ಬಿಸಿ ಬಿಸಿ ಸುದ್ದಿ

ನಾಳೆ ಪ್ರೊ. ಎಚ್.ಟಿ. ಪೋತೆ ಅವರ “ಬಯಲೆಂಬೊ ಬಯಲು” ಕಾದಂಬರಿ ಬಿಡುಗಡೆ

ಕಲಬುರಗಿ: ನಾಳೆ ಶನಿವಾರ 05 ರಂದು 11 ಗಂಟೆಗೆ ಬುಕ್ ಬ್ರಹ್ಮ ಮುಖ ಪುಟ (ಪೇಸ್‍ಪುಕ್)ದಲ್ಲಿ “ಬಯಲೆಂಬೊ ಬಯಲು” ನೇರ ಪ್ರಸಾರಗೊಳ್ಳಲಿದೆ. ಬಯಲೆಂಬೊ ಬಯಲು ಎಂಬ ಬಯೋಪಿಕ್ ಕಾದಂಬರಿಯಯನ್ನು ಮೂರು ತಲೆಮಾರುಗಳ ಕಥ ಹಂದರವನ್ನು ಹೊಂದಿರುವ ಪ್ರೊ. ಎಚ್.ಟಿ. ಪೋತೆಯವರ ಈ ಕಾದಂಬರಿ ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ ಮತ್ತು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.

ಪರಿಚಯ: ಬಯಲು ನಾಡಿನ ವಿಯಜಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿಯಲ್ಲಿ (1965) ಜನಿಸಿದ ಪ್ರೊ. ಎಚ್.ಟಿ. ಪೋತೆಯವರು, ನಾಡಿನ ಸಂವೇದನಾಶೀಲ ಕಥೆಗಾರ, ಕಾದಂಬರಿಕಾರ, ಕವಿ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಫಿಲ್., ಪಿಎಚ್.ಡಿ., ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳ ಆಧಾರಿತ ನೀರನೆಳಲು ಎಂಬ ಕೃತಿಗೆ ಕರ್ನಾಟಕದಲ್ಲಿಯೇ ಡಿ.ಲಿಟ್. ಪದವಿಯನ್ನು ಪಡೆದ ಪ್ರಥಮ ವ್ಯಕ್ತಿಯಾಗಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾಗಿ, ಪ್ರಸಾರಾಂಗ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿರುತ್ತಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಕುಲಸಚಿವರಾಗಿ (ಮೌ) ಕಾರ್ಯನಿರ್ವಹಿಸಿದ್ದಾರೆ. ಸೃಜನಶೀಲ, ವೈಚಾರಿಕ, ಜಾನಪದ, ಸಾಹಿತ್ಯ, ಸಂಶೋಧನೆ, ಸಂಘಟನೆ ಇವರ ಪ್ರವೃತ್ತಿಗಳು. ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಚಿಂತನೆಯನ್ನು ಮೈಗೂಡಿಸಿಕೊಂಡು ಗಂಭೀರವಾದ ಅಧ್ಯಯನಕ್ಕೆ ತೊಡಗಿದ್ದಾರೆ. ಆ ನೆಲೆಯ ಚಿಂತನೆ ಮತ್ತು ಅಧ್ಯಯನಗಳನ್ನು ತಮ್ಮ ಬರಹ, ಭಾಷಣಗಳ ಮೂಲಕ ಜನಸಮೂಹಕ್ಕೆ ಮುಟ್ಟಿಸಲು ಶ್ರಮಿಸುತ್ತಿದ್ದಾರೆ. ಹೈದ್ರಾಬಾದ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು (ಸಂಶೋಧನ ಗ್ರಂಥ) ಜಾನಪದ ಸಿಂಗಾರ, ಜಾನಪದ ಆಯಾಮಗಳು, ಸಮಾಜೋ ಜಾನಪದ, ಜನಪದ ಕಲೆ ಸಂಸ್ಕøತಿ, ಜನಪದ ಕಲೆ ಸಮಸ್ಯೆ ಸವಾಲುಗಳು.

ಹೈ.ಕ. ಜನಪದ ವಾದ್ಯಗಳು, ದಲಿತ ಜಾನಪದ ಇವು ಜಾನಪದ ಕೃತಿಗಳು, ಅಂಬೇಡ್ಕರ್ ದಲಿತ ಚಳವಳಿ, ಬುದ್ಧನೆಡೆಗೆ, ದಲಿತಾಂತರಂಗ, ಅವೈದಿಕ ಚಿಂತನೆ, ಜೀವಪರ ಚಿಂತನೆ, ಸಂಸ್ಕøತಿ ಸಂಕ್ರಮಣ, ಶರಣ ಸಂಸ್ಕøತಿ ಸಂವಾದ, ನೀರನೆರಳು, ದಲಿತಲೋಕ, ಶರಣ ಸಂಸ್ಕøತಿ ಮತ್ತು. ಬಿ. ಶ್ಯಾಮಸುಂದರ್, ಅಂಬೇಡ್ಕರ್ ಸಂವೇದನೆ, ರಾಮಸ್ವಾಮಿ ಪೆರಿಯಾರ್, ಮಹಾತ್ಮ ಜ್ಯೋತಿಬಾ ಫುಲೆ, ಕುಮಾರ ಕಕ್ಕಯ್ಯ ಪೆÇೀಳ, ಅಂಬೇಡ್ಕರ್ ವಾಚಿಕೆ, ಅಂಬೇಡ್ಕರ್ ಸಂವೇದನೆ ಅಂಬೇಡ್ಕರ್ ಕಥನ, ಅಂಬೇಡ್ಕರ್ ಭಾರತ, ಅಂಬೇಡ್ಕರ್ : ಪುಸ್ತಕಪ್ರೀತಿ, ರಮಾಬಾಯಿ, ಭೂದೇವತೆಗಳ ಪ್ರಣಾಳಿಕೆಗಳು ಅಲ್ಲದೆ ಚಮ್ಮಾವುಗೆ, ಬೆತ್ತಲಾದ ಚಂದ್ರ, ಕರುಳರಿಯುವ ಹೆÇತ್ತು ಹಾಗೂ ಮಾದನ ಕರೆಂಟ್ ಕತಂತ್ರ (ಸಣ್ಣಕಥೆ) ಗಾಂಧಿಪ್ರತಿಮೆ (ಪ್ರಬಂಧ), ಬಯಲೆಂಬೊ ಬಯಲು (ಕಾದಂಬರಿ) ಮೊದಲಾದ ವಿಚಾರ, ವಿಮರ್ಶೆ, ಸೃಜನ, ಅನುವಾದ ಕ್ಷೇತ್ರಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಕೃತಿಗಳು. ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳು, ಕನ್ನಡ ದಲಿತ ಸಾಹಿತ್ಯ ಸಂಪುಟಗಳು, ಹೈದ್ರಬಾದ ಕರ್ನಾಟಕ ವಿಮೋಚನೆ ಹೋರಾಟಗಾರರ ಮಾಲೆ, ಕನ್ನಡ ಬೌದ್ಧ ಸಾಹಿತ್ಯ ಸಂಪುಟಗಳ ಪ್ರಧಾನ ಸಂಪಾದಕÁಗಿ ಒಟ್ಟು 36 ಸಂಪುಟಗಳನ್ನು ಪ್ರಕಟಿಸಿದ್ದಾರೆ.

ಸಮಾಜೋ ಜಾನಪದ ಕೃತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ರಾಜ್ಯ ಪ್ರಶಸ್ತಿ, ಅಂಬೇಡ್ಕರ್ ಭಾರತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಜ್ಯ ಪ್ರಶಸ್ತಿ, ಬಾಬಾಸಾಹೇಬರೆಡೆಗೆ ಖರ್ಗೆ ಜೀವನ ಕಥನ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹÅಮಾನ. ಭಂಗ ಕಥೆಗೆ ಸಂಕ್ರಮಣ ಪ್ರಶಸ್ತಿ, ದಿ. ಜಯತೀರ್ಥ ರಾಜಪುರೋಹಿತ ಚಿನ್ನದ ಪದಕ, ದಲಿತಾಂತರಂಗ ಹಾಗೂ ನೀರನೆಳಲು ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್ ಸಂವೇದನೆ ಕೃತಿಗೆ ಬೆಂಗಳೂರಿನ ಸ್ನೇಹಸೇತು ಸಾಂಸ್ಕøತಿಕ ವೇದಿಕೆಯ ಸ್ನೇಹ ಸೇತು ಪ್ರಶಸ್ತಿ, ಚಮ್ಮಾವುಗೆ ಕಥಾ ಸಂಕಲನಕ್ಕೆ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಶಸ್ತಿ, ಪಂಡಿತ ಪುಟ್ಟರಾಜ ಗವಾಯಿ ಪುರಸ್ಕಾರ, ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ, ದಲಿತ ಲೋಕ ಕೃತಿಗೆ ಎಲ್. ಬಸವರಾಜು ಅವರ ಅಮೃತ ಮಹೆÇೀತ್ಸವ ಸಮ್ಮೇಳನದ ಸವಿನೆನಪಿನ ದತ್ತಿ ಪ್ರಶಸ್ತಿ, ಎಚ್.ಎನ್. ಪ್ರಶಸ್ತಿ, ಅಮ್ಮ ಗೌರವ ಪುರಸ್ಕಾರ ಅಲ್ಲದೆ ಇವರ ಅನೇಕ ಕೃತಿಗಳು  ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪುರಸ್ಕಾರಕ್ಕೆ ಪಾತ್ರವಾಗಿವೆ. ‘ಚಮ್ಮಾವುಗೆ’ ಕಥಾ ಸಂಕಲನವು ಮರಾಠಿ, ತೆಲುಗು, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿದೆ. ‘ಭಂಗ’ ಕಥೆ ಫ್ರೆಂಚ್ ಭಾಷೆಗೆ, ಚಮ್ಮಾವುಗೆ, ಬೆತ್ತಲಾದ ಚಂದ್ರ, ಕರುಳರಿಯುವ ಹೆÇತ್ತು ಈ ಮೂರು ಸಂಕಲನಗಳು ಮರಾಠಿ ಭಾಷೆಗೆ ಅನುವಾದಗೊಂಡಿರುವುದು ಹೆಮ್ಮೆಯ ವಿಷಯ. ಇಂಗ್ಲೆಂಡ್, ಐರ್ಲ್ಯಾಂಡ್, ಆಸ್ಟ್ರೇಲಿಯಾ, ಥೈಲ್ಯಾಂಡ್, ಸಿಂಗಪುರಗಳಿಗೆ ವಿದೇಶ ಪ್ರವಾಸ ಮಾಡಿ ತಮ್ಮ ವಿದ್ವತ ಪೂರ್ಣ ಪ್ರಬಂಧವನ್ನು ಮಂಡಿಸಿರುತ್ತಾರೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

2 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

2 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

4 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

4 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

5 hours ago