ಬಿಸಿ ಬಿಸಿ ಸುದ್ದಿ

ದೇಶದ ಅತ್ಯುತ್ತಮ ೨೫ ಕಾಲೇಜುಗಳಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜು

ಕಲಬುರಗಿ: ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಪ್ರಕಟಿಸಿದ ಅಟಲ್ ರ‍್ಯಾಂಕಿಂಗ್ ಆಫ್ ಇನ್‌ಸ್ಟಿಟ್ಯೂಷನ್ಸ್ ಆನ್ ಇನೋವೇಷನ್ ಅಚೀವ್‌ಮೆಂಟ್ಸ ಪಟ್ಟಿಯಲ್ಲಿ ನಮ್ಮ ಸಂಸ್ಥೆಯ ಪಿಡಿಎ ಕಾಲೇಜ್ ಆಫ್ ಇಂಜಿನಿಯರಿಂಗ್, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳ ಕೆಟಗರಿಯಲ್ಲಿ, ದೇಶದ ಅತ್ಯುತ್ತಮ ೨೫ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ, ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ.ಸಿ. ಬಿಲಗುಂದಿ ಯವರು ತಿಳಿಸಿದರು.

ಈ ಪಟ್ಟಿಯನ್ನು ಭಾರತದ ಉಪರಾಷ್ಟ್ರಪತಿಗಳಾದ, ಶ್ರೀ ವೆಂಕಯ್ಯನಾಯ್ಡು ರವರು ನವದೆಹಲಿಯಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ ಮೂಲಕ ಬಿಡುಗಡೆಗೊಳಿಸಿದರು. ಭಾರತ ಸರ್ಕಾರದ ಶಿಕ್ಷಣ ಸಚಿವರಾದ ಶ್ರೀ ರಮೇಶ ಪೊಕ್ರಿಯಾಲ, ರಾಜ್ಯ ಸಚಿವರಾದ ಶ್ರೀ ಸಂಜಯ ಧೋತ್ರೆ, ಉನ್ನತ ಶಿಕ್ಷಣ ಕಾರ್ಯದರ್ಶಿಗಳಾದ ಶ್ರೀ ಅಮಿತ್ ಖರೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಚೇರಮನ್ ಡಾ. ಅನಿಲ್ ಸಹಸ್ರಬುದ್ಧೆ, ಉಪಸ್ಥಿತರಿದ್ದರು.

ದೇಶದ ಅತ್ಯುನ್ನತ ೨೫ ಕಾಲೇಜುಗಳ ರ‍್ಯಾಂಕ್ ಪಟ್ಟಿಂiiಲ್ಲಿ ಸ್ಥಾನ ಪಡೆದಿದ್ದಕ್ಕೆ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ಡೀನ್ ಮತ್ತು ಎಲ್ಲಾ ಪ್ರಾಧ್ಯಾಪಕ ವೃಂದಕ್ಕೆ ಹೈ.ಕ.ಶಿ. ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ, ಶ್ರೀ ಡಾ.ಶಿವಾನಂದ ದೇವರಮನಿ, ಉಪಾಧ್ಯಕ್ಷರು, ಶ್ರೀನಿತಿನ.ಬಿ.ಜವಳಿ, ಕಾರ್ಯದರ್ಶಿಗಳು,ಶ್ರೀ ಗಂಗಾಧರ.ಡಿ.ಎಲಿ, ಸಹ ಕಾರ್ಯದರ್ಶಿಗಳು, ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವರಾಜ. ಜಿ. ಪಾಟೀಲ್, ಡಾ. ಸಂಪತ್ ಕುಮಾರ.ಡಿ.ಲೋಯಾ, ಶ್ರೀ ವಿಜಯಕುಮಾರ .ಜೆ. ದೇಶಮುಖ, ಡಾ. ನಾಗೇಂದ್ರ ಎಸ್.ಮಂಠಾಳೆ, ಶ್ರೀಅರುಣಕುಮಾರ.ಎಂ.ಪಾಟೀಲ್, ಶ್ರೀ ಉದಯಕುಮಾರ ಎಸ್. ಚಿಂಚೋಳಿ, ಶ್ರೀಮತಿ ಅನುರಾಧ.ಎಂ. ದೇಸಾಯಿ, ಶ್ರೀ ಅನಿಲಕುಮಾರ. ಎಸ್. ಮರಗೋಳ, ಡಾ.ಶರಣಬಸವಪ್ಪ ಕಾಮರೆಡ್ಡಿ, ಶ್ರೀ ಸತೀಶಚಂದ್ರ .ಸಿ. ಹಡಗಿಲಮಠ, ಡಾ. ಶಿವಪುತ್ರಪ್ಪ ಹರವಾಳ, ಶ್ರೀ ಸಂಜಯ ಮಾಕಲ್, ಹರ್ಷ ವ್ಯಕ್ತಪಡಿಸಿ, ಶುಭ ಕೋರಿದ್ದಾರೆ.

ನಮ್ಮ ಕಾಲೇಜು ದೇಶದ ಅತ್ಯುನ್ನತ ೨೫ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ, ಈ ರ‍್ಯಾಂಕ್ ಸಾಧಿಸಲಿಕ್ಕೆ ಪೂರಕ ವಾತಾವರಣಗಳಾದ ಇನ್ಕ್ಯೂಬೇಷನ್ ಸೆಲ್ ರಚಿಸಲು, ಅದಕ್ಕೆ ಕಟ್ಟಡ ಒದಗಿಸಲು, ಸ್ಟಾರ್ಟಆಪ್ ಸ್ಥಾಪಿಸಲು ಬೇಕಾದ ಸೌಲಭ್ಯಗಳ ಬಜೆಟ್‌ನ್ನು ಒದಗಿಸಿ, ಧೈರ್ಯತುಂಬಿ. ಪ್ರೋತ್ಸಾಹ ನೀಡಿದ ನಮ್ಮ ಕ್ರಿಯಾಶೀಲ ಹಾಗೂ ದೂರದೃಷ್ಟಿಯುಳ್ಳ ನೆಚ್ಚಿನ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಸಹಕಾರ ಬಹುಮುಖ್ಯ ಕಾರಣವೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಸ್. ಹೆಬ್ಬಾಳರವರು ವ್ಯಕ್ತಪಡಿಸಿದರು.

