ಕೋವಿಡ್ ಕಾಲದಲ್ಲಿ ತಂತ್ರಜ್ಞಾನಗಳು ವರದಾನ ವಾದರೂ ಗ್ರಾಮೀಣ ಭಾಗದಲ್ಲಿನ ಮೂಲಸೌಕರ್ಯ ಕೊರತೆ ಆರ್ಥಿಕ ಕಾರಣಗಳು ಬಡ ವಿದ್ಯಾರ್ಥಿಗಳಿಗೆ ಹಲವು ಸಮಸ್ಯೆಗಳನ್ನು ಹುಟ್ಟುಹಾಕಿವೆ. ಇದನ್ನು ಸರಿಪಡಿಸುವಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕಿದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಕ್ಕಿದ್ದರೆ ಉತ್ತಮ ಸಾಧನೆ ಮಾಡಬಲ್ಲರು ಎಂಬುದಕ್ಕೆ ಈ ಬಾರಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸುವ ಮೂಲಕ ಸಾಧನೆಗೈದಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲರ ಹುಬ್ಬೇರಿಸುವಂತೆ ಸಾಧನೆ ಮಾಡಿದ್ದಾರೆ.
ಸಂತೋಷದ ವಿಷಯ ಏನೆಂದರೆ ನಮ್ಮ ಗುಲ್ಬರ್ಗದ ಜಿಲ್ಲೆಯ ಪಾಳಾ ಗ್ರಾಮದ ವಿದ್ಯಾರ್ಥಿಗಳು ತಮ್ಮ-ತಮ್ಮ ಪರೀಕ್ಷೆಯಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿದ್ದು ನಮ್ಮ ಗ್ರಾಮಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ.
ಗ್ರಾಮೀಣ ಪ್ರದೇಶದ, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಎಂದು ಹಂಗಿಸುವವರು ಇದ್ದಾರೆ. ಇಂತಹ ಮನಸ್ಥಿತಿಗಳಿಂದಾಗಿಯೇ ಸರ್ಕಾರಿ ಶಾಲೆಗಳೆಂದರೆ ಕೆಲವರಿಗೆ ಅಸಡ್ಡೆ. ಆದರೆ ಕಳೆದ ಎರಡು ವರ್ಷಗಳಿಂದ ಹೊರ ಬರುತ್ತಿರುವ ಪರೀಕ್ಷಾ ಫಲಿತಾಂಶ ಟೀಕಾಕಾರರಿಗೆ ಉತ್ತರ ನೀಡುವಂತಹ ವಾತಾವರಣ ಮೂಡಿಸುತ್ತಿದೆ.
ಸರ್ಕಾರಿ ಶಾಲೆಗಳ ಮಕ್ಕಳು ವಿಶೇಷವಾಗಿ ಗ್ರಾಮೀಣ ಸಮುದಾಯದ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಒಟ್ಟಾರೆ ಶೇಕಡಾವಾರು ಫಲಿತಾಂಶದಲ್ಲಿ ಕುಸಿತದ ಆತಂಕ ಎದುರಾದರೂ, ಗ್ರಾಮೀಣ ಪ್ರದೇಶಗಳ ಕನ್ನಡ ಶಾಲೆಗಳ ಮಕ್ಕಳ ಸಾಧನೆಯ ಫಲಿತಾಂಶ ಕನವರಿಕೆಯಿಂದ ಹೊರಬರುವಂತೆ ಮಾಡಿದೆ.
ಏನೇ ಆಗಲಿ ಈ ಬಾರಿ ಪಾಳಾ ಗ್ರಾಮದ ಉನ್ನತ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯಲ್ಲಿ ತಾವು ಪಡೆದುಕೊಂಡಿರುವ ಅಂಕಗಳನ್ನು ತಮ್ಮ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇತರರಿಗೆ ಮಾದರಿಯಾಗುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳು ಕೇವಲ ಅಂಕವನ್ನು ಗಳಿಸುವುದಕ್ಕಾಗಿ ವಿದ್ಯಾಭ್ಯಾಸವನ್ನು ಮಾಡದೆ ಉತ್ತಮವಾದ ಜ್ಞಾನವನ್ನು ಸಂಪಾದಿಸುವುದಕ್ಕಾಗಿ ವಿದ್ಯಾಭ್ಯಾಸ ಮಾಡಬೇಕೆಂದು ಇತರರಿಗೆ ಮಾದರಿ ಆಗಬೇಕೆಂಬ ಗ್ರಾಮೀಣ ವಿದ್ಯಾರ್ಥಿಗಳ ಆಶಯ.
