ರಾಯಚೂರು: ಬೆಳಗಾವಿ ಪೀರಣವಾಡಿ ಯಲ್ಲಿನ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ತೆರವುಗೊಳಿಸಿದನ್ನು ಖಂಡಿಸಿ ಹಾಗೂ ಕಠಿಣ ಕ್ರಮಕ್ಕೆ ಒತ್ತಾಯಿಸಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಹಾಗೂ ಅಖಿಲ ಕರ್ನಾಟಕ ಸಂಗೊಳ್ಳಿ ರಾಯಣ್ಣ ಯುವ ಶಕ್ತಿ ವೇದಿಕೆ ಕವಿತಾಳ ಘಟಕ ಮತ್ತು ಸಮಸ್ತ ರಾಯಣ್ಣರ ಅಭಿಮಾನಿಗಳ ಪರವಾಗಿ ಕವಿತಾಳ ಪಟ್ಟಣದ ಅನ್ವರಿ ಕ್ರಾಸ್ (ಕನಕದಾಸ ವೃತ್ತ) ದಲ್ಲಿ ಹೋರಾಟವನ್ನು ಮಾಡಲಾಯಿತು.
SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡುತ್ತಾ ಟ್ರಾಫಿಕ್ ನೆಪವೊಡ್ಡಿ ಉದ್ದೇಶ ಪೂರ್ವಕವಾಗಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವೇ ಅಂದರೆ ಆಗಸ್ಟ್ 15 ರಂದು, ಆ ದಿನ ರಾಯಣ್ಣರ ಹುಟ್ಟಿದ ದಿನವೂ ಹೌದು ಅದೇ ದಿನ ಬೆಳಗಾವಿಯ ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ತೆರವುಗೊಳಿಸಿದ್ದು ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ದೇಶಕ್ಕೆ ಮಾಡಿದ ಅಪಮಾನದ ಕೆಲಸವಾಗಿದೆ. ಇದೊಂದು ದೇಶ ದ್ರೋಹದ ಕೆಲಸ, ಇದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯ. ಅದೇ ಮಾರ್ಗದಲ್ಲಿ ಹಲವರ ಪ್ರತಿಮೆ ಗಳು ಇವೆ ಅವುಗಳಿಂದ ಉಂಟಾಗದ ಟ್ರಾಫಿಕ್ ಸಮಸ್ಯೆ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣರ ಪ್ರತಿಮೆಯಿಂದ ಉಂಟಾಗುತ್ತದಯೇ.? ಇದೊಂದು ಉದ್ದೇಶಪೂರ್ವಕ ಕೃತ್ಯ ಅನ್ನುವ ಅನುಮಾನ ಗಳು ಕಾಡುತ್ತಿವೆ.
ನಾಡು ನುಡಿ ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ ಮಹನೀಯರಿಗೆ ಬೆಳಗಾವಿಯ ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಸರ್ಕಾರ ಈ ರೀತಿಯ ಅಪಮಾನ ಮಾಡಿರುವುದನ್ನು ರಾಜ್ಯದ ಜನ ಎಂದು ಸಹಿಸಲಾರರು ಮತ್ತು ಮರೆಯಲು ಸಾಧ್ಯವಿಲ್ಲ, ಇತ್ತಿಚೆಗೆ ಪಠ್ಯ ಪುಸ್ತಕ ದಿಂದ ರಾಯಣ್ಣರ ಇತಿಹಾಸ ವನ್ನು ತೆಗೆಯಲು ಪ್ರಯತ್ನ ಮಾಡಿದ ರಾಜ್ಯ ಸರ್ಕಾರ ಈ ಕೃತ್ಯದಲ್ಲಿ ಭಾಗಿಯಾದ ಆರೋಪಿ ಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ವನ್ನು ಬಚಾವ್ ಮಾಡಲು ಯತ್ನ ಮಾಡುತ್ತಿರುವುದು ದುರಂತ ಮತ್ತು ದೇಶ ದ್ರೋಹಿ ಕೆಲಸವಾಗಿದೆ.
ಇದನ್ನು ಕೂಡಲೇ ಕೈ ಬಿಡಬೇಕು. ಹಾಗೂ ಮೊನ್ನೆ ಹೋರಾಟ ಮಾಡಿದ ರಾಯಣ್ಣರ ಅಭಿಮಾನಿಗಳ ಮೇಲೆ ಹೋರಾಟಗಾರರ ಮೇಲೆ ಲಾಟಿ ಜಾರ್ಜ್ ಮಾಡಿದ ಪೋಲಿಸ್ ಅಧಿಕಾರಿಯ ಮೇಲೂ ಸೂಕ್ತ ಕ್ರಮ ಜರುಗಿಸಿ ಕೂಡಲೇ ಕ್ಷಮೆ ಯಾಚಿಸಿ, ಪ್ರತಿಮೆ ತೆರವು ಗೊಳಿಸಿ ಅದೇ ಸ್ಥಳದಲ್ಲಿ ರಾಯಣ್ಣರ ಪ್ರತಿಮೆಯನ್ನು ಪುನರ್ ನಿರ್ಮಾಣ ಮಾಡಿ ಇತರೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಹಾಗೂ ಆ ಘಟನೆಯನ್ನು ಸೂಕ್ತ ನ್ಯಾಯಾಂಗದ ತನಿಖೆಗೆ ಸರ್ಕಾರ ಆದೇಶ ಮಾಡಬೇಕೆಂದು ಆಗ್ರಹಿಸಿದರು.
