ಆಳಂದ: ಜೀವನದಲ್ಲಿ ವಿದ್ಯಾರ್ಥಿ ಭವಿಷ್ಯವೆಂಬುವುದು ತುಂಬಾ ಅಮೂಲ್ಯವಾಗಿದ್ದು, ಅದನ್ನು ಉತ್ತಮವಾದ ರೀತಿಯಲ್ಲಿ ರೂಪಿಸಿಕೊಂಡು ತಂದೆ, ತಾಯಿಗಳ ಹೆಸರು ಉಳಿಸುವಂತಾಗಬೇಕು ಎಂದು ನಿಂಬರ್ಗಾ ಪಿಎಸ್‌ಐ ಸುರೇಶಕುಮಾರ ಚವ್ಹಾಣ ಹೇಳಿದರು.
ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಮಹಾಪುರುಷರ ವಿಚಾರ ವೇದಿಕೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಥಮ ಶೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಿದರೆ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಮನುಷ್ಯನಿಗೆ ಅಸಾಧ್ಯವೆಂಬುವುದು ಯಾವುದು ಇಲ್ಲ, ಮೊದಲು ಜೀವನದಲ್ಲಿ ಛಲ ರೂಡಿಸಿಕೊಂಡು ಮುನ್ನುಗ್ಗಿದ್ರೆ ಮಾತ್ರ ಗುರಿ ಮುಟ್ಟಲು ಸಾಧ್ಯವೆಂದು ಹೇಳಿದರು.
ಪ್ರಪಂಚದಲ್ಲಿ ಖಡ್ಗಕಿಂತ ಹರಿತವಾದ ಆಯುಧ ಪೆನ್ನು ಎನ್ನೋದನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯ ನಡುವೆ ಹಗಲು ರಾತ್ರಿ ಹೋರಾಟವನ್ನು ಮಾಡಿ ಇಡಿ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ರವರು ಹಾಕಿಕೊಟ್ಟಿರುವಂತ ಶಿಕ್ಷಣ, ಸಂಘಟನೆ, ಹೋರಾಟದ ಮಾರ್ಗ ಅನುಸರಿಸಿಕೊಳ್ಳಬೇಕೆಂದು ಗುಲಬರ್ಗಾ ವಿಶ್ವವಿದ್ಯಾಲಯ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಡಾ.ರಮೇಶ ಲಂಡನಕರ್ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಬ್ಯಾಂಕ್ ರಾಯಚೂರ ವಿಭಾಗೀಯ ಪ್ರಭಂದಕರಾದ ಕೆ.ಎಸ್.ಶಿವಮೂರ್ತಿ ಮಾತನಾಡುತ್ತ ಅಂಬೇಡ್ಕರ್ ಅಭಿಮಾನಿಗಳಾಗದೆ ಅನುಯಾಯಿಗಳಾಗಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ರವರು ಸಮ-ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನವನೆ ಮುಡಿಪಾಗಿಟ್ಟವರು. ದೇಶವು ಚಾತುರ್ವಣ ವ್ಯವಸ್ಥೆಯ ಅಂಧಕಾರದಲ್ಲಿ ಮುಳುಗಿರುವಾಗ ಶಿಕ್ಷಣದ ಕ್ರಾಂತಿಯನು ರೂಪಿಸಿ, ನಿರಂತರ ಹೋರಾಟ ಮಾಡುವ ಮೂಲಕ ಶೋಷಿತ ಸಮುದಾಯದ ಜನರ ಬದುಕನು ರೂಪಿಸಿಕೊಟಿದಾರೆ. ಅವರು ಮಾಡಿದ ಹೋರಾಟದ ಪ್ರತಿಫಲದಿಂದಲೆ ಇವತ್ತು ಉನ್ನತ್ತ ವ್ಯಾಸಂಗ ಮಾಡಿಕೊಂಡು ದೊಡ್ಡ, ದೊಡ್ಡ ಹುದ್ದೆಯಲ್ಲಿ ಇರುವಂತೆಯಾಗಿದೆ. ಆದರೆ ಅವರ ಹೋರಾಟವನ್ನು ಮರೆತುಕೊಂಡಿರುವುದು ದುರಂತವೆಂದು ಕಳವಳ ವ್ಯಕ್ತಪಡಿಸಿದರು.
ಡಾ.ರಾಹುಲ್ ತಮ್ಮಣ್ಣ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯ ಬಹಳ ಮುಖ್ಯವಾಗಿದು ಅದನ್ನು ವ್ಯರ್ತಮಾಡಿಕೊಳದೆ ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಂಡರೆ ಮಾತ್ರ ಸಮಾಜದಲ್ಲಿ ಮರ್ಯಾದೆ ಯಿಂದ ಬದುಕಲು ಸಾಧ್ಯವೆಂದು ಕಿವಿ ಮಾತು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಿವಪುತ್ರ ಮದಗುಣಕ್ಕಿ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಪಾಮೇಶ ಚಳ್ಳೂರ, ಶಿವಯೋಗಿ ರಂಗನ್, ಪ್ರಕಾಶ ಸರಸಂಬ, ಜೈಭೀಮ ಬಿಲ್ಕರ್ ಇದ್ದರು. ಪ್ರಥಮ ಶೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಮಾಣ ಪತ್ರದ ಜೊತೆ ಸಸಿ(ಗಿಡ)ಗಳನ್ನು ವಿತರಿಸಲಾಯಿತು.
ನಿರೂಪಣೆ ಚಂದ್ರಕಲಾ ಖರ್ಚನ್, ಪ್ರಾಸ್ತಾವಿಕ ಭಾಷಣ ಮಹಾಪುರುಷರ ವಿಚಾರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಜಿಡಗಿ, ಸ್ವಾಗತ ಶ್ರೀಕಾಂತ ಗಾಯವಾಡ, ವಂದನಾರ್ಪಣೆ ಕಿರಣ ತೆಗನೂರ ನಡೆಸಿಕೊಟ್ಟರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…