ಬಿಸಿ ಬಿಸಿ ಸುದ್ದಿ

ಬ್ಯಾಂಕ್ ಖಾಸಗೀಕರಣ ದೇಶದ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಆಘಾತ: ಎಚ್. ವಿ. ರೈ

ಬೆಂಗಳೂರು: ಕೇಂದ್ರ ಸರಕಾರದ ವಕ್ತಾರರು ಇತ್ತೀಚೆಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಖಾಸಗೀಕರಣ ಮಾಡುತ್ತೇವೆ ಎಂಬುದಾಗಿ ಪ್ರಕಟಿಸಿರುತ್ತಾರೆ. ಇದು ಬ್ಯಾಂಕ್ ಗ್ರಾಹಕರಿಗೆ ಮತ್ತು ಜನಸಾಮಾನ್ಯರಿಗೆ ಆತಂಕವನ್ನುಂಟು ಮಾಡಿದೆ. ಏಕಂದರೆ ಖಾಸಗೀಕರಣ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿಗೆ ತುಂಬಾ ಆಘಾತ ಆಗಲಿಕ್ಕಿದೆ. ಮಾತ್ರವಲ್ಲದೆ ಬ್ಯಾಂಕ್ ಠೇವಣಿದಾರರ ಭದ್ರತೆಗೆ ತುಂಬಾ ಭಯದ ವಾತಾವರಣ ಉಂಟು ಮಾಡಲಿದೆ ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಅಧ್ಯಕ್ಷರಾದ ಕಾಮರೆಡ್ ಎಚ್. ವಿ. ರೈ ತಿಳಿಸಿದ್ದಾರೆ.

ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುತ್ತಿರುವ ಈ ಕುರಿತು ಗ್ರಾಹಕರು ಮತ್ತು ಸಾರ್ವಜನಿಕರಿಗೆ ಮನವಿ ಪತ್ರ ಬಿಡುಗಡೆ ಮಾಡಿದ ಅವರು, ಸುಮಾರು ೫೧ ವರ್ಷಗಳ ಹಿಂದೆ ನಮ್ಮ ದೇಶದ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ೧೯೬೯ರ ವರೆಗೆ ನಮ್ಮ ದೇಶದ ಬ್ಯಾಂಕುಗಳು ಖಾಸಗೀ ಕ್ಷೇತ್ರದಲ್ಲಿ ಇದ್ದ ವು. ಈ ಖಾಸಗೀ ಬ್ಯಾಂಕುಗಳ ಮಾಲೀಕರೂ ಈ ದೇಶದ ಆರ್ಥಿಕ ಬೆಳವಣಿಗೆಗೆ ಅಸಡ್ಡೆ ವರ್ತನೆಯನ್ನು ತೋರಿಸುತ್ತಿದ್ದರೆಂದೂ ಸರ್ವವಿದಿತದೆ ಎಂದರು.

