ಯಾದಗಿರಿ: ಹುಣಸಗಿ ನಾರಾಯಣಪುರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಬಿಟ್ಟಿದ್ದರಿಂದ ನದಿ ಮೈದುಂಬಿ ಹರಿಯುತ್ತಿದ್ದು, ಕಳೆದ ಹನ್ನೊಂದು ದಿನಗಳಿಂದ ಸುಮಾರು 100ಕ್ಕೂ ಹೆಚ್ಚು ಕುರಿಗಳು ನದಿಯ ನಡುಗಡ್ಡೆಯಲ್ಲಿ ಸಿಲುಕಿರುವ ಘಟನೆ ನಡೆದಿದ್ದು, ಕುರಿಗಳ ಸಿಲುಕಿರುವ ದೃಶ್ಯಗಳು ಸದ್ಯ ಟ್ರೋನ್ ಕ್ಯಾಮೆರಾ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.
11ದಿನಗಳ ಹಿಂದೆ ಕುರಿಗಳು ಸಮೇತ ಸಿಲುಕಿದ್ದ ಕುರಿಗಾಯುವ ಯುವಕ ನದಿಯ ನಡುದಡ್ಡೆಯಲ್ಲಿ ಸಿಲುಕಿರುವುದನ್ನು ಘಟನೆಯಲ್ಲಿ ಕುರಿಗಾಯುವ ಯುವಕನನ್ನು ರಕ್ಷಿಸಲಾಗಿತ್ತು. ಆದರೆ ಕುರಿಗಳು ಮಾತ್ರ ಇನ್ನೂ ನಡುಗಡ್ಡಯಲ್ಲಿಯೇ ಉಳಿದಿವೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
11 ದಿನದಿಂದ ಅಲ್ಲಿಯೇ ಕುರಿಗಳು ಮೇಯುತ್ತಿವೆ. ಅವುಗಳನ್ನು ಹೊರತರಲು ಸಾಧ್ಯವಾಗುತ್ತಿಲ್ಲ. ಪ್ರವಾಹ ಅಡ್ಡಿಯಾಗಿದೆ. ಇತ್ತ ಕುರಿಗಳು ಬಿಟ್ಟು ಬಂದ ಕುರಿ ಮಾಲೀಕ ಮತ್ತು ಕುಟುಂಬಸ್ಥರು ಚಿಂತೆಯಲ್ಲಿಯಲ್ಲಿ ಮುಳುಗಿಬಿಟ್ಟಿದ್ದಾರೆ. ಸಾಲ ಮಾಡಿ ಈಚೇಗೆ ಅಷ್ಟೇ ಕುರಿಗಳು ಖರೀದಿ ಮಾಡಿದ್ದ, ಕುರಿಗಳು ಯಾವಾಗ ನದಿಯ ನಡುಗಡ್ಡೆಯಿಂದ ಹೊರಬರುತ್ತವೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಸರಕಾರ ಏನಾದ್ರು ಮಾಡಿ ನಮ್ಮ ಕುರಿಗಳನ್ನು ಈ ಮಹಾಕಂಟಕದಿಂದ ಪಾರು ಮಾಡಿಕೊಡಬೇಕು. ನದಿಗೆ ನೀರು ಹೆಚ್ಚಿಗೆ ಬರುತ್ತಿದೆ. ಇದರಿಂದ ನಮಗೆ ಭಯ ಉಂಟಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. – ಟೋಪಣ್ಣ ರಾಠೋಡ, ಕುರಿಗಳ ಮಾಲೀಕ
ಯಾದಗಿರಿ ಜಿಲ್ಲಾಡಳಿತ, ಸ್ಥಳೀಯ ಅಧಿಕಾರಿಗಳು ಬಡಪಾಯಿಗಳ ಕುರಿಗಳನ್ನು ಪ್ರವಾಹದ ಅಪಾಯದಿಂದ ಹೊರತಂದು ಮಾಲೀಕರಿಗೆ ಅವರಿಗೆ ಒಪ್ಪಿಸಬೇಕಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…