ಶಹಾಬಾದನ: ರಾಜ್ಯಹೆದ್ದಾರಿ ಕಳಪೆ ಮಟ್ಟದಿಂದ ನಿರ್ಮಿಸಿದ ಸರಕಾರದ ನಿರ್ಲಕ್ಷತನವನ್ನು ಎಸ್‌ಯುಸಿಐ ಕಮುನಿಷ್ಟ ಪಕ್ಷವು ತಿವ್ರವಾಗಿ ವಿರೋದಿಸುತ್ತೆವೆಂದು ಎಸ್ ಯುಸಿಐ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ ಎಸ್ ಇಬ್ರಾಹಿಂಪೂರ ಹೇಳಿದರು.
ಅವರು ಬಸವೇಶ್ವರ ವೃತ್ತದಲ್ಲಿ ಎಸ್ ಯುಸಿಐ ಕಮುನಿಷ್ಟ ಪಕ್ಷವುಹಮ್ಮಿಕೊಂಡಿದ್ದ ರಾಜ್ಯ ಹೆದ್ದರಿ ದುರಸ್ತಿಗೊಳಿಸಿ ಪ್ರತಿಭಟನೆಯಲ್ಲಿ ಮಾತನಾಡಿದರು. ಮುಂದುವರೆದು ಅವರು ನಗರದ ಮಧ್ಯದಲ್ಲಿ ವಾಡಿ ಕ್ರಾಸ್ ನಿಂದ ಎಸ್.ಎಸ್ ಮರಗೋಳ ಕಾಲೇಜನ ವರೆಗೆ ಹಾದುಹೋಗಿದ್ದು ಆದರೆ ಈ ರಸ್ತೆಯು ಸರಕಾರವು ತಿವ್ರ ಕಳಪೆ ಮಟ್ಟದ್ದಲ್ಲಿ ಕಾಮಗಾರಿಕೈಗೋಂಡಿದ್ದು ತಗ್ಗು ದಿಂಬಿಗಳಿಂದ ವಾಹನ ಸವಾರರು ಸಾರ್ವಜನಿಕರು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕಳೆದ ತಿಂಗಳು ಪ್ರತಿಭಟನೆ ಮಾಡಿದರಿಂದ ಕೇವಲ ಕಂಕರ್ ಮುರಮ್ ಹಾಕಿ ಟೂತ್‌ಪಾಲಿಸಿ ಕೆಲಸ ಮಾಡಲಾಗಿದೆ ಇದರಿಂದ ಸಾರ್ವಜನಿಕರಿಗೆ ಇನ್ನೂ ಹೇಚ್ಚು ತೊಂದರೆಯಾಗುತ್ತದೆ ಇದರ ಬದಲಾಗಿಹೋಸ ರಸ್ತೆ ನಿರ್ಮಿಸಬೇಕು ಇದರ ಬಗ್ಗೆ ಮಾನ್ಯ ಶಾಸಕರು , ಜಿಲ್ಲಾಧಿಕಾರಿಗಳು ಗಮನಹರಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಇದೆ ಸಂದರ್ಭದಲ್ಲಿ ಎಸ್ ಯುಸಿಐ ಕಮುನಿಷ್ಟ ಪಕ್ಷದ ಕಾರ್ಯದರ್ಶಿಗಳಾದ ಗಣಪತ್‌ರಾವ್ ಕೆ ಮಾನೆ ಮಾತನಾಡುತ್ತ ನಗರ ಸಭೆಯು ರಿಂಗ್ ರೋಡ್ ನಿಂದ ಶಾಸ್ತ್ರಿ ಚೌಕ್ ವರೆಗು ಉತ್ತಮ ರಸ್ತೆ, ಒಳಚರಂಡಿ ಹಾಗೂ ಬಿದಿ ದೀಪಗಳು ಅಳವಡಿಸಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಎಸ್‌ಯುಸಿಯ ಕಮುನಿಷ್ಟ ಪಕ್ಷದ ಸದಸ್ಯರಾದ ರಾಘವೇಂದ್ರ ಎಮ್.ಜಿ,ಜಗನ್ನಾಥ ಎಸ್.ಹೆಚ್, ಗುಂಡಮ್ಮ ಮಡಿವಾಳ, ರಾಜೇದ್ರ ಅತನೂರು, ಸಿದ್ದು ಚೌದರಿ, ಶಿವುಕುಮಾರ ಇ.ಕೆ ತಿಮ್ಮಯ್ಯ ಬಿ ಮಾನೆ, ನೀಲಕಂಠ ಎಮ್.ಹುಲಿ, ತುಳಜರಾಮೆ.ನ್.ಕೆ, ರಮೇಶ ದೆವಕರ್, ರಾಧಿಕ ಚೌದರಿ, ಶಿಲ್ಪಾ ಎಮ್.ಹುಲಿ, ಹಾಗೂ ಆಟೋ ಯುನಿಯನ್ ನ ಸದಸ್ಯರಾದ ಮಂಜುನಾಥ ಖಾನಪೂರ ಮಹ್ಮದ್ದ್‌ಖಲಿಲ್ ಉಪಾಸ್ಥಿತರಿದ್ದರು.
ತಹಸೀಲ್ದಾರರಿಗೆ ಹೋರಾಟಗಾರರು ರಾಜ್ಯ ಹೆದ್ದರಿ ಬಗ್ಗೆ ವಿವರ ಕೇಳಿದಾಗ ಸರಯಾದ ಉತ್ತರ ನೀಡದೆ ನಾನು ಮೇಲಾಧಿಕಾರಿ ಜೋತೆ ಮಾತನಾಡುತ್ತೆನೆ ಎಂದು ಸಂಜಾಯಿಸಿ ನೀಡಿದರು. ಹೋರಾಟಗಾರರು ಕಳೆದು ತಿಂಗಳು ಕೂಡ ಪ್ರತಿಭಟನೆಮಾಡಲಾಗಿತ್ತು ತಾವು ಯಾರ ಜೋತೆ ಮಾತನಾಡಿದಿರಿ,ಏನು ಕ್ರಮ ತೆಗೆದುಕೊಂಡಿದ್ದಿರಿ ಯಾವುದಾದರು ಖಚಿತ ಮಾಹಿತಿ ಕೊಡಿ ಎಂದು ಆಕ್ರೋಶ ವ್ಯೆಕ್ತಪಡಿಸಿದರು.
ಕೋನೆಗೆ ತಹಸೀಲ್ದಾರಾದ ಸುರೇಶ ವರ್ಮ ರವರು ಮಾತನಾಡಿ ಹೊಸ ಜಿಲ್ಲಾಧಿಕಾರಿ ಬಂದಿದ್ದಾರೆ ಅವರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೆನೆ ನಗರದ ಅಭಿವೃದ್ದಿಗೆ ಶಾಂತರಿತಿಯಿಂದ ಹೋರಾಟ ಮಾಡುತ್ತಿರುವುದು ಸಂಘಟನಕಾರರಿಗೆ ಅಭಿನಂದನೆಗಳು ಸಲ್ಲಿಸಿ ಮನವಿ ಪತ್ರ ಸ್ವಿಕರಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…