ಇಂದಿನ ಯುಗದಲ್ಲಿ ಬರೀ ಪುಸ್ತಕೀಯ ಶಿಕ್ಷಣಕ್ಕಿಂತ ಇಂಡಸ್ಟ್ರಿಗೆ ಬೇಕಾದ ವಿದ್ಯಾರ್ಥಿಗಳನ್ನು ಸ್ವಾವಲಂಬಿ ಉದ್ಯಮಿಗಳನ್ನಾಗಿ ರೂಪಿಸುವಂತಹ ಪಠ್ಯಕ್ರಮವನ್ನು ಅಳವಡಿಸಿದ, ಕಾಲೇಜಿನ ಅಕ್ಯಾಡೆಮಿಕ್ ಕೌನ್ಸಿಲ್, ಡೀನ್ ಡಾ. ಸಿದ್ರಾಮ್ ಪಾಟೀಲ್, ಇನೋವೇಷನ್ ಎಂಟರ‍್ಪ್ರಿನ್ಯುರ‍್ಷಿಪ್ ಕಾರ್ಯಕ್ರಮಗಳನ್ನು ಆಯೋಜಿಸಲು ಧನಸಹಾಯ ಮಾಡಿದ ಟೆಕ್ಯೂಫ್ ಸಂಯೋಜಕರಾದ ಪ್ರೊ.ಶರಣ ಪಡಶೆಟ್ಟಿ, ಕಾಲೇಜಿನ ನ್ಯೂಏಜ್ ಇನ್‌ಕ್ಯೂಬೇಷನ್ ನೆಟ್‌ವರ್ಕನ ಸಂಯೋಜಕರಾದ ಪ್ರೊ.ರಾಜೇಂದ್ರ ಚಿಂಚೋಳಿ, ವಿಭಾಗೀಯ ಸಂಯೋಜಕರಾದ ಶ್ರೀ ಸಿದ್ಧರಾಮ ಸಂಗೊಳಗಿ, ೧೨ ಪೇಟೆಂಟ್ಗಳನ್ನು ಪ್ರಕಟಿಸಿ, ರ‍್ಯಾಂಕ್‌ನಲ್ಲಿ ಅಂಕ ಪಡೆಯಲು ಸಹಕರಿಸಿದ, ಐ.ಪಿ.ಆರ್ ಸಂಯೋಜಕಿ ಹಾಗೂ ಕಂಪ್ಯೂಟರ್ ಸೈನ್ಸ ವಿಭಾಗದ ಪ್ರಾಧ್ಯಾಪಕರಾದ ಡಾ. ಜಯಶ್ರೀ ಅಗರಖೇಡ ಮತ್ತು ಈ ರ‍್ಯಾಂಕ್ ಪಡೆಯಲು ಸಹಕರಿಸಿದ ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ವೃಂದಕ್ಕೆ, ಪ್ರಾಚಾರ್ಯರು ವಂದಿಸಿ ಅಭಿನಂದಿಸಿದ್ದಾರೆ. ರಾಜ್ಯದ ಅನೇಕ ಪ್ರತಿಷ್ಠತ ಇಂಜಿನಿಯರಿಂಗ್ ಕಾಲೇಜುಗಳನ್ನು ಮೀರಿಸಿ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳ ಕೆಟಗರಿಯಲ್ಲಿ, ರಾಷ್ಟ್ರಮಟ್ಟದ ಅತ್ಯುತ್ತಮ ೨೫ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಎರಡೇ ಕಾಲೇಜುಗಳಲ್ಲಿ, ನಮ್ಮ ಕಾಲೇಜು ಒಂದಾಗಿದೆ ಎಂದು ಹೇಳಲು ಹರ್ಷವೆನಿಸುತ್ತಿದೆ.

ಭಾರತ ಶಿಕ್ಷಣ ಸಚಿವಾಲಯವು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಜಾಗತೀಕ ಮಟ್ಟದ ಇನೋವೇಷನ್, ಉದ್ಯಮ ಶೀಲತೆಯ ಸ್ಪರ್ಧಾಕಣದಲ್ಲಿ ಅತ್ಯುನ್ನತಸ್ಥಾನ ಪಡೆದಿರುವುದಕ್ಕಾಗಿ, ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕಾಗಿ ಜಾಗತೀಕ ಇನೋವೇಷನ್ ಮಾಪನಾಂಕಗಳನ್ನು ಆಧರಿಸಿ, ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಇನೋವೇಷನ್ ಉದ್ಯಮಶೀಲತೆ ಕ್ಷೇತ್ರದಲ್ಲಿಯ ಸಾಧನೆಗಳನ್ನಾಧರಿಸಿ, ಕಳೆದ ವರ್ಷದಿಂದ ಅಟಲ್ ರ‍್ಯಾಂಕಿಂಗ್ ಆಫ್ ಇನ್‌ಸ್ಟಿಟ್ಯೂಷನ್ಸ್ ಆನ್ ಇನೋವೇಷನ್ ಅಚೀವ್‌ಮೆಂಟ್ಸ ಪಟ್ಟಯನ್ನು ಬಿಡುಗಡೆ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪೋಷಕರಿಗೆ ಸಂಸ್ಥೆಗಳ ಗುಣಮಟ್ಟವನ್ನು ಅರಿಯಲು ಸಹಾಯವಾಗುತ್ತದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಂಸ್ಥೆಗಳು ಸ್ಪರ್ಧೆಗಿಳಿಯುವುದರಿಂದ ಇಂಡಸ್ಟ್ರಿಗೆ ಅವಶ್ಯಕವಾದ ಶಿಕ್ಷಣ ಪೂರೈಸಲು ಪೂರಕ ವಾತಾವರಣ ನಿರ್ಮಾಣ ಮಾಡಲು ಪ್ರೇರೇಪಿಸುತ್ತದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago