಹಾಗೂ ಮುಸ್ಲಿಂ ಸಮುದಾಯದವರ ಮದುವೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಆಚರಿಸುವುದನ್ನು ಕಾಣಬಹುದು. ಒತ್ತುವರಿ ಮಾಡಿಕೊಂಡಿರುವ ದರ್ಗಾಗಳಲ್ಲಿ ಮಾತ್ರ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಅಲ್ಲಿಂದ ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮಕ್ಕೆ ಬಂದರೆ ಭೀಮಾನದಿ ದಂಡೆಯ ಮೇಲೆ ಹಳೆಯ ಶಿವ ದೇವಾಲಯವಿದ್ದು, ದೇವಸ್ಥಾನದಲ್ಲಿ ಷಣ್ಮುಖ, ಗಣಪತಿ, ವೀರಭದ್ರನ ಮೂರ್ತಿಗಳಿವೆ. ಈ ಊರಿಗೆ ಶರಣ ರೇವಣಸಿದ್ಧರು ಬಂದು ಹೋಗಿರಬೇಕು ಎನ್ನುವುದಕ್ಕೆ ಇಲ್ಲಿ ಒಂದು ಶಾಸನ ದೊರೆಯುತ್ತದೆ. ನದಿ ಪಾತ್ರದಲ್ಲಿ ಕಲ್ಲಿನ ಮಂಟಪ ಇರುವುದನ್ನು ಕಾಣಬಹುದು. ಇಲ್ಲಿಂದ ಅರಳಗುಂಡಗಿಗೆ ಬಂದರೆ ಊರೊಳಗೆ ಮಲ್ಲಿಕಾರ್ಜುನ ದೇವಾಲಯವಿದೆ. ಇದರ ಜೊತೆಗೆ ಸಿದ್ಧರಾಮೇಶ್ವರ ದೇವಾಲಯ ಕೂಡ ಅಲ್ಲಿದೆ.
ಅರಳಗುಂಡಗಿಯಿಂದ ೨ ಕಿ. ಮೀ. ದೂರದಲ್ಲಿ ಕೋಳಕೂರ (ಬೇಚಿರಾಗ) ಗ್ರಾಮ ಇದ್ದಲ್ಲಿ, ಶರಣ ಕೇತಯ್ಯ (ಕ್ಯಾತರಲಿಂಗ) ಹಾಗೂ ಶರಣ ಶಿವಲಿಂಗಪ್ಪನ ದೇವಾಲಯಗಳಿರುವುದನ್ನು ಕಾಣಬಹುದು. ಶರಣರ ಮೇಲೆ ಏರಿ ಬಂದ ಸೈನಿಕರು ಇವರಿಬ್ಬರನ್ನು ಇಲ್ಲಿಯೇ ಕೊಲೆ ಮಾಡಿದರೆಂಬ ಮಾಹಿತಿಗಳು ಇಲ್ಲಿ ದೊರೆಯುತ್ತವೆ. ಈ ದೇವಾಲಯಗಳು ಶರಣರ ಸ್ಮಾರಕಗಳಾಗಿವೆ. ಆಗ ಇಲ್ಲೊಂದು ಊರು ಇತ್ತು. ಆ ಊರು ಹಾಳಾಗಿ ಹೋಗಿದೆ ಎಂಬ ಮೌಖಿಕ ಮಾಹಿತಿ ಉಳಿದುಬಂದಿದೆ.
ಜೇವರ್ಗಿ ತಾಲ್ಲೂಕಿನ ಜೇರಟಗಿಯಲ್ಲಿ ಚೆನ್ನಬಸವಣ್ಣ, ರೇವಣಸಿದ್ಧ, ಮಡಿವಾಳ ಮಾಚಿದೇವ, ಸಿದ್ಧರಾಮ, ಅಕ್ಕನಾಗಮ್ಮ, ನೀಲಾಂಬಿಕೆ, ಗಂಗಾಂಬಿಕೆ ಮುಂತಾದ ಹೆಸರಿನ ಶರಣರ ದೇವಾಲಯಗಳಿವೆ. ಒಟ್ಟಿಗೆ ಐದಾರು ಜನ ಶರಣ-ಶರಣೆಯರ ಸ್ಮಾರಕಗಳಿರುವುದರಿಂದ ಇದನ್ನು ಮರಿಕಲ್ಯಾಣ ಎಂದು ಗುರುತಿಸಲಾಗುತ್ತದೆ. ಸಿದ್ಧರಾಮೇಶ್ವರ ಜಾತ್ರೆಯಲ್ಲಿ ಚೆನ್ನಬಸವಣ್ಣನ ಪಲ್ಲಕ್ಕಿ ಉತ್ಸವ, ಮಡಿವಾಳ ಮಾಚಿದೇವರ ಉತ್ಸವ, ರೇವಣಸಿದ್ಧೇಶ್ವರ ಜಾತ್ರೆ ವೇಳೆಯಲ್ಲಿ ಪಾದುಕೆ ಅರ್ಪಿಸುವ ಸಂಪ್ರದಾಯ ಇರುವುದನ್ನು ನಾವು ಇಂದಿಗೂ ನೋಡಬಹುದು.
ಸೊಲ್ಲಾಪುರದಿಂದ ಹೊರಟಿದ್ದ ಶರಣ ರೇವಣಸಿದ್ಧ ಹಾಗೂ ಸಿದ್ಧರಾಮರು ಇಲ್ಲಿಗೆ ಬಂದು ಶರಣ ಗಣ ಕೂಡಿರಬೇಕು ಎಂದೆನಿಸುತ್ತದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…