ಬಿಸಿ ಬಿಸಿ ಸುದ್ದಿ

“ಓದು, ಬರಹ, ಭಾಷಣಕ್ಕೆ ರಹದಾರಿಯಾಗಿದ್ದರು ಡಾ. ಈಶ್ವರಯ್ಯ ಮಠ”

ಕಲಬುರಗಿ: ಸಾಹಿತಿ ಬಿ.‌ ಮಹಾದೇವಪ್ಪ ಹಾಗೂ ಪ್ರೊ. ಶಿವಶರಣ ಪಾಟೀಲ ಜಾವಳಿ, ಪ್ರೊ. ಕೆ. ವಿಶ್ವನಾಥ ಅವರ ಗರಡಿಯಲ್ಲಿ ಪಳಗಿದ ಡಾ. ಈಶ್ವರಯ್ಯ ಮಠ ಅವರು ತಮ್ಮೂರಿನ ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಿಂದ ಬೆಳೆದು ಬಂದವರು ಎಂದು ಸರ್ಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಜಿ.‌ಪಾಟೀಲ ಅಭಿಪ್ರಾಯಪಟ್ಟರು.

ಸಂಸ್ಕಾರ ಪ್ರತಿಷ್ಠಾನ, ಕಲಬುರಗಿ ಆರ್ಟ್ ಥಿಯೇಟರ್, ಪ್ರಗತಿ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಲಾ ಮಂಡಳ ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ. ಈಶ್ವರಯ್ಯ. ಮಠ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಡಾ. ಈಶ್ವರಯ್ಯ ಮಠ ಅವರ ಬದುಕು ಬರಹ ಕುರಿತು ಮಾತನಾಡಿದ ಅವರು, ಸಕಾರಾತ್ಮಕ ಭಾವನೆ ಬೆಳೆಸಿಕೊಂಡಿದ್ದ ಅವರು ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನು ಉಂಡು ಅದನ್ನು ಮೆಟ್ಟಿ ನಿಂತು ಎತ್ತರಕ್ಕೆ ಬೆಳೆದವರು. ಅಪಾರ ಪುಸ್ತಕ ಪ್ರೀತಿ ಬೆಳೆಸಿಕೊಂಡಿದ್ದ ಅವರು ಅನೇಕರಿಗೆ ಆಪತ್ಭಾಂದವರಾಗಿದ್ದರು ಎಂದು ತಿಳಿಸಿದರು.

7 ಸ್ವತಂತ್ರ ಕೃತಿ, 20 ಸಂಪಾದಿತ ಕೃತಿ ರಚಿಸಿದ್ದ ಈಶ್ವರಯ್ಯ ಅವರದು ಶಿಸ್ತಿನ ಅಧ್ಯಯನ ಮಾಡುತ್ತಿದ್ದರು. ತಾವಾಯಿತು ತಮ್ಮ ಓದು ಬರಹ, ಅಧ್ಯಾಪನವಾಯಿತು ಎಂಬಂತಿದ್ದ ಈಶ್ವರಯ್ಯ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಿ ಬಾರದ ನಷ್ಟವಾಗಿದೆ ಎಂದು ಹೇಳಿದರು.

ಡಾ. ಈಶ್ವರಯ್ಯ ಮಠ ಅವರ ಸಾಮಾಜಿಕ ಕಳಕಳಿ ಮತ್ತು ವ್ಯಕ್ತಿತ್ವ ಕುರಿತು ಮಾತನಾಡಿದ ಪತ್ರಕರ್ತ ಲೇಖಕ ಶಿವರಂಜನ್ ಸತ್ಯಂಪೇಟೆ, ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿದ್ದರೂ ಅವುಗಳನ್ನು ಆಚರಿಸದೆ ಅಪ್ಪಟ ವೈಚಾರವಾದಿಗಳಾಗಿದ್ದರು. ಅಸ್ಪೃಶ್ಯತೆ, ಜಾತಿ ಪದ್ಧತಿ ತೊಲಗಿಸುವಲ್ಲಿ ಸಾಕಷ್ಟು ದುಡಿದಿದ್ದಾರೆ. ಸದಾ ಓದು, ಬರಹ ಹಾಗೂ ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರು ಎಂದು ಹೇಳಿದರು.

ಧಡೂತಿ ದೇಹ, ದುಂಡನೆಯ ಮುಖ, ತೆಳ್ಳನೆಯ ಮೀಸೆ, ಗುಂಗುರು ಕೂದಲು, ಸಫಾರಿ ಧಿರಿಸು, ಬೆಳ್ಳನೆಯ ಕನ್ನಡಕ ಇವರ ಬಹಿರಂಗದ ನೋಟವಾಗಿದ್ದರೆ, ಪ್ರೀತಿ, ಮಮತೆ, ತಾಳ್ಮೆ, ಕಾಳಜಿ, ಕಕ್ಕುಲಾತಿ, ಗೌರವ, ಸಹಾಯ, ಸಹಕಾರದ ಗುಣಗಳು ಇವರ ಅಂತರಂಗದಲ್ಲಿ ಅಡಗಿದ್ದವು ಎಂದು ವಿವರಿಸಿದರು.

ನಿವೃತ್ತ ಪ್ರಾಚಾರ್ಯ ಪ್ರೊ. ಕೆ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಸಾಹಿತಿ ಡಾ. ಎಸ್. ಎಸ್. ಗುಬ್ಬಿ ಉಪಸ್ಥಿತರಿದ್ದರು.

ಕಪಿಲ್ ದೇವ ನಿರೂಪಿಸಿದರು.‌ ಅಲ್ಲಮಪ್ರಭು ನಿಂಬರ್ಗಾ, ಸುನಿಲ ಮಾನಪಡೆ, ವಿಠ್ಠಲ್ ಚುಕಣಿ ವೇದಿಕೆಯಲ್ಲಿದ್ದರು. ಪಿ.ಎಂ.‌ಮಣ್ಣೂರ, ಸಿದ್ಧರಾಮ ಹೊನ್ಕಲ್, ಮಲ್ಲಿಕಾರ್ಜುನ ಮಠ, ಡಾ. ಸೂರ್ಯಕಾಂತ ಪಾಟೀಲ, ಪ.‌ಮಾನು ಸಗರ, ಡಾ. ದೇವಿದಾಸ ಮಾಲೆ, ಗುರುಬಸಪ್ಪ ಪಾಟೀಲ, ಗುರುಪಾದೇಶ್ವರ ಪಾಟೀಲ, ನರಸಿಂಗರಾವ ಹೆಮನೂರ, ರುಕ್ಮಣಿ ನಾಗಣ್ಣನವರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

6 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

6 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

8 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

8 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

8 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

9 hours ago