ಅಂಕಣ ಬರಹ

ಶರಣರ ಉಳವಿ ದಾರಿ: ಹಳಿಯಾಳದಿಂದ  ಉಳವಿಯೆಡೆಗೆ

ಶರಣರು ಕಾರವಾರ ಜಿಲ್ಲೆಯ ಸುಮಾರು ೩೫-೪೦ ಊರುಗಳ ಮೂಲಕ ಹಾದು ಹೋಗಿ ಉಳವಿ ತಲುಪಿರಬೇಕು ಎನಿಸುತ್ತದೆ.  ಉಳವಿ ಚೆನ್ನಬಸವಣ್ಣನ ಜಾತ್ರೆ, ರಥ, ರಥೋತ್ಸವ, ಗುಡಿ ಕಟ್ಟಿಸಿದ ಸೋದೆ ಸದಾಶಿವರಾಯ ಭಕ್ತಿಯುಳ್ಳ ಅರಸ. ಸುಂಸ್ಕೃತ ಕವಿಯಾಗಿದ್ದರು. ಶರಣರು ಇಲ್ಲಿ ಅಡ್ಡಾಡಿದ ಎಲ್ಲ ಸ್ಥಳಗಳ ಮಾಹಿತಿಗಳನ್ನು ಅವರು ೩೫೦ ವರ್ಷಗಳ ಹಿಂದೆಯೇ ತಮ್ಮ “ಉಳುವೆಯ ಮಹಾತ್ಮೆ” ಕೃತಿಯಲ್ಲಿ ದಾಖಲಿಸಿರುವುದನ್ನು ನಾವು ಕಾಣಬಹುದು.

ಕಾಲವು ಬರೆ ಕಲ್ಯಾಣ
ಲೀಲೆಯ ಭೋಗಗಳು ತೀರೆ ಚೆನ್ನಬಸವಾದಿ
ಮೂಲ ಗಣಂಗಳು ಎಲ್ಲರು
ಆಲೋಚಿಸಿ ಪುಣ್ಯಭೂಮಿ ಉಳುವೆಯು ಎಂದು|
-ಸೋದೆ ಸದಾಶಿವರಾಯ (೧೬೭೪-೯೨), ಉಳವೆಯ ಮಹತ್ಮೆ ಪು.೬)

ಕಲ್ಯಾಣದ ಋಣ ತೀರಿತು. ಸಾಕಿನ್ನೂ ಇದನ್ನು ಬಿಟ್ಟು ಪುಣ್ಯಭೂಮಿ ಉಳವಿಯೆಡೆಗೆ ಹೋಗೋಣ ಎಂದು ನಿರ್ಧರಿಸಿದ ಶರಣರು ಉಳುವಿಗೆ ಹೊರಟರು ಎಂಬುದು ವಚನ, ಪುರಾಣ, ಕಾವ್ಯಗಳಿಂದ ತಿಳಿದು ಬರುತ್ತದೆ. ಆದರೆ ಉಳವಿ ಕ್ಷೇತ್ರದರ್ಶನವನ್ನು ನಾವು ಸೋದೆ ಸದಾಶಿವರಾಯರ “ಉಳವೆಯ ಮಾಹತ್ಮೆ” ಕೃತಿಯಿಂದ ಪಡೆದುಕೊಳ್ಳುವುದು ಒಳಿತು.

ಹಳಿಯಾಳ, ಸಾಂಬ್ರಾಣಿ: ಕಾರವಾರ ಜಿಲ್ಲೆಯಲ್ಲಿ ಬರುವ ಹಳಿಯಾಳದಲ್ಲಿ ಚೆನ್ನಬಸವಣ್ಣನವರ ದೊಡ್ಡ ದೇವಾಲಯವಿದೆ. ಇದೇ ತಾಲ್ಲೂಕಿನ ಸಂಬ್ರಾಣಿಯಲ್ಲಿ ಬಸವೇಶ್ವರರ ಹೆಸರಿನಲ್ಲಿದ್ದ ಹಳೆಯ ದೇವಾಲಯ ಜಾಗದಲ್ಲಿ ಇದೀಗ ನೂತನ ದೇವಸ್ಥಾನ ನಿರ್ಮಿಸಿಕೊಂಡಿದ್ದಾರೆ. ಊರ ಹೊರಗೆ ಕಲ್ಮೇಶ್ವರ ದೇವಸ್ಥಾನವಿದೆ. ಊರಲ್ಲಿ ಬಸವಧರ್ಮಿಷ್ಟರು ಕಮ್ಮಿಯಿದ್ದರೂ ಎಲ್ಲರೂ ಭsಕ್ತಿಯಿಂದ ನಡೆದುಕೊಳ್ಳುತ್ತಾರೆ. ಎಲ್ಲ ವಿದ್ವಾಂಸರು ಉಲ್ಲೇಖಿಸುವಂತೆ ಸಾಂಬ್ರಾಣಿ ಶರಣರ ಚರಿತ್ರೆಗೆ ಸಂಬಂಧಿಸಿದ ಪ್ರಮುಖ ಊರಾಗಿದೆ. ಆದರೂ ಶರಣರ ಬಗೆಗೆ ಇಲ್ಲಿನ ಜನತೆಗೆ ಮಾಹಿತಿಯ ಕೊರತೆಯಿರುವುದನ್ನು ನಾವು ಕಾಣಬಹುದು.

ಯಲ್ಲಾಪುರ: ಶರಣರಿಗೆ ಸಂಬಂಧಿಸಿದ ಮುಖ್ಯವಾದ ಕೇಂದ್ರ ಇದಾಗಿದ್ದು, ಶರಣರು ಇಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ಅದರ ಪ್ರತೀಕವಾಗಿ ಚೆನ್ನಬಸವಣ್ಣನವರ ದೇವಸ್ಥಾನವಿದೆ. ವೀರಭದ್ರೇಶ್ವರ ದೇವಾಲಯವಿದ್ದು, ಲಿಂಗಪೀಠದ ಮೇಲೆ ಕುಳಿತ ವೀರಭದ್ರೇಶ್ವರನ ಮೂರ್ತಿಯಿದೆ. “ಎಲ್ಲ ಪ್ರಮಥ ಗಣಂಗಳು ಎಲ್ಲಾಪುರದಲ್ಲಿ ಯೋಚಿಸಿ ತಾವು….ಉಲ್ಲಾಸದಿ ತೃಪ್ತಿಪಡಿಸಿ ಹೋದರು ಮುಂದೆ” ಶರಣರು ಇಲ್ಲಿಗೆ ಬಂದಾಗ ಇಲ್ಲಿನ ಜನ ಅವರಿಗೆ ಪ್ರಸಾದ ಬಡಿಸಿದರು. ನಂತರ ಶರಣರು ಹರುಷದಿಂದ ಮುಂದೆ ನಡೆದರು ಎಂಬುದು ಗೊತ್ತಾಗುತ್ತದೆ.

ಜಾಂಗಲ-ಜಗಳಬೇಟ: ಜೋಯಿಡಾ ತಾಲ್ಲೂಕಿನ ಈ ಊರು ಈಗ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಊರು ಸ್ಥಳಾಂತರಗೊಂಡಿರುವುದನ್ನು ನಾವು ಕಾಣಬಹುದು. ಇಲ್ಲಿಂದ ೧ ಕಿ.ಮೀ. ದೂರದಲ್ಲಿ ಪುರಾತನವಾದ ರಾಮೇಶ್ವರ ಮಂದಿರವಿದೆ. ಅದರ ಸುತ್ತಲೂ ವೀರಗಲ್ಲು, ಮಾಸ್ತಿಕಲ್ಲು, ನಂದಿ, ಶಿವಲಿಂಗ ಮೂರ್ತಿಗಳು ಚೆಲ್ಲಾಪಿಲ್ಲಿಯಗಿ ಬಿದ್ದಿರುವುದನ್ನು ನೋಡಿದರೆ ಶರಣರು ಆಗ ಇದೇ ಮಂದಿರದಲ್ಲಿದ್ದು ಮುಂದೆ ನಡೆದಿರಬಹುದು ಎಂದು ಹೇಳಬಹುದು. ಪಕ್ಕದಲ್ಲಿಯೇ ವಿಶಾಲವಾದ ಕೆರೆಯಿದೆ. ಇದೇ ಕಾಡಿನಲ್ಲಿ “ಹೋಳಿಕಟ್ಟೆ”ಯಿದ್ದು, ಈಗಲೂ ಆ ಊರಿನ ಜನ ಇಲ್ಲಿಗೆ ಬಂದು ಹೋಳಿ ಹುಣ್ಣಿಮೆ ಆಚರಿಸುತ್ತಾರೆ ಎನ್ನುವ ಮಾಹಿತಿಯಿದೆ.

ಕೊಂದರ್, ಕಳಸಾಯಿ: ರಾಮಲಿಂಗೇಶ್ವರ ದೇವಸ್ಥಾನವಿದೆ. ಇಲ್ಲಿಂದ ಹೊರಟ ಕೆಲ ಶರಣರನ್ನು ಆಗ ಇಲ್ಲಿ ಕೊಂದರು. ಹೀಗಾಗಿ ಊರಿಗೆ ಈ ಹೆಸರು ಬಂತು ಎಂದು ಹೇಳುತ್ತಾರೆ. ಉಳಿದ ಮಾಹಿತಿ ಸಿಗುವುದಿಲ್ಲ. ಬುಡಕಟ್ಟು ಜನಾಂಗ ಇಲ್ಲಿದ್ದಾರೆ. ಎಂಟತ್ತು ಜೋಪಡಿಗಳಿರುವ ಊರು. ಶರಣರ ಹತ್ಯೆಯಾದ ಸ್ಥಳ ಎಂದು ಗುರುತಿಸುತ್ತಾರೆ. ಕಳಸಾಯಿಯಲ್ಲಿ ಪಾಯಿಕೇಶ್ವರ ದೇವಾಲಯವಿದೆ. ಅದರ ಎದುರುಗಡೆ ಕಾಡಿನ ಪ್ರದೇಶದಲ್ಲಿ   ಚೆನ್ನಬಸವಣ್ಣನವರ ಗುಡಿ ಇತ್ತು. ಅದೆಲ್ಲ ಈಗ ಹಾಳಾಗಿ ಹೋಗಿದೆ. ಶರಣರು ಇಲ್ಲಿ ಕ್ಯಾಂಪ್ ಹಾಕಿದ್ದರು ಎಂಬುದಕ್ಕೆ ಕುರುಹುಗಳಿವೆ.

ಮಾತ್ಕಣಿ, ಕಡೆಗಣಿ, ಹೆಣಕೊಳ:  ಗಡಿಕೇಶ್ವರ ಹೆಸರಿನ ಹಳೆಯ ದೇವಾಲಯವಿದೆ. ಕಡೆಗಣಿಯಲ್ಲಿ ಒಂದೇ ಒಂದು ಮನೆಯಿದ್ದು, ಅವರ ಹೊಲದಲ್ಲಿನ ಒಂದಿಷ್ಟು ಪ್ರದೇಶಕ್ಕೆ ಬಸವಖಂಡ ಎಂದು ಗುರುತಿಸಲಾಗುತ್ತಿದೆ. ಅದರ ಸುತ್ತೆಲ್ಲ ಹಳೆಯ ಕಾಲದ ಶಿವಲಿಂಗ, ನಂದಿ ವಿಗ್ರಹಗಳು ದೊರೆತಿವೆ. ಶರಣರ ಹತ್ಯೆಯಾಗಿರುವುದರಿಂದ ಒಂದು ಊರಿಗೆ ಹೆಣಕೊಳ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಯಾವುದೇ ಕುರುಹು ದೊರೆಯುವುದಿಲ್ಲ.

ಉಳುವಿ: “ಕರ್ಮಕ್ಷಯವನು ಮಾಡುವ…’,  ’ಶಿಲೆಯಲ್ಲವು ಶಿವಲಿಂಗವು ಜಲವೆಲ್ಲವು ಪುಣ್ಯಕ್ಷೇತ್ರ….ಸಲೆಯುಳುಮೆಯ ಕೇತ್ರ ಪೇಳಲಶಕ್ಯಂ” ಎನ್ನುವಂತಿರುವ ಉಳವಿಗೆ ಬಂದ ಶರಣರು ಅಲ್ಲಿದ್ದ ಶಿವಮಂದಿರ ಪ್ರವೇಶಿಸಿ ಆದಿ ಸದಾಶಿವನ ಲಿಂಗದ ಪಾದ ದರ್ಶನ ಪಡೆದರು. ಮಗ್ಗುಲಲ್ಲಿರುವ ಹೊಂಡವನ್ನು ಶಿವತೀರ್ಥವೆಂದು ಪೂಜಿಸಿ, ಕಾಶಿಗಿಂತ ಶ್ರೇಷ್ಠವಾದ ಕ್ಷೇತ್ರ ಇದು ಎಂದು ಹೇಳಿದರು.

