ಮುಂಬೈ: ಕೊರೊನಾ ಹೆಸರಲ್ಲಿ ತಬ್ಲಿಗಿ ಜಮಾತೆಗೆ ಬಲಿಪಶು ಮಾಡಲಾಗಿದೆ ಎಂದು ಮುಂಬೈಯ ಔರಂಗಾಬಾದ್ ಉಚ್ಚ ನ್ಯಾಯಲಯ ಪೀಠ ತಿಳಿಸಿದೆ.
ಇದೇ ವರ್ಷದ ಮಾರ್ಚನ್ ನಲ್ಲಿ ದೆಹಲಿಯಲ್ಲಿ ತಬ್ಲಿಗಿ ಜಮಾತನ ಕಾರ್ಯಕ್ರಮ ಒಂದರಲ್ಲಿ ವಿದೇಶ ನಗರೀಕರು ಸಹಿತ ತಬ್ಲಿಗ್ ಸಮುದಾಯಕ್ಕೆ ಕೊರೊನಾ ಹೆಸರಲ್ಲಿ ಬಲಿಪಶು ಮಾಡಿ ದೇಶದಲ್ಲಿ ಕೊರೊನಾ ಹರಡಿಸುತ್ತಿರುವ ಬಗ್ಗೆ ಅನಾಗತ್ಯ ಆರೋಪ ಮಾಡಲಾಗಿದೆ ಎಂದು ತಿಳಿಸಿ, 29 ವಿದೇಶಿ ನಾಗರಿಕರ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಟಿ.ವಿ.ನಲವಾಡೆ ಮತ್ತು ನ್ಯಾಯಮೂರ್ತಿ ಎಂ.ಜಿ.ಸೆವಾಲಿಕರ್ ಅವರ ವಿಭಾಗೀಯ ಪೀಠ ಆಗಸ್ಟ್ 21 ರಂದು ಈ ಹೇಳಿಕೆ ನೀಡಿದೆ.
ಈ ವಿದೇಶಿಯರಿಗೆ ಭಾರತದ ಮಸೀದಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿಲ್ಲ ಮತ್ತು ಈ ಚಟುವಟಿಕೆಯನ್ನು ಸರ್ಕಾರವು ಶಾಶ್ವತವಾಗಿ ನಿಷೇಧಿಸಿದೆ ಎಂದು ತೋರಿಸಲು ದಾಖಲೆಯಲ್ಲಿ ಏನೂ ಇಲ್ಲ ಎಂದು ನ್ಯಾಯಪೀಠ ಹೇಳಿದೆ. “ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರವೇ ತಬ್ಲಿಗಿ ಜಮಾಅತ್ ಚಟುವಟಿಕೆ ನಿಂತುಹೋಯಿತು. ಈ ಕುರಿತು ಅಪಪ್ರಚಾರ ಮಾಡಲಾಗಿದೆ ಎಂದಿದೆ.
“ಕೋವಿಡ್ -19 ಸಾಂಕ್ರಾಮಿಕದಿಂದ ಉದ್ಭವಿಸುವ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಸಹಿಷ್ಣುತೆಯನ್ನು ತೋರಿಸಬೇಕು ಮತ್ತು ನಮ್ಮ ಅತಿಥಿಗಳ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿರಬೇಕು ಎಂದು ಹೇಳಿದ ನ್ಯಾಯಾಲಯವು “ಅವರಿಗೆ ಸಹಾಯ ಮಾಡುವ ಬದಲು, ಪ್ರಯಾಣ ದಾಖಲೆಗಳ ಉಲ್ಲಂಘನೆಗೆ ಕಾರಣರು ಮತ್ತು ಕೊರೋನಾ ವೈರಸ್ ಹರಡುವ ಜವಾಬ್ದಾರರು ಎಂದು ಆರೋಪಿಸಿ ನಾವು ಅವರನ್ನು ಜೈಲಿಗೆ ಹಾಕಿದೇವೆ ಎಂದು ಪೀಠ ಹೇಳಿದೆ.
ನ್ಯಾಯಲಯ ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಪೊಲೀಸರು ಬದ್ಧತೆಯಿಂದ ವರ್ತಿಸಿದ್ದಾರೆ ಎಂದು ನ್ಯಾಯಪೀಠ ಒತ್ತಿಹೇಳಿದ್ದು, ಅನ್ಯ ಕೆಲವು ರಾಜ್ಯ ಸರ್ಕಾರಗಳು ರಾಜಕೀಯ ಕಾರ್ಯಗತವಾಗಿ ಕಾರ್ಯನಿರ್ವಹಿಸಿವೆ ಎಂದಿದೆ.
ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್‌ನಲ್ಲಿ ತಬ್ಲಿಗಿ ಜಮಾಅತ್ ಕಾರ್ಯಕ್ರಮವೊಂದರಲ್ಲಿ ಪ್ರವಾಸೋದ್ಯಮ ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಐಪಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ 29 ವಿದೇಶಿ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…