ಸುರಪುರ: ಇದೇ ತಿಂಗಳ ೧ನೇ ತಾರೀಖು ನಿಧನರಾದ ಪತ್ರಕರ್ತ ಸೋಮಶೇಖರ ನರಬೋಳಿಯವರ ಕುಟುಂಬಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ೫೦ ಸಾವಿರ ರೂಪಾಯಿಗಳ ಧನ ಸಹಾಯ ನೀಡುವುದಾಗಿ ನರಬೋಳಿಯವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ಶಾಸಕರನ್ನು ಭೇಟಿ ಮಾಡಿದ ನಿಯೋಗಕ್ಕೆ ವಿಷಯ ತಿಳಿಸಿ ಮಾತನಾಡಿ, ಸೋಮಶೇಖರ ನರಬೋಳಿಯವರು ಒಬ್ಬ ಸೌಮ್ಯ ಸ್ವಭಾವದ ಪತ್ರಕರ್ತರಾಗಿದ್ದು ಅವರ ನಿಧನದ ಸುದ್ದಿ ತಿಳಿದು ತುಂಬಾ ಬೇಸರವಾಯಿತು. ಒಬ್ಬ ನಿಷ್ಟಾವಂತ ಪತ್ರಕರ್ತನನ್ನು ಕಳೆದು ಕೊಂಡ ನೋವು ಸದಾ ಕಾಡಲಿದೆ ಎಂದು ತಿಳಿಸಿದರು.ಅಲ್ಲದೆ ಸೋಮಶೇಖರ ನರಬೋಳಿಯವರ ಕುಟುಂಬಕ್ಕೆ ಹಾಗು ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದಿಮದ ನಿಧನರಾದ ಹುಣಸಗಿಯ ಪತ್ರಕರ್ತ ಗೋಪಾಲರಾವ್ ಕುಲಕರ್ಣಿಯವರ ಕುಟುಂಬಕ್ಕೆ ತಲಾ ೫೦ ಸಾವಿರ ರೂಪಾಯಿಗಳ ಧನ ಸಹಾಯ ಮಾಡುವುದಾಗಿ ತಿಳಿಸಿದರು.
ಸೋಮಶೇಖರ ನರಬೋಳಿಯವರ ನಿಧನ ಕೋವಿಡ್‌ನಿಂದ ಆಗಿದೆ,ಅವರ ಅಂತ್ಯಕ್ರೀಯೆಯನ್ನು ಆರೋಗ್ಯ ಇಲಾಖೆ ಕೋವಿಡ್ ನಿಯಮದಂತೆ ನೆರವೇರಿಸಿದೆ ಎಂಬುದನ್ನು ಗಮನಕ್ಕೆ ತರುವ ಜೊತೆಗೆ ಇವರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಧನವನ್ನು ಕೊಡಿಸುವಂತೆ ಕೆಜೆಯು ವತಿಯಿಂದ ಮನವಿ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಧನವನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಜಿಲ್ಲಾಧ್ಯಕ್ಷ ಡಿ.ಸಿ ಪಾಟೀಲ್,ಕರ್ನಾಟಕ ವರ್ಕಿಂಗ್ ಜರ್ನಲಿಸ್ಟ್ಸ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಇಂದೂಧರ ಸಿನ್ನೂರ,ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಸೋಮಶೇಖರ ನರಬೋಳಿಯವರ ಸಹೋದರ ರವಿಕುಮಾರ ನರಬೋಳಿ ಮಲ್ಲು ಗುಳಗಿ ಮಲ್ಲಿಕಾರ್ಜುನ ಹತ್ತಿಕುಣಿ ಧಿರೇಂದ್ರ ಕುಲಕರ್ಣಿ ಪರಶುರಾಮ ಮಲ್ಲಿಬಾವಿ ವಿರುಪಾಕ್ಷಯ್ಯಸ್ವಾಮಿ ಯಾದಗಿರಿ ಮಹಾದೇವಪ್ಪ ಬೊಮ್ಮನಹಳ್ಳಿ ಮುರಳಿಧರ ಅಂಬುರೆ ನಾಗರಾಜ ದೇಸಾಯಿ ಮನಮೋಹನ ದೇವಾಪುರ ಮದನಲಾಲ ಕಟ್ಟಿಮನಿ ಹಾಗು ಮುಖಂಡರಾದ ಬಸನಗೌಡ ಹಳ್ಳಿಕೋಟಿ ಮೇಲಪ್ಪ ಗುಳಗಿ ಅಮರಣ್ಣ ಹುಡೇದ್ ಮಲ್ಲಿಕಾರ್ಜುನ ರಡ್ಡಿ ಅಮ್ಮಾಪುರ ಪರಶುರಾಮ ನಾಟೆಕಾರ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…