ಈ ಬಂಡವಾಳಗಾರರು ತಮ್ಮ ಕೈಗಾರಿಕೆಗಳು ಮತ್ತು ತಮಗೆ ಬೇಕಾದವರಿಗೆ ಮಾತ್ರ ಈ ಬ್ಯಾಂಕುಗಳ ಠೇವಣಿಯನ್ನು ಉಪಯೋಗಿಸುತ್ತಿದ್ದು, ಬ್ಯಾಂಕಿನಲ್ಲಿರುವ ಹಣ ಸಾರ್ವಜನಿಕರ ಹಣ ಎಂಬುದನ್ನು ನಾವು ನೆನಪಿಡಬೇಕು. ಮತ್ತು ಈ ಹಣವನ್ನು ನಮ್ಮ ದೇಶದ ಬೆಳವಣಿಗೆಗಾಗಿಯೇ ಉಪಯೋಗಿಸಬೇಕು. ಬಂಡವಾಳಗಾರರು ಮತ್ತು ಕಾರ್ಪೋರೇಟುಗಳು ಈ ಹಣವನ್ನು ದುರುಪಯೋಗಿಸಲು ಬಿಡಬಾರದು ಎಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಕರಣವಾದನಂತರ ಈ ಬ್ಯಾಂಕುಗಳು ತುಂಬಾ ಒಳ್ಳೆಯ ರೀತಿಯ ಬೆಳವಣಿಗೆಯನ್ನು ಕಂಡಿದೆ ಈ ಬ್ಯಾಂಕುಗಳಲ್ಲಿ ಈಗ ಸಾರ್ವಜನಿಕರ ಲಕ್ಷಾಂತರ ಕೋಟಿ ಠೇವಣಿಗಳಿವೆ. ಈ ಹಣವನ್ನು ನಮ್ಮ ದೇಶದ ಕೈಗಾರಿಕಾ ಬೆಳವಣಿಗೆ, ರಸ್ತೆ ಇತ್ಯಾದಿ ಬೆಳವಣಿಗೆ ವ್ಯವಸಾಯ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ, ಮಧ್ಯಮ ವರ್ಗದವರಿಗೆ ಬೇಕಾಗುವ ಸಾಲಗಳಿಗೆ ಆಟೋ ರಿಕ್ಷಾ ಮತ್ತು ಇತರೆ ವಲಯದ ಸ್ವಾಲಂಬಿಗಳಿಗೆ ಸಾಲ ಪಡೆಯಲು ಸಹಕಾರಿಯಾಗಿ, ದೇಶದ ಆರ್ಥಿಕ ಬೆಳವಣಿಗೆಯ ಜೀವನಾಡಿಯಾಗಿವೆ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಈಗಿನ ಕೇಂದ್ರ ಸರಕಾರ ತಮ್ಮದೇ ಆದ ಕಾರಣಗಳಿಗಾಗಿ ಈ ದೇಶದ ಎಲ್ಲ ಸಾರ್ವಜನಿಕ ಕ್ಷೇತ್ರದಲ್ಲಿರುವ ಕೈಗಾರಿಕೆಗಳು, ಬ್ಯಾಂಕುಗಳು ಇನ್ಶೂರೆನ್ಸ್ ಮತ್ತಿತರ ಎಲ್ಲಾ ಪ್ರಮುಖ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ. ಈ ಆಸ್ತಿಗಳನ್ನು ಮಾರಲು ಸರಕಾರಕ್ಕೆ ಯಾವ ನೈತಿಕ ಹಕ್ಕಿಲ್ಲ. ಇದು ಈ ದೇಶದ ಜನರು ಉಂಟು ಮಾಡಿದ ಹಣದಿಂದ ಕಟ್ಟಿದಂತ ಸೊತ್ತುಗಳಾಗಿವೆ ಎಂದು ಕೇಂದ್ರ ಸರಕಾರದ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕೇಂದ್ರ ಸರ್ಕಾರದ ಮುಖ್ಯ ಉದ್ದೇಶ ಕಾರ್ಪೋರೇಟುಗಳಿಗೆ ಬೆಂಬಲ ಕೊಡುವುದಾಗಿದೆ ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಸಾಕಷ್ಟು ನಿದರ್ಶನಗಳಿವೆ ಅಂತರ ರಾಷ್ಟ್ರೀಯ ಬಂಡವಾಳಕ್ಕೆ ಕೂಡ ಅನುಕೂಲ ಮಾಡುವುದು ಈ ಸರ್ಕಾರದ ಧ್ಯೇಯ. ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಈ ಸರ್ಕಾರ ಸ್ಪಂದಿಸುವ ಧ್ಯೇಯ ಇದ್ದಹಾಗೆ ಕಾಣುವುದಿಲ್ಲ. ಬ್ಯಾಂಕ್ ಖಾಸಗೀಕರಣ ನಮ್ಮ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಆಘಾತವನ್ನುಂಟು ಮಾಡುತ್ತದೆ. ಬಡವರಿಗೆ ಜನ ಸಾಮಾನ್ಯರಿಗೆ, ಸಣ್ಣಪುಟ್ಟ ರೈತರಿಗೆ, ಕೈಗಾರಿಕೆಗಳಿಗೆ ಸಾಲಗಳು ಸಿಗದೇ ಹೋಗಬಹುದು. ಈ ದೇಶ ಲೂಟಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೋಸ್ಕರ ಹೋರಾಡಿದ ಸಂಘಟನೆ, ಈಗ ಈ ಖಾಸಗೀಕರಣದ ವಿರುದ್ಧ ನಮ್ಮ ಚಳುವಳಿ / ಹೋರಾಟದ ಮೂಲಕ ದೇಶದ ಹಿತಾಸಕ್ತಿ ಕಾಯುವುದಾಗಿದೆ ಎಂದ ಅವರು ಜನಪ್ರತಿಗಳು ಹಾಗೂ ಸಾರ್ವಜನಿಕರು ಸರ್ಕಾರದ ಈ ತಪ್ಪು ನೀತಿ ಒಪ್ಪದೇ ವಿರೋಧಿಸಬೇಕು ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಸಂಘಟನಾ ಕಾರ್ಯದರ್ಶಿ ಎಮ್. ಜಯನಾಥ್ ಕರೆ ನೀಡಿದ್ದಾರೆ.

