ಧಾರವಾಡ: ಬೇಡ ಜಂಗಮ ಜಾತಿಯ ಜನರ ಬಗ್ಗೆ ಸರಕಾರ ಮತ್ತು ಅಧಿಕಾರಿಗಳಿಂದ ನಿರ್ಲಕ್ಷತನ ಮುಂದುವರೆದಿದೆ ಅದಕ್ಕಾಗಿ ನೇತಾಜಿ ಸುಭಾಶಚಂದ್ರ ಭೋಸರು ಕಟ್ಟಿದ್ದ ಅಜಾದ್ ಹಿಂದ್ ಫೌಜ್ ಮಾದರಿಯಲ್ಲಿ ಬೇಡಜಂಗಮರ ಹಕ್ಕು ರಕ್ಷಣಗೆ ಸೈನ್ಯ ಕಟ್ಟುವುದಾಗಿ ಹೈಕೋರ್ಟ ನ್ಯಾಯವಾದಿ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಭೃಂಗಿಮಠ ಅವರು ಗುಡುಗಿದರು.
ಧಾರವಾಡದಲ್ಲಿ ನಡೆದ ಬೇಡ ಜಂಗಮರ ರಾಜ್ಯ ಮಟ್ಟದ ಚಿಂತನ ಮಂತನ ಸಭೆಯಲ್ಲಿ ಮಾತನಾಡುತ್ತಾ, ನೇತಾಜಿ ಸುಭಾಶಚಂದ್ರ ಬೋಸರು ಸ್ವತಂತ್ರ್ಯ ಸಮಯದಲ್ಲಿ ಕಟ್ಟಿದ ಸೈನ್ಯದಂತೆ ಕರ್ನಾಟಕದಲ್ಲಿ ಬೇಡ ಜಂಗಮರ ಸೈನ್ಯ ಕಟ್ಟುತ್ತೇವೆ. ಈ ಮೂಲಕ ಸರಕಾರದ ನಿರ್ಲಕ್ಷತನ ಖಂಡಿಸುತ್ತೇವೆ ಎಂದು ಭೃಂಗಿಮಠ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಬೇಡ ಜಂಗಮ ಸಂಘಟನೆಗಳ ಮುಖಂಡರು ಬಿ. ಡಿ. ಹಿರೇಮಠ ನೇತೃತ್ವದಲ್ಲಿ ಅಯೋಜಿಸಿದ ಬೇಡ ಜಂಗಮರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು ಬೇಡ ಜಂಗಮರೆಲ್ಲರೂ ವೈಶ್ಯಮ್ಯ ಮರೆತು ನಾವೆಲ್ಲಾ ಒಗ್ಗಟ್ಟಾಗಿ ಬೇಡ ಜಂಗಮರ ಬಡತನ ವಿರುದ್ದ ಹೋರಾಡೋಣಾ, ಜಂಗಮರ ಬಡತನಕ್ಕೆ ದ್ವನಿ ಸ್ಪಂಧಿಸದ ರಾಜಕಾರಣಿಗಳಿಗೆ ಮುಂದಿನ ದಿನಗಳಲ್ಲಿ ಬಿಸಿ ಮುಟ್ಟಿಸೋಣಾ, ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಹೋರಾಟ ಮಾಡೋಣ, ಬೇಡ ಜಂಗಮರ ಶಕ್ತಿ ಬರುವ ದಿನಗಳಲ್ಲಿ ತೋರಿಸುತ್ತೇವೆ, ಜಂಗಮರ ವಿರುದ್ದ ಮಾತನಾಡುವ ರಾಜಕಾರಣಿಗಳಿಗೆ ಅಧಿಕಾರದಿಂದ ಕೆಳೆಗೆ ಇಳಿಸುತ್ವಿತೇವೆ ಎಂದು ಎಚ್ಚರಿಸಿದರು.
ಈ ವೇಳೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜಂಗಮ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಬಿ.ಡಿ ಹಿರೇಮಠರನ್ಮು ಒಕ್ಕೂಟದ ಅಧ್ಯಕ್ಷರನ್ನಾಗಿ ಒಮ್ಮತದಿಂದ ನೇಮಿಸಲಾಯಿತು.
ಗಣಿದಣಿ ಬಳ್ಳಾರಿ, ಮೃತುಂಜಯ ಹಿರೇಮಠ, ಕೂಡಗಿಮಠ, ರಾವೂರ ಮಠ, ಭಂಗಾರೇಶ, ಚಂದ್ರಕಾಂತ ಹಿರೇಮಠ,ಚಂದ್ರಶೇಖರ ಗಣಕುಮಾರ, ಸಾವಳಗಠ, ಹುಬ್ಬಳಿಮಠ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…