ಸೊನ್ನಲಿಗೆ ಸಿದ್ಧರಾಮ: ಒಂದು ಅವಲೋಕನ

 

12ನೇ ಶತಮಾನದ ಶ್ರೇಷ್ಠ ವಚನಕರರಲ್ಲಿ ಸಿದ್ಧರಾಮರ ಹೆಸರು ಚಿರಸ್ಮರಣೀಯವಾದದ್ದು, ಯೋಗಿಯಾಗಿದ್ದರೂ ಸಾಮಾಜಿಕ ಬದ್ಧತೆಗೆ ತೀವ್ರ ಕಳಕಳಿವುಳ್ಳ ಸಮಜಸುಧಾರಕರು ಇವರು. ಕರ್ಮಯೋಗಿ, ಶಿವಯೋಗಿ ವಚನಕಾರನಾಗಿ ಗುರುತಿಸಿಕೊಂಡ ಸೊನ್ನಲಿಗೆ ಸಿದ್ಧರಾಮ, ಮನುಷ್ಯತ್ವವುಳ್ಳ ಬದುಕಿಗೆ ಶರಣಮಾರ್ಗ ಕಲ್ಪಿಸಿಕೊಟ್ಟ ನಿಜಶರಣರು. ಶರಣ ದಂಪತಿಗಳಾದ ಮುದ್ದೇಗೌಡ ಹಾಗೂ ಸುಗ್ಗಲಾದೇವಿಯ ಉದರದಲ್ಲಿ ಜನಿಸಿದ ಇವರು, ಮಹಾರಾಷ್ಟ್ರದ ಸೊಲ್ಲಾಪುರವನ್ನು ಕರ್ಮಭೂಮಿಯಾಗಿಸಿಕೊಂಡು ಸಮಾಜ್ಜೋದ್ಧಾರ್ಮಿಕ ಕಾರ್ಯಗಳಿಂದ ಪ್ರಗತಿಪರ ಚಿಂತಕರೆನಿಸಿಕೊಂಡಿದ್ದಾರೆ.

ಸಿದ್ಧರಾಮರ ಬದುಕಿನಲ್ಲಿ ಮೂರುಜನ ಮಹಾತ್ಮರು ಪ್ರೇರಣಾಶಕ್ತಿಯಾಗಿ ಬೆಳಕು ತೋರಿದ್ದಾರೆ. ಆರಂಭದಲ್ಲಿ ರೇವಣಸಿದ್ಧರು ಸಿದ್ಧರಾಮ ಹುಟ್ಟಿ ಬರಲು ಆಶೀವರ್ಾದ ಭಾಗ್ಯ ಕಲ್ಪಿಸಿಕೊಟ್ಟರೆ, ಆರಾರ್ಧಯದೈವರೆನಿಸಿಕೊಂಡ ಕಪಿಲಸಿದ್ಧ ಮಲ್ಲಿಕಾರ್ಅಜುನ ಅವರಲ್ಲಿ ಚೈತನ್ಯಶಕ್ತಿಯನ್ನು ಕರುಣಿಸುತ್ತಾರೆ. ಬಹುಮುಖ್ಯವಾಗಿ ಅಲ್ಲಮಪ್ರಭುಗಳು ಕರ್ಮಯೋಗಿಯಾಗಿದ್ದ ಸಿದ್ಧರಾಮನನ್ನು ಶಿವಯೋಗಿಯನ್ನಾಗಿ ಪರಿವರ್ತಿಸಿದರು.

ಜಂಗಮಸ್ವರೂಪಿಯಾಗಿದ್ದ ಅಲ್ಲಮಪ್ರಭುಗಳು ಸೊನ್ನಲಿಗಿಗೆ ಆಗಮಿಸಿ ಲೋಕಲ್ಯಾಣ ಕಾರ್ಯದಲ್ಲಿ ತೊಡಗಿದ್ದ ಸಿದ್ಧರಾಮರ ಬಾಹ್ಯ ಚಟುವಟಿಕೆಗಳನ್ನು ಕಂಡು “ಕೆರೆಯ ಕಟ್ಟಿಸುವ ಒಡ್ಡನ ಪ್ರತಾಪವೇನೆಂಬೆನಯ್ಯ…. ನಮ್ಮ ಗುಹೇಶ್ವರನ ನಿಲವನರಿದ ಮರುಳಸಿದ್ಧರಾಮ” ಎಂದು ನೇರವಾಗಿ ಪ್ರಶ್ನಿಸಿಸುತ್ತಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ” ಕೊನೆಯೇ ಇಲ್ಲದ ಸಾಮಾಜಿಕ ಕಾರ್ಯಗಳಿಂದ ನಿಮ್ಮೊಳಗಿನ ಯೋಗ, ಅರಿವಿನ ರತ್ನವನ್ನು ಪಡೆಯಲಾದೀತೆ? ಎಲ್ಲವೂ ನಾನು ಮಾಡಿದ್ದೇನೆಂಬುದು ಸರಿಯೇ? ಎಂಬಿತ್ಯಾದಿಯಾಗಿ ಕೇಳಿ ಸಿದ್ಧರಾಮನನ್ನು ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ಎಚ್ಚರಿಸಿ ಅವನಲ್ಲಿ ಅರುಹಿನ ಕುರುಹು ಮೂಡಿಸುತ್ತಾರೆ. ಸುದೀರ್ಘವಾದ ಸಂವಾದ, ಚಚರ್ೆಯ ನಂತರ ಕೊನೆಗೆ ತನ್ನ ಅರಿವಿನ ಬಾಗಿಲು ತೆರೆದುಕೊಂಡ ಸಿದ್ಧರಾಮ ಎಲ್ಲವನ್ನು ತ್ಯಜಿಸಿ ಅಲ್ಲಮರ ಜೊತೆಯಲ್ಲಿ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಪಯಣ ಬೆಳೆಸಿದ್ದು ಶರಣರ ಇತಿಹಾಸದಿಂದ ಅರಿತುಕೊಳ್ಳಬಹುದಾಗಿದೆ.

ಇಲ್ಲಿ ಗಮನಿಸಬೇಕದ ಸಂಗತಿಯೇನೆಂದರೆ ಸಿದ್ಧರಾಮ, ಅಲ್ಲರೊಂದಿಗೆ ಯಾವ ಮಾರ್ಗವಾಗಿ ಹೊರಟು ಬಸವ ಕಲ್ಯಾಣಕ್ಕೆ ತಲುಪಿದರು? ಎಂಬುದರ ಬಗ್ಗೆ ಖಚಿತವಾದ ಮಾಹಿತಿಗಳು ದೊರೆಯುವುದಿಲ್ಲ. ಆದರೆ ಅವರು ಸಂಚರಿಸಿದ ಕಾಲುದಾರಿಗುಂಟ ಬರುವ ಕೆಲ ಸ್ಥಳಗಳಲ್ಲಿ ಸಿದ್ಧರಾಮ ಹೆಸರಿನ ದೇವಾಲಯಗಳು ನಿರ್ಮಾಣವಾಗಿ ಇಂದಿಗೂ ಸಿದ್ಧರಾಮನ ಇತಿಹಾಸದ ಮೇಲೆ  ಬೆಳಕು ಚೆಲ್ಲುತ್ತವೆ. ಪುರಾಣಿಕತೆಯ ಹಿನ್ನೆಲೆಗಿಂತಲೂ ಜನರಿಂದ ಜನರೆಡೆಗೆ ಹರಿದು ಬಂದ ಆಡು ಮಾತಿನ ಹೇಳಿಕೆಗಳು ಅಂದಿನ ಸಾಂದರ್ಭಿಕ ಸನ್ನಿವೇಶಗಳಿಗೆ ಪೂರಕವೆಂಬಂತೆ ಇಂದಿಗೂ ನಿಜಸ್ಥಿತಿಯಲ್ಲಿ ಅನಾವರಣಗೊಳ್ಳುತ್ತಿರುವುದು ಕುತೂಹಲ ಕೆರಳಿಸುವಂತಿದೆ. ಈ ಹಿನ್ನೆಲೆಯಾಗಿ ಸಾಕ್ಷಿಯಾಗಿ ನಿಂತಿರುವ ಗ್ರಾಮಗಳು ಅಲ್ಲಿನ ದೇವಾಲಯಗಳು ಸಂಚರಿಸಿದ ಮಾರ್ಗಕ್ಕೆ ತೀರಾ ಹತ್ತಿರವೆಂಬಂತೆ ಮಾಹಿತಿ ಒದಗಿಸಿವೆ. ಅಂತಹದ್ದೊಂದು ಸಂಶೋಧನಾ ಸಣ್ಣ ಪ್ರಯತ್ನ ಇಲ್ಲಿದೆ.

ಖಸಗಿಯ ತೊರೆ ಸಿದ್ದಯಪ್ಪ: ಸೊಲ್ಲಾಪುರದ ಒಳಭಾಗದಿಂದ ಬರುವ ಕಚ್ಚಾರಸ್ತೆ (ಕಾಲುದಾರಿ)ಯೊಂದಿಗೆ ಹೊರಟು ಬಂದ ಅಲ್ಲಮ-ಸಿದ್ಧರಾಮರು ಮುಸ್ತಿ (ಮಹಾರಾಷ್ಟ್ರ) ಗ್ರಾಮದ ಮಾರ್ಗವಾಗಿ ಮುರುಮ (ಈಗಿನ ತಾಲ್ಲೂಕು) ಪಟ್ಟಣಕ್ಕೆ, ಮುಂದುವರಿದು ಖಸಗಿ ಗ್ರಾಮಕ್ಕೆ ಬಂದು ಸಮೀಪದಲ್ಲಿರುವ ಬೆಣ್ಣೆತೊರಾ ನದಿಯ ದಂಡೆಯ ಮೇಲೆ ವಿರಮಿಸುತ್ತ ಕೆಲ ಕಾಲ ಅಲ್ಲಿಯೇ ತಂಗಿರಬಹುದೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಅಲ್ಲಿನ ರಮಣೀಯ ಸ್ಥಳದಲ್ಲಿ ಶರಣರ ಪ್ರೇರಣೆಯನ್ನೊಳಗೊಂಡ ಅವರ ಶಿಷ್ಯ ಬಳಗ ದೇವಾಲಯ ನಿರ್ಮಿಸಿದರಂತೆ. ಅದೀಗ ತೊರೆ ಸಿದ್ದಾಯಪ್ಪ ಗುಡುಯೆಂದೇ ಪ್ರಸಿದ್ಧಿ ಪಡೆದಿದ್ದು, 32 ಎಕರೆ ಇನಾಮು ಜಮೀನು ಹೊಂದಿದೆ. ಖಸಗಿ ಗ್ರಾಮದ ಸುಮಾರು 25 ಜನ ಲಿಂಗಾಯತ ಪೂಜಾರಿಗಳು ಸರತಿಯಂತೆ ಪೂಜೆ ಸಲ್ಲಿಸುತ್ತಿದ್ದು, ವರ್ಷಕ್ಕೊಮ್ಮೆ ಸಂಭ್ರಮದಿಂದ ಜಾತ್ರೆ ಆಚರಿಸುತ್ತಾರೆ. ಸಧ್ಯ ಆಳಂದಿಂದ ಉಮಾರ್ಗಕ್ಕೆ ಹೋಗುವ ಖಸಗಿ ನಂತರದ ರಸ್ತೆ ಪಕ್ಕದಲ್ಲಿಯೇ ಇದನ್ನು ಕಾಣಬಹುದಾಗಿದೆ.

ಸುಲ್ತಾನಪುರದ ಸಿದ್ಧರಾಮೇಶ್ವರ ಮಠ:
ಖಸಗಿಯಿಂದ ಹೊರಟ ಈ ಇಬ್ಬರೂ ಕರ್ನಾಟಕವನ್ನು ಪ್ರವೇಶಿಸಿ ಬಂಗರಾಗ, ಆಂದ, ನರೋಣಾ ಮಾರ್ಗವಾಗಿ ಕಲ್ಲಹಂಗರಗಾ, ಖಟಕ್ ಚಿಂಚೋಳಿ (ಸೈಯದ್ ಚಿಂಚೋಳಿ)ಮುಖಾಂತರ ಸುಲ್ತಾನಪುರ (ತಾಜ್ ಸುಲ್ತಾನಪುರ)ತಲುಪಿದ್ದು ಅಲ್ಲಿಯೇ ವಾಸ್ತವ್ಯ ಮಾಡಿದಂತೆ. ಅಲ್ಲಿನ ಭಕ್ತಗಣ ಸಿದ್ಧರಾಮೇಶ್ವರರ ಮೂರ್ತಿಯೊಂದಿಗೆ ಮಠವೊಂದನ್ನು ನಿರ್ಮಿಸಿದರು. ಸಧ್ಯದ ಮಠದ ಉಸ್ತುವಾರಿ ವಹಿಸಿಕೊಂಡಿರುವ 90 ವರ್ಷ ವಯೋಮಾನದ ಅವರು ಮಠದ ಅಧೀನದಲ್ಲಿರುವ 2 ಎಕರೆ 27 ಗುಂಟೆ ಇನಾಮಿ ಜಮೀನುನೊಳಗೆ ಹೂ-ತರಕಾರಿ ಬೆಳೆದು ಪೂಜೆ ಪಾಠಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಬುರಗಿಯ ಆಳಂದ ಚೆಕ್ ಪೋಸ್ಟಿನಿಂದ ಉತ್ತರ ದಿಕ್ಕಿನತ್ತ 5 ಕಿ.ಮೀ. ಅಂತರದಲ್ಲಿರುವ ತಾಜಸುಲ್ತಾಮಪುರ ಗ್ರಾಮ ಸಿದ್ಧರಾಮೇಶ್ವರ ಮಠದ ಹೆಸರಿನಿಂದಲೇ ಪ್ರಸಿದ್ಧವಾಗಿದೆ.

ಬೆಳಮಗಿಯ ಸಿದ್ಧರಾಮೇಶ್ವರ ದೇವಾಲಯ:
ತಾಜಸುಲ್ತಾನಪುರದಲ್ಲಿನ ವಾಸ್ತವ್ಯದ ನಂತರ ಸಿದ್ಧರಾಮರು ಚಿಂಚನಸೂರ ಗ್ರಾಮದ ಮಾರ್ಗವಾಗಿ ಬೋಧನ, ಕಮಲಾನಗರ ಮೂಲಕ ಬೆಳಮಗಿ ಗ್ರಾಮವನ್ನು ಪ್ರವೇಶ ಮಾಡಿದರಂತೆ. ಅಲ್ಲಿಯೂ ಶರಣ ಅನುಯಾಯಿಗಳು ಸಿದ್ಧರಾಮರ ನಿಜಭಕ್ತರಾಗಿ ದೇವಾಲಯ ನಿರ್ಮಿದ್ದಾರೆ. ಈ ದೇವಾಲಯದ ಅರ್ಚಕ ಶ್ರೀ ವೀರಂತಯ್ಯಸ್ವಾಮಿ ಇತ್ತೀಚಿಗಷ್ಟೇ ಲಿಂಗೈಕ್ಯರಾಗಿದ್ದು, ಸದ್ಯ ಅವರ ಸೋದರಳಿಯ ಒದಗಿ ಬಂದ ನಾಲ್ಕು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಈ ದೇವಾಲಯದ ಪುನರ್ನವೀಕರಣಕ್ಕೆ ಮುಂದಾಗಿದ್ದಾರೆ.

ಕಮಲಾಪುರದ ಸಿದ್ಧರಾಮೇಶ್ವರ ದೇವಾಲಯ:
ಆಳಂದ ತಾಲ್ಲೂಕಿನ ವಿ.ಕೆ. ಸಲಗರ, ಮುಗಳಿ ಗ್ರಾಮದಿಂದ ಅಂಬಲಗಾ ಮಾರ್ಗವಾಗಿ ನೇರ ಕಮಲಾಪುರಕ್ಕೆ ತೆರಳಿದ್ದರು ಎನ್ನುವುದಕ್ಕೆ ಸಿದ್ಧರಾಮೇಶ್ವರ ದೇವಾಲಯ ಇರುವುದನ್ನು ಕಾಣಬಹುದಾಗಿದೆ. ಸಿದ್ಧರಾಮನ ಕಂಚಿನ ಮೂರ್ತಿಗಳು ಎರಡೆರಡು ಬಾರಿ ನಾಪತ್ತೆಗೊಂಡಿರುವುದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ. ಈ ಹಿಂದೆ ತಾಡೋಲೆಗಳ ಮೇಲೆ ಬರೆದಿದ್ದ ಕಟ್ಟುಗಳನ್ನು ಅದ್ಯಾರೋ ಸರ್ಕಾರದವರೆಂದು ಸಬೂಬು ಹೇಳಿ ಕೊಂಡೊಯ್ದಿರುವುದನ್ನು ನಿವೃತ್ತ ಶಿಕ್ಷಕ ರಾಮಲಿಂಗಪ್ಪ ಚಿಕ್ಕೇಗೌಡ ಈಗಲೂ ಸ್ಮರಿಸಿಕೊಳ್ಳುತ್ತಾರೆ.

ನಂತರದ ಅವಧಿಯಲ್ಲಿ ಸೊಲ್ಲಾಪುರದಿಂದ ದಕ್ಷಿಣಾಭಿಮುಖವಾಗಿ ಪ್ರಯಾಣ ಕೈಗೊಂಡಿರಬಹುದೆಂದು ಶರಣರ ಇತಿಹಾಸವನ್ನು ಕೆದಕುವ ಸುಲ್ತಾನಪುರದ ಸಿದ್ಧರಾಮಯ್ಯ ಸ್ವಾಮಿ ಅವರು, ಸಿದ್ಧರಾಮರು ವಿಜಯಪುರ, ದೇವದುರ್ಗ, ತುಮಕೂರು, ತಿಪಟೂರಗಳಲ್ಲಿ ನೆಲೆಸಿರಬಹುದೆಂದು ಊಹಿಸುತ್ತಾರೆ. ಅದಕ್ಕೆ ಪೂರಕವಾಗಿ ಅಲ್ಲಿ ಸಿದ್ಧರಾಮೇಶ್ವರ ದೇವಾಲಯಗಳಿರುವುದನ್ನು ತುಮಕೂರಿನಿಂದ ತಿಪಟೂರ ರಸ್ತೆಯಲ್ಲಿನ ಗುರು ಸಿದ್ಧರಾಮೇಶ್ವರ ತಪೋವನ-ದೇವಾಲಯದ ಜಾತ್ರೆ 12 ವರ್ಷಕ್ಕೊಮ್ಮೆ ಆಚರಿಸಲ್ಪಡುತ್ತದೆ ಎಂದು ನಿಖರವಾಗಿ ಹೇಳುತ್ತಾರೆ. ಇವುಗಳ ಹೊರತಾಗಿಯೂ ರಾಜ್ಯಾದ್ಯಂತ ದೇವಾಲಯಗಳನ್ನು ನಿಮರ್ಿಸಿದ್ದುಂಟು. ಬಸವಕಲ್ಯಾಣ ಸುತ್ತಲಿನ ಶಿವಪುರ, ಬೇಲೂರ, ಕಳಗಾಪುರ, ನಿರಾಣಗಳಲ್ಲದೆ ಸೊಲ್ಲಾಫುರ ವ್ಯಾಪ್ತಿಯಲ್ಲಿ ಬರುವ ಅಕ್ಕಲಕೋಟೆ, ಗಳೂರಗಿ,ಕರ್ಜಗಿ ಮತ್ತು ತೋಳ್ನೂರುಗಳಲ್ಲಿ ಇಂದಿಗೂ ಸಿದ್ಧರಾಮೇಶ್ವರ ದೇವಾಲಯಗಳಿರುವುದನ್ನು ಗಮನಿಸಬಹುದು. ಹಾಸನ, ಶಿವಮೊಗ್ಗದವರೆಗೂ ಸಿದ್ಧರಮರ ಶಿಷ್ಯ ಬಳಗ ಸಂಪರ್ಕದಲ್ಲಿತ್ತೆಂದು ತಿಳಿದು ಬರುತ್ತದೆ.

ಈ ಹಿನ್ನೆಲೆಯಲ್ಲಿ ಸೊಲ್ಲಾಪುರದಿಂದ ಕಮಲಾಪುರದವರೆಗೂ ಪಾದಾಚಾರಿಯಾಗಿ ಸಂಚಾರ ಕೈಗೊಂಡ ಸಿದ್ಧರಾಮ ಮುಂದೆ ತನಗೆ ತೋರಿದ ಮಾರ್ಗದೊಂದಿಗೆ ಬಸವಕಲ್ಯಾಣ ತಲುಪಿರಬಹುದು. ಆದರೆ ಅಲ್ಲಮರಿಂದ ಗುಡಿ-ಗುಂಡಾರ ಪರಿಕಲ್ಪನೆಯನ್ನೇ ಕಿತ್ತೆಸೆದ ಸಿದ್ಧರಾಮ ಮತ್ತೆ ಮತ್ತೆ ಅವುಗಳ ನಿರ್ಮಾಣಕ್ಕೆ ಒಲವು ತೋರಿದ್ದರ ಕಾರಣವೇನು? ಎಂಬುದನ್ನು ಸಂಶೊಧಕರು ಅವಲೋಕಿಸಬೇಕಿದೆ. ಒಟ್ಟಾರೆಯಾಗಿ ಸಿದ್ಧರಾಮನಿಗೂ, ಕಲ್ಯಾಣ ಕನರ್ಾಟಕದ ಈ ಪ್ರದೇಶಕ್ಕೂ ಅವಿನಾಭಾವ ಸಂಬಂಧವಿದೆ ಎಂಬುದನ್ನು ಮೇಲಿನ ಈ ದೇವಾಲಯಗಳಿಂದ ತಿಳಿದುಬರುತ್ತದೆ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

11 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

14 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

18 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

19 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

21 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420