ಶಹಾಬಾದ:ನಿವೃತ್ತಿ ಎಂಬುದು ವೃತ್ತಿಗೆ ಮಾತ್ರವಾಗಿದ್ದು, ಪ್ರವೃತ್ತಿಗೆ ಎಂದು ನಿವೃತ್ತಿಯಿಲ್ಲ ಎಂದು ದಸಂಸ ಕಲಬುರಗಿ ಜಿಲ್ಲಾ ಸಂಚಾಲಕ ಸುರೇಶ ಮೆಂಗನ್ ಹೇಳಿದರು.
ಅವರು ನಗರದ ಎಚ್.ಎಮ್.ಪಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಕಮಲಾಬಾಯಿ.ಆರ್ ಅವರಿಗೆ ಶಾಲೆಯ ವತಿಯಿಂದ ಆಯೋಜಿಸಲಾದ ಬೀಳ್ಕೊಡಿಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾಜದಲ್ಲಿ ಎಲ್ಲಾ ವೃತ್ತಿಗಿಂತ ಶಿಕ್ಷಣ ಇಲಾಖೆಯ ಸೇವೆ ಅತ್ಯಂತ ವಿಶೇಷವಾಗಿದ್ದು, ಇದನ್ನು ತಮ್ಮ ಸೇವಾ ಅವಧಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ವೃತ್ತಿಗೆ ಗೌರವ ಸಲ್ಲಿಸಿದರು. ಕಮಲಾಬಾಯಿ ಅವರ ನಿವೃತ್ತಿ ಜೀವನ ಆರೋಗ್ಯಕರವಾಗಿರಲಿ ಎಂದು ಹೇಳಿದರು.
ಅನುದಾನಿತ ಪ್ರಾಥಮಿಕ ಶಾಲೆಗಳ ಸಂಘದ ಅಧ್ಯಕ್ಷ ಸಿದ್ರಾಮ ಉದಯಕರ್ ಮಾತನಾಡಿ, ಇವರು ತಮ್ಮ ಸೇವಾವಧಿಯಲ್ಲಿ ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಂಡಿರುತ್ತಿದ್ದರು. ಅಲ್ಲದೇ ಸಹಶಿಕ್ಷಕರ ಜತೆ ಕೌಟುಂಬಿಕ ವಾತಾವರಣವನ್ನು ನಿರ್ಮಾಣ ಮಾಡಿ ಶಾಲಾ ಅಭಿವೃದ್ಧಿಯಾಗಲು ಶ್ರಮಿಸಿದ್ದರು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಮಲಾಬಾಯಿ.ಆರ್ ಮಾತನಾಡಿ, ಸಮಾಜ ಪರಿವರ್ತನೆಗೆ ಹಾಗೂ ಸಮಾಜದ ಋಣ ತೀರಿಸುವಲ್ಲಿ ಈ ಇಲಾಖೆಯಲ್ಲಿ ಇಂಥದೊಂದು ಅವಕಾಶ ನನಗೆ ಒದಗಿ ಬಂದಿರುವದು ನನ್ನ ಸೌಭಾಗ್ಯ. ನನ್ನ ಸೇವಾವಧಿ ಉತ್ತಮವಾಗಿರಲು ಶಾಲಾ ಶಿಕ್ಷಕ ವರ್ಗದವರ ಸಹಕಾರವೇ ಕಾರಣ ಎಂದು ಹೇಳಿದರು.
ಎಚ್.ಎಮ್.ಪಿ ಶಾಲೆಯ ಕಾರ್ಯದರ್ಶಿ ಸುನೀಲ ಭಗತ್ ಅಧ್ಯಕ್ಷತೆ ವಹಿಸಿದ್ದರು. ಅನುದಾನಿತ ಪ್ರಾಥಮಿಕ ಶಾಲೆಗಳ ಸಂಘದ ಕಾರ್ಯದರ್ಶಿ ಶ್ರೀಶೈಲ ಮಠ,ಚಿತ್ರ ಕಲಾವಿದ ಮಹಮ್ಮದ್ ಖದೀರ್, ಶಿಕ್ಷಕರಾದ ಅಮ್ಜದ್ ಹುಸೇನ್, ಬಲವಂತಪ್ಪ ಓಲೇಕಾರ,ಲಕ್ಮಣ ಬಾಲಗೊಂಡ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…