ಅಂಕಣ ಬರಹ

ಸತ್ಯದಲ್ಲಿ ಅಡಗಿರುವ ಶಕ್ತಿ ಸುಳ್ಳಿನಲ್ಲಿ ಇಲ್ಲ: ಒಂದು ವಿವೇಚನೆ

ಕರಿಯನಿತ್ತಡೆ ಒಲ್ಲೆ, ಸಿರಿಯ ನಿತ್ತಡೆ ಒಲ್ಲೆ, 

ಹಿರಿದಪ್ಪ ರಾಜ್ಯವಿತ್ತಡೆಯು ಒಲ್ಲೆ, 

ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆಯಿತ್ತಡೆ 

ನಿಮ್ಮ ನಿತ್ತೆ ಕಾಣಾ ರಾಮನಾಥಾ” 

ನಿಜಕ್ಕೂ ಎಷ್ಟು ಅದ್ಭುತ ಸುಂದರವಾಗಿ ಹೇಳಿದ್ದಾರೆ. ಸೂಳ್ನುಡಿ” ಎಂದರೆ ಸರ್ವಕಾಲಕ್ಕೂ ಸತ್ಯದಿಂದ ಕೂಡಿದೆ. ಹೇ ದೇವಾ ನನಗಾವ ಆನೆ, ಅಂಬಾರಿ, ವ್ಯೆಭವ ಬೇಕಾಗಿಲ್ಲ. ನನ್ನ ಜೀವನ ಹೇಗಾದರೂ ಕಷ್ಟ ಪಟ್ಟು ಕಾಯಕ ಮಾಡಿ ನಡೆಸುತ್ತೇನೆ. ಆದರೆ ನಿಮ್ಮ ಶರಣರ ಸೂಳ್ನುಡಿ ಕೇಳುವ ಸೌಭಾಗ್ಯ ಒಂದರಗಳಿಗೆ ಸಿಗಲಿ ಸಾಕು. ನಿಮ್ಮ ದರ್ಶನ ಸತ್ಯದಲ್ಲೇ ಪಡೆಯುವೆ. ಎಂದು ಎಷ್ಟು ನಿಷ್ಕಲ್ಮಶ ಮನಸ್ಸಿಂದ ಬೇಡಿಕೊಳ್ಳುತ್ತಾರೆ. ಒಂಬತ್ತು ನೂರು ವರ್ಷಗಳ ಹಿಂದೆ ಸಾಮಾನ್ಯ ವರ್ಗದ ಬಟ್ಟೆ ನೇಯುವ ಕಾಯಕ ಮ್ಯೆಗೂಡಿಸಿಕೊಂಡ ಶರಣ ದೇವರ ದಾಸಿಮಯ್ಯನವರ ಬಯಕೆ. ಇದು ಎಂಥಾ ಮೌಲ್ಯಯುತವಾದದ್ದು. ಆದರೆ ಇಂದು ನಾವುಗಳು ಇಪ್ಪತ್ತೊಂದನೆಯ ಶತಮಾನದ ಮನಸುಗಳ ಬಯಕೆಗಳ ನಡುವೆ ಎಷ್ಟು ವ್ಯತ್ಯಾಸ ಕಂಡು ಬರುತ್ತದೆ ಅಲ್ವೆ?

“ಸತ್ಯವನ್ನು ಅರಸಿ ಹೋದವರು ಸಾವಿರ ಸಾವಿರ ಜನ, ಇದು ನಮಗೂ-ನಿಮಗೂ ತಿಳಿದ ವಿಷಯ. ಆದರೆ ನಾವು ನಮ್ಮ ನಿತ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಿದ್ದರೆ ಮೊದಲಿಗೆ ಸತ್ಯವನ್ನು ಅರಿಯಬೇಕು. ಉದಾ: ಸಂಬಂಧಗಳಿರಲಿ, ಪ್ರೀತಿ ಇರಲಿ, ಪ್ರಮಾಣಿಕತೆಯಿಂದ ಕೊಟ್ಟ ಮಾತುಗಳಲ್ಲಿರಲಿ ಅದರಲ್ಲಿ ಸತ್ಯ ಕೂಡಿದ್ದರೆ ಅದು ಸಾರ್ವಕಾಲಕ್ಕೂ ಶಾಶ್ವತವಾಗಿ ಉಳಿಯುತ್ತದೆ.

ಅದೆ ಮಾತುಗಳಲ್ಲಿ ಮಿಥ್ಯದಿಂದ ಕೂಡಿದ್ದರೆ ಅದು ಕೊನೆಗೊಳ್ಳದು. ಅದಕ್ಕೆ ಸತ್ಯವನ್ನು ಅರಿಯಬೇಕು, ಸತ್ಯವನ್ನು ಪ್ರೀತಿಸಬೇಕು, ಸತ್ಯವನ್ನು ಅನುಭವಿಸಬೇಕು, ಈ ಕಾರ್ಯವನ್ನೆ ಜಗತ್ತಿನ ದಾರ್ಶನಿಕರು, ಸಂತರು, ಶರಣರು, ಮಹಾನುಭಾವಿಗಳು, ಸತ್ಯವನ್ನು ಮ್ಯೆಗೂಡಿಸಿಕೊಂಡರು.

ಅಂತೆಯೆ ಇತಿಹಾಸದ ಪುಟಗಳಲ್ಲಿ ಅವರ ಹೆಸರು ಸುವರ್ಣಾಕ್ಷರದಲ್ಲಿ ದಾಖಲಿಸಲ್ಪಟ್ಟಿವೆ: ಹಾಗಾದರೆ ಸತ್ಯವನ್ನು ಹೇಗೆ ಅರಿಯಬೇಕು?. ಮೊದಲಿಗೆ ನಮ್ಮ ಮನಸ್ಸಲ್ಲಿ ತುಂಬಿದ ಕಲ್ಮಶಗಳು ತೊಲಗಿಸಬೇಕು. ಆಡುವ ಮಾತುಗಳಲ್ಲಿ ಸತ್ಯವಾಗಿರ ಬೇಕು, ನಿತ್ಯದ ಕಾರ್ಯಗಳಲ್ಲಿ ಸತ್ಯ ಅಡಗಿರಬೇಕು, ಅಂದಾಗಲೇ ಆ ಸತ್ಯದ ಚಿದ್ಬೆಳಕು ನಮ್ಮ ಅರಿವಿಗೆ ಗೋಚರಿಸುತ್ತದೆ. ಅದನ್ನೆ ಒಂದು ಕಡೆ ಅನುಭವ ಮಂಟಪದ ಶೂನ್ಯ ಸಿಂಹಾಸ ಅಲಂಕರಿಸಿದ ಅಲ್ಲಮ ಪ್ರಭುದೇವರು ಹೀಗೆ ಹೇಳುತ್ತಾರೆ.

“ಮಾತೆಂಬುದು ಜ್ಯೋತಿರ್ಲಿಂಗ” ಎಂದು ಹೇಳಿದರು. ಹಾಗೆಂದರೆ ಏನು? ಸಾಮಾನ್ಯವಾಗಿ ನಾವು-ನಿವು ಆಡುವ ಮಾತುಗಳಲ್ಲ. ಎಲ್ಲೊ ಹೊಳೆಯುವ ಲಿಂಗವಲ್ಲ. ಆಡುವ ಮಾತುಗಳಲ್ಲಿ ಸತ್ಯ, ಪ್ರಮಾಣಿಕತೆಯಿಂದ ಕೂಡಿರಬೇಕು. ಅಂಥ ಅಮೋಘವಾದ ಮಾತುಗಳೆ “ಮಾತೆಂಬುದು ಜ್ಯೋರ್ತಿಲಿಂಗ” ಎಂದರು ಶರಣರು.