ನಂತರ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶಿವಣ್ಣ ವಕೀಲ ಮಾತನಾಡಿ ಇಂತಹ ಹೇಯ ಕೃತ್ಯಕ್ಕೆ ಮುಂದಾದ ರಾಜ್ಯ ಸರ್ಕಾರ ಮತ್ತು ಬೆಳಗಾವಿಯ ಜಿಲ್ಲಾ ಆಡಳಿತ ರಾಯಣ್ಣರ ಅಭಿಮಾನಿಗಳನ್ನು ಬಡೆದೆಬಿಸಿದೆ ಅದರ ಪ್ರತಿ ಕಾರ ವನ್ನು ನಾವು ಕಾನೂನಿನ ಚೌಕಟ್ಟಿನಲ್ಲಿ ಹೋರಾಟದ ಮೂಲಕ ಪಾಠ ಕಲಿಸೋಣ ಎಂದರು.
ನಂತರ ಪದವಿದರ ಕುರುಬ ಸಂಘದ ಅಧ್ಯಕ್ಷರಾದ ಶಿವರಾಜ ಪಾಟೀಲ್ ಡೋಣ ಮರಡಿ, ಜೈ ಭಾರತ್ ಸಂಘಟನೆಯ ಜಹಾಂಗೀರ್ ಪಾಷ, ಕಾರ್ಮಿಕ ಮುಖಂಡರಾದ ಎಂ.ಡಿ ಮೈಬೂಬ್ ಸಾಬ್, ಪಟ್ಟಣ ಪಂಚಾಯತ್ ಸದಸ್ಯರಾದ ಬಸವರಾಜ, ಗಂಗಪ್ಪ ದಿನ್ನಿ ಮತ್ತು ಮೌನೇಶ ಪೂಜಾರಿ ಮಾತನಾಡಿದರು. ಹೋರಾಟ ಮಾಡಿ ಪ್ರತಿಭಟನಾ ಮನವಿಯನ್ನು ಗ್ರಾಮ ಲೆಕ್ಕಾಧಿಕಾರಿ ಸದಾಕಲಿ ಮುಖಾಂತರ ಮುಖ್ಯಮಂತ್ರಿ ಗಳಿಗೆ ಕಳುಹಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ DYFI ರಾಜ್ಯ ಸಮಿತಿ ಸದಸ್ಯ ರಾದ ಶಿವಪ್ಪ ಬ್ಯಾಗವಾಟ್, SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ರಾಯಣ್ಣ ಯುವಶಕ್ತಿ ವೇದಿಕೆಯ ಅಧ್ಯಕ್ಷರಾರದ ಶಿವನ್ನಪ್ಪ ದಿನ್ನಿ, DYFI ಕವಿತಾಳ ಘಟಕದ ಅಧ್ಯಕ್ಷರಾದ ಮಹಮ್ಮದ್ ರಫಿ, ಪಟ್ಟಣ ಪಂಚಾಯತ್ ಸದಸ್ಯರಾದ ಮೌನೇಶ್ ಹಿರೇಕುರುಬರ್, SFI ಕವಿತಾಳ ಘಟಕದ ಅಧ್ಯಕ್ಷರಾದ ಮೌನೇಶ್ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ, ವಿವಿಧ ಸಂಘಟನೆಗಳ ಮುಖಂಡರಾದ ಬಿರಪ್ಪ ಹೀರದ್, ನಿಂಗಪ್ಪ ತೋಳ, ಸಿದ್ದಣ್ಣ ದಿನ್ನಿ, ನಾಗಮೋಹನ್ ದಾಸ್, ಪ್ರೇಮ್, ಕುಪ್ಪಣ್ಣ, ಅಯ್ಯಪ್ಪ ತೋಳ, ಶಿವರಾಜ ಹಣಿಗಿ, ಯಲ್ಲಾಲಿಂಗ, ಶಾಂತಕುಮಾರ್, ಬೀರಪ್ಪ, ಕರಿಯಪ್ಪ, ಮರಿಸ್ವಾರಿ, ಸೇರಿ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…