ಇಲ್ಲಿರುವ ಪ್ರಕೃತಿ ನಿರ್ಮಿತ ಗವಿಗಳಲ್ಲಿ ಶರಣರು ನೆಲೆನಿಂತರು. ಚೆನ್ನಬಸವಣ್ಣನವರು ತಮ್ಮ ಪಾದುಕೆಗಳನ್ನು ಹೊರಬಿಟ್ಟು ಗವಿ ಪ್ರವೇಶಿಸಿದರು.  ಈ ಗವಿಯನ್ನು ಒಳಮಾಡಿಕೊಂಡು ಸೋದೆ ಸದಾಶಿವ ಅರಸನು ಚೆನ್ನಬಸವಣ್ಣನವರ ದೇವಾಲಯವನ್ನು ಕಟ್ಟಿಸಿದನು ಗರ್ಭಗುಡಿಯಲ್ಲಿ ಬಸವಣ್ಣ, ಚೆನ್ನಬಸವಣ್ಣ ಹೆಸರಿನ ಎರಡು  ನಂದಿಮೂರ್ತಿಗಳಿರುವುದನ್ನು, ಮಲ್ಲಿಕಾರ್ಜುನ, ಸಂಗಮೇಶ್ವರ ಹೆಸರಿನ ಎರಡು ಶಿವಲಿಂಗಗಳೀರುವುದನ್ನು ನಾವು ಗಮನಿಸಬಹುದು.

“ಹೊನ್ನ ಅರಳಿಯ ಮರನ ಕೊನೆಯನು ಚೆನ್ನಬಸವನು ನೆಟ್ಟು ತಾ….ಇಹನುಳುಮೆಯ ಕ್ಷೇತ್ರದಿ” ಎಂದು ಹೇಳುವಂತೆ ದೇವಾಲಯ ಪೌಳಿಯಲ್ಲಿ ಚೆನ್ನಬಸವಣ್ಣ ನೆಟ್ಟನೆಂದು ಹೇಳುವ ಅರಳಿಮರ ಇದೆ. ದೇವಾಲಯದ ಮುಂದೆ ದಕ್ಷಿಣಕ್ಕೆ ಮುಖ ಮಾಡಿ ಹೊರಟರೆ ಎತ್ತಿ ಕಾಯುವ ಬಸವಣ್ಣ, ನಂತರ ವೀರಭದ್ರೇಶ್ವರ ಗುಡಿ, ಸ್ವಲ್ಪ ಮುಂದಕ್ಕೆ ಹೋದರೆ ಗವಿಗಳಿಗೆ ದಾರಿ ಪ್ರಾರಂಭವಾಗುತ್ತದೆ.

ಉಳುವಿಯ ಗವಿಗಳು: ಕರಿಯ ಬೆಟ್ಟ, ಹರಳಯ್ಯನ ಚಿಲುಮೆ ದಾಟಿ ಉಳವಿ ಕಾಡಿನಲ್ಲಿ ಹೊರಟರೆ ಶರಣರ ಗವಿಗಳ ದಾರಿ ಕಾಣಿಸುತ್ತದೆ. ಇಲ್ಲಿಗೆ ನಡೆದುಕೊಂಡೇ ಹೋಗಬೇಕು. ಅಕ್ಕನಾಗಮ್ಮನ ಗವಿ, ವಿಭೂತಿ ಗವಿ, ಆಕಳ ಗವಿ, ರುದ್ರಾಕ್ಷಿ ಮಂಟಪ, ಪಂಚಲಿಂಗ ಗವಿ, ಮಹಾಮನೆ ಕಾಣ ಸಿಗುತ್ತವೆ. ಕೊನೆಗೆ ಚೆನ್ನಯ್ಯನ ತೀರ್ಥ ಹೆಸರಿನ ಜಲಪಾತವಿದೆ.  ಈ ಕಾಡಿನಲ್ಲಿ ಅಡ್ಡಾಡಿ ನೋಡಿದರೆ ಶರಣರು ಅನುಭವಿಸಿದ ಕಷ್ಟ ಎಂಥದು ಎಂಬುದು ಗೊತ್ತಾಗುತ್ತದೆ.

ಜನಪದ ಸಂಸ್ಕೃತಿ, ಇತಿಹಾಸದ ಕುರುಹು, ಮೌಖಿಕ ಮಾಹಿತಿ ಅವಲಂಭಿಸಿದ ಈ ಕ್ಷೇತ್ರಕಾರ್ಯವು ಶರಣ ’ಮೌಖಿಕ ಚರಿತ್ರೆ’ (ಓರಲ್ ಹಿಸ್ಟರಿ) ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಈ ಶರಣರ ಕ್ಷೇತ್ರಗಳ ಬಗ್ಗೆ ಇನ್ನೂ ಹೆಚ್ಚಿನ ಕ್ಷೇತ್ರ ಕಾರ್ಯ ನಡೆಸುವ ಮೂಲಕ ಶರಣರ ಬಗೆಗಿನ ನಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೆಳ್ಳಬೇಕಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago