ಕಲಬುರಗಿ: ೧೯೬೧ ರಿಂದಲೇಡಾ.ಬಿ.ಡಿ. ಜತ್ತ್ತಿಅವರ ಸಂಪರ್ಕ ನನಗೆ ಬಂದಿತ್ತು.ಅವರಲ್ಲಿಅತ್ಯಂತಕಠಿಣ ಸಮಯದಲ್ಲೂ ಸೂಕ್ತ ಮಾರ್ಗದರ್ಶನ ಮಾಡುವ ಸಮಚಿತ್ತಇತ್ತುಎಂದು ಬೆಂಗಳೂರಿನ ಬೇಲಿಮಠದ ಪೂಜ್ಯ ಶಿವರುದ್ರ ಸ್ವಾಮಿಗಳು ಅಭಿಪ್ರಾಯ ಪಟ್ಟರು.ಅವರು ಬೆಂಗಳೂರು ಕಲಬುರಗಿ ಹಾಗೂ ಧಾರವಾಡ ಬಸವ ಸಮಿತಿಗಳು ಒಟ್ಟಾಗಿ ದಿನಾಂಕ : ೧೦-೦೯-೨೦೨೦ ರಂದುಡಾ. ಬಿ. ಡಿಜತ್ತಿಅವರ ೧೦೮ನೇ ರಂದುಜನ್ಮದಿನವನ್ನು ಬಸವ ಸಮಿತಿಯ ಸಂಸ್ಥಾಪಕರ ದಿನಾಚರಣೆಯಾಗಿಆಚರಿಸುವ ಸಮಾರಂಭವನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.
ಡಾ. ಜತ್ತಿಅವರು ಹುಟ್ಟಿದಾಗ ಉಸಿರಿತ್ತು ಹೆಸರಿರಲಿಲ್ಲ, ಆದರೆಅವರು ಲಿಂಗೈಕ್ಯರಾದಾಗಅವರ ಹೆಸರಿತ್ತುಅವರಿಗೆ ಉಸಿರಿರಲಿಲ್ಲ ಎಂದು ಮಾಜಿ ಲೋಕಸಭಾ ಸದಸ್ಯರಾದ ಪ್ರೋ. ಐ.ಜಿ. ಸನದಿ ಅವರುಅಭಿಪ್ರಾಯ ಪಟ್ಟರು.ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಬಹಳ ಸಾಧಾರಣಕುಟುಂಬದಿಂದ ಬಂದವರೂಅದ್ಭುತ ಸಾಧನೆಯನ್ನು ಮಾಡಬಹುದು, ಎತ್ತರದ ಸ್ಥಾನವನ್ನು ಮುಟ್ಟಬಹುದುಎಂಬುದಕ್ಕೆಡಾ.ಬಿ.ಡಿ ಜತ್ತಿ ಅವರು ಒಂದು ಅಪರೂಪದ ಉದಾಹರಣೆಯಾಗಿದ್ದಾರೆ ಎಂದರು.
ಜತ್ತಿಅವರು ಪಕ್ಕಾ ಬಸವಣ್ಣನವರ ಭಕ್ತರು. ಒಂದುಕೈಯಲ್ಲಿರಾಜಕೀಯ, ಇನ್ನೊಂದುಕೈಯಲ್ಲಿಧರ್ಮ ಹಿಡಿದು ಸಾರ್ಥಕ ಬದುಕು ಬದುಕಿದವರುಎಂದು ವಿವರಿಸಿದರು. ಕಲಬುರಗಿ ಬಸವ ಸಮಿತಿಯಅಧ್ಯಕ್ಷರೂಡಾ.ಬಿ.ಡಿ. ಜತ್ತಿಅವರ ಪ್ರೀತಿಯ ಮಗಳಾದ ಡಾ. ವಿಲಾಸವತಿ ಖೂಬಾ ಅವರುತಮ್ಮತಂದೆಯೊಂದಿಗಿನ ಬಾಲ್ಯದ ಅನುಭವಗಳನ್ನು ಹಂಚಿಕೊಂಡರು. ಮುಂಬಯಿ ನಗರದಲ್ಲಿದ್ದರೂ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದ್ದು, ಖಾದಿ ಬಟ್ಟೆಗಳನ್ನೇ ತೊಡಲು ಪ್ರೋತ್ಸಾಹಿಸಿದ್ದು, ಸರ್ಕಾರಿ ಕಾರುಗಳನ್ನು ತಮ್ಮ ಮಕ್ಕಳಿಗೆ ಶಾಲೆಗೆ ಕಳಿಸಲು ಬಳಸದೆ ಇರುವುದು ಈ ಮುಂತಾದ ನೆನಪುಗಳನ್ನು ಮಾಡಿಕೊಂಡರು.
ಇಂದಿರಾಗಾಂಧಿಅವರುತಮ್ಮ ಮನೆಗೆ ಬಂದಾಗ, ತಮ್ಮತಾಯಿ ಆಕಳ ಹಾಲು ಬಿಟ್ಟುಕೊಳ್ಳುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿಯೇ ಭೇಟಿಯಾದದ್ದು, ಆಗ ಹಿಂಡಿಕೊಂಡ ಹಾಲನ್ನೇತಮ್ಮತಾಯಿಇಂದಿರಾಗಾಂಧಿಅವರಿಗೆ ಕುಡಿಸಿದ್ದು ಇವೆಲ್ಲತಮ್ಮಅಪರೂಪದ ಅನುಭವಗಳಾಗಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿಕೇಂದ್ರ ಬಸವ ಸಮಿತಿಯಅಧ್ಯಕ್ಷರಾದ ಅರವಿಂದಜತ್ತಿ, ಶಾರಾದಾಜತ್ತಿ ಉಪಸ್ಥಿತರಿದ್ದರು.ಶ್ರೀಮತಿ ಭುವನೇಶ್ವರಿಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…