ನಮ್ಮ ಪಾಳಾ ಗ್ರಾಮದ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯ ಮೂಲ ಕಟ್ಟಿಮನಿ ಹಿರೇಮಠ ಸಂಸ್ಥಾನ ಪಾಳಾ ಇವರು ಹಮ್ಮಿಕೊಂಡಿರುವ ಎಸೆಸೆಲ್ಸಿ ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕವನ್ನು ಪಡೆದುಕೊಂಡಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ನಿರ್ಭಯ ಸಾಧಕ ಎಂಬ ಪ್ರಶಸ್ತಿ ಪ್ರದಾನ ನೀಡಿ ವಿದ್ಯಾರ್ಥಿಗಳಿಗೆ ಗೌರವವನ್ನು ಸಲ್ಲಿಸಲಾಯಿತು.
ಗ್ರಾಮೀಣ ಕನ್ನಡ ಶಾಲೆಗಳಲ್ಲಿ ಓದಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಅಂದಿನ ಗ್ರಹಿಕೆಯನ್ನು ಇಂದಿಗೂ ಮರೆತಿಲ್ಲ. ನಗರ ಪ್ರದೇಶದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ಆದರೆ ಮೂಲಶಿಕ್ಷಣವನ್ನು ಜ್ಞಾಪಿಸಿಕೊಳ್ಳುವವರು, ಸಂದರ್ಭ ಬಂದಾಗ ಅದನ್ನು ಹೊರ ಹಾಕುವವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೆ. ವ್ಯಾಕರಣ, ಸಂಧಿ-ಸಮಾಸ, ಅಲ್ಪಪ್ರಾಣ, ಮಹಾಪ್ರಾಣ ಇತ್ಯಾದಿ ಕಾಗುಣಿತ ವಿಷಯಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಚನ್ನಾಗಿ ಬಲ್ಲವರಿದ್ದಾರೆ. ಎಲ್ಲಿ ಹೋದರೂ ಸ್ಪಷ್ಟವಾಗಿ ಉಚ್ಚರಿಸುತ್ತಾರೆ.
ಮಾತುಗಳು ಮುಳ್ಳಿನಂತಿದ್ದೂರು ಮತ್ತೊಬ್ಬನನ್ನು ಎಚ್ಚರಿಸಿ ಸರಿದಾರಿಗೆ ತರುವ ಮುಳ್ಳಾಗಬೇಕೆ ವಿನಃ ಮನಸ್ಸು ಚುಚ್ಚುವ ಮುಳ್ಳಾಗಬಾರದು. ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಕೋರನ ಮಧ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರಿಗೆ ಆತಂಕ, ಮಕ್ಕಳು ಪರೀಕ್ಷೆ ಬರೆದು ಮನೆಗೆ ಬರುವ ತನಕ ಪೋಷಕರಲ್ಲಿ ಆತಂಕ ಮೂಡಿತ್ತು. ಈ ಕೋರನ ಮಧ್ಯೆಯೂ ಪರೀಕ್ಷೆ ಬರೆದು ಸಾಧನೆ ಮಾಡಿದ್ದಾರೆ.
ಎಸೆಸೆಲ್ಸಿ ಎಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಕೀರ್ತಿ, ಶಿವಪುತ್ರ , ಪೂಜಾ , ಅಂಕಿತ , ಪವಿತ್ರ , ಈಶ್ವರ್ , ಮಾರುತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ ಹಾಗೂ ಸರಕಾರಿ ಪ್ರೌಢಶಾಲೆ ಮುಖ್ಯಗುರುಗಳಾದ ಮಾರುತಿ ಹುಜರತಿ ಹಾಗೂ ನಾಗಲಾಂಬಿಕ ರವರು ಹಾಗೂ ಶಾಲಾ ವಿಭಾಗದ ಶಿಕ್ಷಕರು ಹಾಗೂ ಶಿಕ್ಷಕಿಯರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರೀತಿಪಾತ್ರರು ಆಗಿದ್ದಾರೆ.
– ರಾಣಪ್ಪ ಡಿ ಪಾಳಾ
ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ
ಮನೋವಿಜ್ಞಾನ ವಿಭಾಗ
ಮೋ 9663727268
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…