ವಾಡಿ: ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ಸರಕಾರ ಸಾಲ ಸೌಲಭ್ಯ ಒದಗಿಸುತ್ತಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಾತಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಏರ್ಪಡಿಸಲಾಗಿದ್ದ ಬೀದಿ ವ್ಯಾಪಾರಿಗಳ ಮೇಲುಸ್ತೂವಾರಿ ಸಮಿತಿಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಆತ್ಮನಿರ್ಭರ ನಿಧಿಯಲ್ಲಿ ವಿಶೇಷ ಕಿರು ಸಾಲ ಯೋಜನೆಯಡಿ ಪ್ರತಿಯೊಬ್ಬ ಬೀದಿ ವ್ಯಾಪಾರಿಗೆ ತಲಾ 10,000 ರೂ. ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯಕ್ಕೆ ಆದೇಶ ಹೊರಡಿಸಲಾಗಿದೆ. ಶೇ.7.5 ರಷ್ಟು ಕಡಿಮೆ ಬಡ್ಡಿ ಸಹಾಯಧನ ಪಡೆದುಕೊಂಡು ಆರ್ಥಿಕ ಸುಧಾರಣೆ ಕಾಣಬೇಕು. ನಗರ ಪ್ರದೇಶಗಳ ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ಅಣಿಯಾಗುವವರು ಚರಂಡಿ, ಪುಟ್‍ಪಾತ್ ಹಾಗೂ ರಸ್ತೆಯ ಬದಿಯಲ್ಲಿ ಕುಳಿತು ತೊಂದರೆ ಅನುಭವಿಸುತ್ತಾರೆ.
ಕೆಲವೊಮ್ಮೆ ಸ್ಥಳೀಯ ಆಡಳಿತದಿಂದ ಕಿರುಕುಳಕ್ಕೂ ಒಳಗಾಗುತ್ತಾರೆ. ಇಂಥಹ ಬಡ ವ್ಯಾಪಾರಿಗಳು ಸ್ವಾಭೀಮಾನದ ಬದುಕು ಜೀವಿಸಬೇಕು ಎಂಬುದು ಕೇಂದ್ರ ಸರಕಾರದ ಆಶಯವಾಗಿದ್ದು, ಸಾಲ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಪುರಸಭೆ ಸಮುದಾಯ ಸಂಘಟನಾಧಿಕಾರಿ ಚಂದ್ರಕಾಂತ ಪಾಟೀಲ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಸದ್ಯ ನೊಂದಾಯಿತ 198 ಜನ ಬೀದಿ ವ್ಯಾಪಾರಿಗಳು ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೆ 50 ಹೊಸ ಅರ್ಜಿಗಳು ಬಂದಿವೆ. ಸಾಲ ಪಡೆಯಲು ಇಚ್ಚಿಸುವ ಬೀದಿ ವ್ಯಾಪಾರಿಗಳು ಅಧಿಕೃತವಾಗಿ ನೊಂದಣಿ ಹೊಂದಬೇಕು. ಅದಕ್ಕಾಗಿ ಮೂಲ ದಾಖಲಾತಿಗಳೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕಾಲಮಿತಿಯೊಳಗೆ ಸಾಲ ಮರುಪಾವತಿ ಮಾಡಿದರೆ 1200 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಆರ್ಥಿ ನಷ್ಟದಿಂದ ಹೊರ ಬರಲು ಸಹಾಯಧನ ಅಥವ ಸಾಲ ಸೌಲಭ್ಯದ ಲಾಭ ಪಡೆದುಕೊಳ್ಳಬೇಕು ಎಂದರು.
ಎಸ್‍ಬಿಐ ಬ್ಯಾಂಕ್ ವ್ಯವಸ್ಥಾಪಕ ಅಭಿನವ ಮಾತನಾಡಿದರು. ಬೀದಿ ವ್ಯಾಪಾರಿಗಳ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ, ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಎಚ್‍ಡಿಎಫ್‍ಸಿ ಬ್ಯಾಂಕ್ ವ್ಯವಸ್ಥಾಪಕ ಸಂತೋಷ, ಸಂಪನ್ಮೂಲ ಅಧಿಕಾರಿ ರಾಜಕುಮಾರ ಗುತ್ತೇದಾರ, ಸ್ಥಳೀಯ ಬೀದಿ ವ್ಯಾಪಾರಿ ಸಮಿತಿಯ ಚುನಾಯಿತ ಪ್ರತಿನಿಧಿಗಳಾದ ವಸೀಮ್ ಅಕ್ರಂ, ಶ್ರವಣಕುಮಾರ ಭಟ್ಟರ್ಕಿ, ಅಬ್ದುಲ್ ರಹೆಮಾನ್, ಸಮದ್ ಖಾನ್, ಚಂದ್ರಮ್ಮ ಹಳ್ಳಿಕರ್, ಭಾಗಮ್ಮ ವಿಠ್ಠಲ, ಶಾನೂರು ಬಶಿರೋದ್ಧಿನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಮುದಾಯ ಸಂಘಟಕ ಕಾಶಿನಾಥ ಧನ್ನಿ ನಿರೂಪಿಸಿ, ವಂದಿಸಿದರು.
28ಜಿಯು-ವಾಡಿ1
ವಾಡಿ: ಪಟ್ಟಣದ ಪುರಸಭೆಯಲ್ಲಿ ನಡೆದ ಬೀದಿ ವ್ಯಾಪಾರಿಗಳ ಮೇಲುಸ್ತೂವರಿ ಸಮಿತಿಯ ಸಭೆಯಲ್ಲಿ ಕೌಶಲ್ಯಾಧಿಕಾರಿ ಸಾತಯ್ಯ ಹಿರೇಮಠ ಮಾತನಾಡಿದರು. ಸಮುದಾಯ ಸಂಘಟನಾಧಿಕಾರಿ ಚಂದ್ರಕಾಂತ ಪಾಟೀಲ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…