emedialine

View Comments

  • ನಾನು ಸಂಪೂರ್ಣವಾಗಿ ಸಮ್ಮತಿಸುತ್ತೇನೆ ರೈಗಳೇ! ರಾಷ್ಟ್ರೀಕರಣದ ಉದ್ದೇಷವೇ ಬ್ಯಾಂಕಿನ ಎಲ್ಲಾ ವ್ಯವಹಾರಗಳು ದೇಶದ ಸಾಮಾನ್ಯ ಪ್ರಜೆಗಳಿಗೂ ಸಿಗಬೇಕು ಎನ್ನುವ ಸದುದ್ದೇಶದಿಂದ ಆಗಿದ್ದು! ಮಾನ್ಯ ಈಗಿನ ಪ್ರಧಾನಮಂತ್ರಿ ಮೋದಿಯವರೇ ಹೇಳಿದ್ದಾರೆ ಮೊದಲ ಬಾರಿ ಪ್ರಧಾನಿಯಾದಾಗ, ಅವರ ಒಂದು ಬ್ಯಾಂಕಿನ ಖಾತೆ (ಬಹುಶ: ಇನ್ಡಿಯನ್ ಓವರ್ಸಿಸ್ ಬ್ಯಾಂಕಿನದು) ಬಂದ್ ಮಾಡುವುದಕ್ಕೆ ಬ್ಯಾಂಕಿನ ಸಿಬ್ಬಂದಿ ಇವರನ್ನು ಹುಡುಕಿ, ಹುಡುಕಿ ಕೊನೆಗೆ "ನನ್ನ ಹತ್ತಿರ ಪತ್ರ ಬರೆಸಿಕೊಂಡು, ಆ ಖಾತೆಯನ್ನು ಮುಚ್ಚುವಂತೆ ಮಾಡಿದರು" ಎಂದು ಪ್ರಶಂಸೆ ಮಾಡಿದ ವ್ಯಕ್ತಿ, ಈ ವಿಷಯವನ್ನು, ರಾಜಕೀಯದ ತಿರುವು ಕೊಡುವುದು, ತೀರ ಅಲ್ಪವಾಗುವುದು!! ಶುಭರಾತ್ರಿ ರೈಗಳೆ, - ಮಧುಕರ್ ರಾವ್ ವಿ. ೧೯೮೦-೮೩ ಗುಲ್ಬರ್ಗ ಮೈನ್ ಶಾಖೆಯ ಸಿಬ್ಬಂದಿ, ಮಾನ್ಶ ಶಶಿಕಾಂತ್, ತಂತ್ರಿ ಅಥವಾ ಮುನಿರವರಿಗೆ ಕೇಳಿ ನೋಡಿ! ಶುಭರಾತ್ರಿ!

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago