ಜೇವರ್ಗಿ; ಪಟ್ಟಣದ ಕನಕದಾಸ ಚೌಕ್ ನಲ್ಲಿರುವ ಅಮರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿದ್ದ ಬಸಪ್ಪ .ಎಸ್. ಮ್ಯಾಗೇರಿ 9 ರಂದು ಅವರ ನಿಧನರಾದ ಕಾರಣವಾಗಿ ಶಾಲೆಯ ಸಹ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ವತಿಯಿಂದ ಮುಖ್ಯಗುರುಗಳ ನಿಧನಕ್ಕೆ ಸಂತಾಪವನ್ನು ಸೂಚಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಶಾಲೆಯ ನಿವೃತ್ತ ಸಮಾಜ ಶಿಕ್ಷಕರಾಗಿರುವ ಬಸವರಾಜ ಅರಳಗುಂಡಗಿ, ಹಳೆಯ ವಿದ್ಯಾರ್ಥಿಯಾದ ವಿರಾಜಕುಮಾರ್ ಕಲ್ಯಾಣಿ ರವರು ಮಾತನಾಡಿದರು.
ಅತ್ಯುತ್ತಮ ಶಿಕ್ಷಕರಾಗಿ ನಮ್ಮ-ನಿಮ್ಮೆಲ್ಲರ ಮಾರ್ಗದರ್ಶಕರಾಗಿದ್ದ, ಸರಳ ಸ್ನೇಹ ಜೀವಿ ಆಗಿದ್ದ ಮುಖ್ಯಗುರುಗಳಾದ ದಿವಂಗತ ಬಿ.ಎಸ್ ಮ್ಯಾಗೇರಿ ಸರ್ ರವರ ಅಗಲಿಕೆಯು ದಿಗಿಲು, ಬರ ಸಿಡಿಲು ಬಡಿದಂತಾಗಿದೆ, ಸರಿ ಸುಮಾರು ನಲವತ್ತು ವರ್ಷಗಳ ಕಾಲ ಶಿಕ್ಷಕರ ವೃತ್ತಿಯಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ನಮ್ಮ ಶಾಲೆಯ ಕನ್ನಡ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಮಾತನಾಡಿದರು.
ಶಾಲೆಯ ಶಿಕ್ಷಕರಾದ ಎ.ಕೆ ಕುಂಬಾರ, ಎಸ್ ಅಂಕಲಗಿ ಸರ್, ಎಸ್.ಎಸ್ ಪೂಜಾರಿ, ಕಾಳಪ್ಪ ಸರ್, ಮಲ್ಲಿಕಾರ್ಜುನ್ ಸರ್, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಾನಾಗೌಡ ಆರ್ಮಿ ಇಂಜಿನಿಯರ್, ವಿರಾಜಕುಮಾರ್ ಕಲ್ಯಾಣಿ, ರವಿಚಂದ್ರ ನಾಟಿಕಾರ, ಲಕ್ಷ್ಮಿಕಾಂತ್ ನಾಟಿಕರ್, ಶಂಭುಲಿಂಗ ಪಾಟೀಲ್, ರಾಮಣ್ಣ ಗೌಡ ಪಾಟೀಲ್, ವೀರೇಶ್ ಸಜ್ಜನ್ ಸೇರಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…