ಅದನ್ನೆ ಅಣ್ಣನವರು ಹೇಳಿದು ನೋಡಿರುತ್ತೇವೆ:  “ಭಕ್ತಿ ಸುಭಾಷಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರ್ಯೆಸುವೆ, ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕ್ಯೆಯಲ್ಲಿ ಒಂದು ಜವೆ ಕೊರತೆಯಾದಡೆ ಎನ್ನ ನದ್ದಿ ನೀನೆದ್ದು ಹೋಗು ಕೂಡಲಸಂಗಮದೇವಾ”

ಭಕ್ತ ಸುಭಾಶಯ ನುಡಿಯ ನುಡಿವೆ. ಎಂದರೆ ಭಕ್ತಿಮಾರ್ಗದಲ್ಲಿ ನಡೆಯುವ ನಾನು ಮಂಗಳಕರವಾದ ಮಾತುಗಳೆ ನುಡಿಯುತ್ತೇನೆ. (ಮಂಗಳಕರ) ಅಂದರೆ ಸತ್ಯವಾದ ಮಾತುಗಳನ್ನೆ ನುಡಿಯುತ್ತೇನೆ. ಅದರ ಜೊತೆ ನುಡಿದಂತೆ ನಡೆಯುತ್ತೇನೆ, ಇಷ್ಟಕ್ಕೂ ತೃಪ್ತಿಯಾಗದೆ ಮುಂದೆ ಹೇಳುತ್ತಾರೆ ನಡೆಯೊಳಗೆ ನುಡಿಯನ್ನು ಪೂರೈಸುತ್ತೇನೆ. ನಡೆ-ನುಡಿಯಲ್ಲಿ ಒಂದು ಗೋಧಿ ಕಾಳ ತೂಕದಷ್ಟು ಸುಳ್ಳು ಕಂಡು ಬಂದರೆ ನನ್ನನದ್ದಿ ನಿನೇದ್ದು ಹೋಗು ಎಂದು ತನ್ನ ಆತ್ಮಸಾಕ್ಷಾತ್ಕಾರ ವಿಶ್ವಾಸ ದಿಂದ ನುಡಿಯುತ್ತಾರೆ.

ಇಡಿ ಜಗತ್ತಿಗೆ ಶಾಂತಿ ಸಾರಿದ “ಬುದ್ಧ” ಅವರ ಒಂದೆ ಒಂದು ಮಾತಿಗೆ ಅಂಗುಲಿ ಮಾಲಾನಂಥ ಕ್ರೂರಿ ವ್ಯಕ್ತಿಯ ಬದುಕು ಬದಲಾಯಿತು ಅಂದರೆ ಸಾಮಾನ್ಯ ಮಾತಲ್ಲ ಅಲ್ಲವೆ? ಬುದ್ದ ತನ್ನ ಪಾಡಿಗೆ ತಾನು ಕಾಡಿನ ದಾರಿ ಅರಸಿ ಹೋಗುತಿದ್ದ. ಎದುರಿಗೆ ಅಂಗುಲಿಮಾಲಾ ಭೇಟಿಯಾದ. ಅಂಗುಲಿ ಮಾಲಾ ಸಿಕ್ಕಸಿಕ್ಕವರ ಬೆರಳು ಕತ್ತರಿಸಿ ಕೊರಳಿಗೆ ಮಾಲೆ ರೂಪದಲ್ಲಿ ಧರಿಸುವ ಒಬ್ಬ ಭಯಂಕರ ಕ್ರೂರಿ ಅಂತ ಮನುಷ್ಯ. ‘ಯಾರು ನೀನು? ಅಂತ ಕೇಳಿದ. ಆಗ ಬುದ್ದ. ನಾನು “ಬುದ್ದ” ಅಂದ. ನಾನು ನಿನ್ನ ಎದುರಿಗೆ ನಿಂತಿದ್ದೇನೆ “ನಿಲ್ಲು” ಅಂದ. ನಿಲ್ಲು ಎಂದು ಒಂದೇ

ಒಂದು ಬುದ್ದನ ಸಂದೇಶಕ್ಕೆ ಅಂಗುಲಿಮಾಲನಂತ ಹ ಕ್ರೂರ ವ್ಯಕ್ತಿಯ ವ್ಯಕ್ತಿತ್ವ ಬದಲಾಗಿ ಬುದ್ದನ ಕ್ಷೇತ್ರ ಅನುಕರಿಸಿದ. ಇಲ್ಲಿ ಬುದ್ದನ ಒಂದು ನಿಲ್ಲು ಶಬ್ದ ಅಂಗುಲಿಮಾಲಾಗೆ ಜ್ಯೋತಿರ್ಲಿಗವಾಗಿ  ಪರಿಣಮಿಸಿತು.

ಶರಣರು, ಸಂತರು, ಮಹಾನುಭಾವಿಗಳು, ಸತ್ಯಕ್ಕೆ ಪ್ರೀತಿಸಿದರು, ಅನುಭವಿಸಿದರು, ಸತ್ಯಕ್ಕೆ ಆರಾಧಿಸಿದರು, ಅವರು ಆಡಿದ ಮಾತುಗಳೆ ವಚನ ಸ್ವರೂಪಾಗಿ ಹೊರಹೊಮ್ಮಿದವು, ಅವರ ಒಂದೊಂದು ಮಾತೆಂಬುದು ಜ್ಯೋತಿರ್ಲಿಂಗವಾಗಿ ಬೆಳಗಿದವು.

ಆದರೆ ನಮ್ಮ ಮಾತುಗಳು? ನಮ್ಮನ್ನು ನಾವು ಓಮ್ಮೆ ಅವಲೋಕಿಸಿಕೊಳ್ಳೋಣ. ನಾವು ಆಡುವ ಮಾತುಗಳಿರಲಿ, ಇನ್ನೊಬ್ಬರಿಗೆ ಕೊಟ್ಟ ಪ್ರಮಾಣಿಕದಲ್ಲಿ ಸತ್ಯ ಅಡಗಿದೆಯೆ? ಬಹುಶಃ ಅದನ್ನು ಪರಾಮರ್ಶೆಗೆ ತೆಗೆದುಕೊಂಡರೆ ಅದರಲ್ಲಿ 99/ ಸುಳ್ಳು ಕಂಡು ಬರುತ್ತವೆ. ಆದರೆ ಮನುಷ್ಯನ ನಡವಳಿಕೆ ವಿಚಿತ್ರವಾದದ್ದು ಅಲ್ಲವೆ? ಸುಳ್ಳು ಮಾತಿಗೆ ಹೆಚ್ಚಿನ ಪ್ರಾಶಸ್ತ್ಯತೆ ಕೊಡುತ್ತೇವೆ.

‘ಈ ಸಮಾಜದಲ್ಲಿ ಅಸತ್ಯವಾಗಿ ನಡೆಯುವ ಆಶಾಡಭೂತಿಗಳಿಗೆ ಹೆಚ್ಚಿನ ಗೌರವ. ಸತ್ಯವಾಗಿ ನುಡಿದಂತೆ ನಡೆಯುವ ಸಜ್ಜನರು ಕಂಡರೆ ಒಂಥರ ಅಪ್ರಿಯ, ಕೆಲ ಸತ್ಯಗಳು ಕೆಲವರಿಗೆ ಅಪ್ರಿಯವಾಗಿ ಕಂಡರೆ. ಮತ್ತೊಬ್ಬರಿಗೆ ಪ್ರಿಯವಾಗಿ ಕಾಣುತ್ತದೆ’. ಸತ್ಯ ಎಂದರೆ ಒಂದು ಔಷಧಿಯಿದ್ದಂತೆ. ನಮ್ಮ ಆರೋಗ್ಯ ಹದಗೆಟ್ಟಾಗ ಔಷಧಿ ಸೇವಿಸಿದರೆ ನಮ್ಮ ನಾಲಿಗೆಗೆ ಕಹಿಯಾಗಿ ಪರಿಣಮಿಸಿದರೂ ಆರೋಗ್ಯಕ್ಕೆ ಮಾತ್ರ ಸಿಹಿಕರ. ಅದರಂತೆ ಸತ್ಯವನ್ನು ಹೇಳುವವರ ಉದ್ದೇಶ ಸತ್ಯ ಪ್ರತಿಪಾದನೆಯಾಗಿರುತ್ತದೆ ಹೊರತು ಮನಸ್ಸಿಗೆ ನೋವುಂಟು ಮಾಡಬೇಕೆಂಬುದಾಗಿರುವುದಿಲ್ಲ. ಅದನ್ನೆ ಅಣ್ಣನವರು ಹೇಳುತ್ತಾರೆ.

“ನ್ಯಾಯ ನಿಷ್ಠುರಿ, ದಾಕ್ಷಿಣ್ಯ ಪರ ನಾನಲ್ಲಯ್ಯ” ಎಂದು ಬಸವಣ್ಣನವರು ಸತ್ಯ-ನ್ಯಾಯಗಳ ಕಡೆಗೆ ತಮ್ಮ ಒಲವು ವ್ಯಕ್ತಪಡಿಸಿದ್ದು ನೋಡಿರುತ್ತೇವೆ. ಅವರು ಅರಸೊತ್ತಿಗೆಯಲ್ಲಿ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದಾಗ ಅವರಿಗೆ ಕೆಲ ಕುಹಕಿಗಳು ಸುಳ್ಳಾರೋಪ ಹೊರಸಿರಬಹುದು. ಆ ಸಂದರ್ಭದಲ್ಲಿ ಅವರಿಗೆ ಸುಳ್ಳು ಅಂದರೆ ಅವರಿಗೆ ಒಂತರ ಹೇಸಿಕೆ ಬಂದಂತಾಯಿತು.  “ಕೂಡಲಸಂಗನ ರಾಜತೇಜದಲ್ಲಿಪ್ಪೆನಾಗಿ ನಾನು ಈ ಬಿಜ್ಜಳಂಗೆ ಅಂಜುವನೆ?, ಎಂದು ಖಡಕ್ಕಾಗಿ ಪ್ರಶ್ನಿಸುತ್ತಾರೆ. ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೆ ಅಸತ್ಯದ ಪರವಾಗಿ ನಿಲ್ಲುವುದಿಲ್ಲ ಎಂದು ಅವರ ಒಂದೇ ಸಂದೇಶ ನಮ್ಮ ಬದುಕಿನ ತಿರುವು ಬದಲಾಯಿಸಬಹುದಲ್ವೆ?

ನಮ್ಮ ಬಳಿ ಏನಿಲ್ಲ ಇವೊತ್ತು, ವಿಶಾಲವಾದ ಅದ್ಭುತ ಕಟ್ಟಡ ದಿಂದ ಕೂಡಿದ್ದ ಸುಂದರವಾದ ಮನೆ ಇದೆ. ಆ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳಿವೆ, ಇಡಿ ಜಗತ್ತೇ ಆ ಮನೆಯಲ್ಲಿದೆ ಅಂದುಕೊಳ್ಳೊಣ, ಆದರೆ ಸತ್ಯ ದಿಂದ ಕೂಡಿದ್ದ ಒಂದು ಸುಂದರ ನಿರ್ಮಲವಾದ ಮನಸ್ಸು ಇಲ್ಲ ಅಂದ ಮೇಲೆ ಬಂಗಲೆಯಂತ ಮನೆಯಿದ್ದರೂ ಶೂನ್ಯಕ್ಕೆ ಸಮಾನ ಅಲ್ವೆ? ನಾವು ಎಷ್ಟೇ  ಎತ್ತರಕ್ಕೇರಿದರೇನು ಫಲ? ಮನಸ್ಸು ಪರಿಶುದ್ಧವಿಲ್ಲದನಕ್ಕ?. ಅದನ್ನೆ ಅಣ್ಣನವರು ಹೇಳಿದರು. “ನೂರೋದಿ ನೂರ ಕೇಳಿದರೇನು ಫಲ? ಮನಸ್ಸಿನ ಆಸೆ ಹರಿಯಲಿಲ್ಲ. ನಮ್ಮೊಳಗಿನ ರೋಷ ಬಿಡಲಿಲ್ಲ. ದೇವರಿಗೆ ಹೋಗಿ ಕ್ಯೆ ಚಾಚಿ ಬೇಡಿದ್ದೆ ಬೇಡಿದ್ದು. ಕೇಳಿದ್ದೆ ಕೇಳಿದ್ದು. ಆದರೆ ಮನಸ್ಸಿನ ದಾಹ ತೀರಲಿಲ್ಲ. ಕೋಟಿ ಕೋಟಿ ಆಸ್ತಿ ಅಂತಸ್ತುಗಳಿದ್ದರು ಬೇಕು ಬೇಕು ಎಂಬ ಮನುಷ್ಯ ದಾಹ ಅಂತ್ಯಗೊಳ್ಳದು. ನಮ್ಮ ಮನೆ, ಬ್ಯಾಂಕ್ ಬ್ಯಾಲೆನ್ಸ್, ತಿಜೋರಿ ಅಲಮಾರಿ, ಏನೆಲ್ಲ

ಶ್ರೀಮಂತವಾದವು ಆದರೆ ಮನಸು ಮಾತ್ರ ಬಡವಾಗಿಯೇ ಉಳಿಯಿತ್ತು. ಪವಿತ್ರವಾದ ಮನಸ್ಸಲ್ಲಿ ಬರಿ ಸುಳ್ಳು, ಮೋಸ, ವಂಚನೆ, ದರೊಡೆ, ಅಸೂಯೆ ಎಂಬ ಪಾಪದ ಕೊಡ ತುಂಬಿಕೊಂಡು ಅಮಾನುಶರಂತೆ ವರ್ತಿಸುವ ಸಮಾಜದಲ್ಲಿ ಯಾರು ತಾನೆ ನೆಮ್ಮದಿ ಸುಖಿಯಾಗಿರಲೂ ಸಾಧ್ಯ? ಇತ್ತಚಿನ ದಿನಗಳಲ್ಲಿ ಮನುಷ್ಯ ಸುಳ್ಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಅತಿಯಾದ ಹಣ ಗಳಿಸುವಲ್ಲಿ. ಅಧಿಕಾರ ದಾಹ ಸ್ವೀಕರಿಸುವಲ್ಲಿ ಪರಿಶುದ್ಧ ಮನಸ್ಸಿಗೆ ಬರಡಾಗಿಸಿದೆ.

ಮನಸ್ಸಿನಲ್ಲಿ ತುಂಬಿದ ದುರ್ನಡತೆ, ದ್ವೇಷ, ಅಸೂಯ, ಅಹಂಕಾರ, ಅಂತ ಕಿಚ್ಚು ಅಳೆದು ನಾ ಅನ್ನುವ ಸ್ಯೆತಾನ ಹೊಡೆದೊಡಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಮನಸ್ಸು ಕ್ಷಣಕ್ಷಣಕ್ಕೂ ನಮ್ಮ ಅರಿವಿಗೆ ಗೋಚರಿಸದೆ ಬೆಂಕಿಯಂತೆ ಸುಡುತ್ತದೆ.ಎಲ್ಲಿಯವರೆಗೆ ನಮ್ಮ ಸತ್ಯ-ಶುದ್ಧ ಆಚಾರ-ವಿಚಾರಗಳನ್ನು ಮ್ಯೆಗೂಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಬದುಕಿನ ರಹಸ್ಯ ಅರಿಯದೆ ಬಡತನ ದಿಂದ ಬಳಲುತ್ತಿರುತ್ತದೆ.

ನಮ್ಮ ಘನವ್ಯಕ್ತಿತ್ವಕ್ಕೆ ನಾವೇ ಆತ್ಮವಂಚನೆ ಮಾಡಿದಂತೆ.  ಅದಕ್ಕೆ ನಮ್ಮ ಮನಸ್ಸು ಸದಾ ನಿರ್ಮಲಭಾವ ದಿಂದ ಕೂಡಿರಬೇಕು. ಮನೆ ಶ್ರೀಮಂತ ಗೊಳಿಸುವ ಬದಲಿಗೆ ಮನಸ್ಸು ಶ್ರೀಮಂತ ಗೊಳಿಸುವ ಧ್ಯೇಯ ನಮ್ಮದಾಗಬೇಕು. ನಮ್ಮ ಆರ್ಥಿಕ ಸ್ಥಿತಿಗತಿ ಅದೇಷ್ಟೇ ಬಡತನ ದಿಂದ ಕೂಡಿದ್ದರೂ ಪರವಾಗಿಲ್ಲ. ನಮ್ಮ ನಡೆ-ನುಡಿ ಸತ್ಯವಾಗಿರಬೇಕು. ಸತ್ಯ ಶುದ್ಧ ಕಾಯಕ ಮಾಡಿಕೊಂಡು ಸಂತೃಪ್ತಿಭಾವ ದಿಂದ ಬದುಕುತ್ತಾರೋ. ಅಂಥವರ ಮನಸ್ಸು ಸದಾ ದೇವಸ್ವರೂಪಾಗಿ ಬೆಳಗುತ್ತದೆ.

ಸತ್ಯದ ರಹಸ್ಯವೇ ಶರಣರು ನಮಗೆ ತೋರಿಕೊಟ್ಟಿದ್ದು. ‘ಮನೆ ನೋಡಾ ಬಡವರು, ಮನ ನೋಡಾ ಘನ’ ಎಂಬಂತೆ ಶರಣರ ಮನಸ್ಸು ಸದಾ ದೇವಸ್ವರೂಪವಾಗಿ ಬೆಳಗಿತ್ತು. ಸತ್ಯಕ್ಕೆ ಪ್ರೀತಿಸಿದರು, ಆರಾಧಿಸಿದರು, ಲಿಂಗಸ್ವರೂಪಾಗಿ ಪೂಜಿಸಿದರು. ಸದಾ ಲಿಂಗಸ್ವರೂಪರಾಗಿ ಬೆಳಗುವ ಶರಣರು ಲೋಕದ ಮೋಹಕ್ಕೆ ಅಂಟದೆ ಸ್ವತಂತ್ರ ಧೀರರಾಗಿ ಬಾಳಿ ಬದುಕಿದರು. ನಿಜಕ್ಕೂ ಅವರ ಒಂದೊಂದು ವಚನಗಳು ನಮ್ಮ ಬಾಳಿಗೆ ಮಂತ್ರ ಸದೃಶದಂತಿವೆ.

ಸತ್ಯದಲ್ಲಿ ಅಡಗಿದಷ್ಟು ಶಕ್ತಿ ಸಳ್ಳಿನಲ್ಲಿಲ್ಲ. ಎಂಬ ಸತ್ಯ ದರ್ಶನ ಆದವನ ಬದುಕು ಮಾನವ ನಿಂದ ಮಹಾ ಮಾನವನಾಗಿಸುತ್ತದೆ. ಎಲ್ಲಿ ಸತ್ಯ ತುಂಬಿರುತ್ತದೊ ಅಲ್ಲಿ ದೇವಸಾಕ್ಷಾತ್ಕಾರವಾಗುತ್ತದೆ. ಅದನ್ನೆ ಗಾಂಧಿಜಿಯವರು ಹೇಳಿದರು. “ಸತ್ಯಮೇವ ಜಯತೆ” ಎಲ್ಲಿ ಸತ್ಯ ಇದೆಯೊ ಅಲ್ಲಿ ಜಯ ಇರುತ್ತದೆ. ಅಲ್ಲಿ ಸದಾ ಭಗವಂತನ ಕೃಪೆ ಇದ್ದೆ ಇರುತ್ತದೆ. ಸತ್ಯ ಅನ್ನೊದು ಸದಾ ಚಿರಂಜಿವಿ, ಅದಕ್ಕಾಗಿ ಮಹಾತ್ಮಾ ಗಾಂಧಿಜಿಯವರು “ಸತ್ಯವೆ ದೇವರೆಂದರು, ದೇವರೆಂದರೆ ಸತ್ಯ’ ಎಂದರು.

ನಮ್ಮ ಬದುಕಿನಲ್ಲಿ ನಾವು ಸತ್ಯವನ್ನೇ ರೂಢಿಸಿಕೊಂಡರೆ ಈ ಜಗದಲ್ಲಿ ಇರಲುಂಟೆ ನಮಗಿಂತಸಿರಿವಂತರು?  ಎಂಬ ಪ್ರಶ್ನೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳೋಣ.

 

-ವಿಜಯಲಕ್ಷ್ಮೀ ಕೌಟಗೆ, ಬೀದರ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago