ಕಲಬುರಗಿ: ಕನ್ನಡರಂಗಭೂಮಿಗೆ ಗಡಿನಾಡಿನ ಕಲಾವಿದರ ಕೊಡುಗೆ ಅಪಾರ ಎಂದು ಹಿರಿಯರಂಗ ನಿರ್ದೇಶಕ ಲಕ್ಕಪ್ಪ ಮಾಸ್ತರ್ ಕಡಗಂಚಿ ಹೇಳಿದರು.
ಇಲ್ಲಿನ ರಂಗಾಯಣದ ಸಭಾಂಗಣದಲ್ಲಿ ಆಯೋಜಿಸಿದ್ದ೨ನೇ ರಂಗಾಂತರಾಳ ಕಾರ್ಯಕ್ರಮದಲ್ಲಿ ತಮ್ಮರಂಗಾನುಭವಗಳನ್ನು ಹಂಚಿಕೊಂಡ ಅವರು ಆಧುನಿಕ ರಂಗಭೂಮಿಗೆ ಸಂಬಂಧಪಟ್ಟವರು, ಗ್ರಾಮೀಣ ರಂಗಕಲಾವಿದರನ್ನು ಕಡೆಗಣಿಸುವುದು ಸರಿಯಲ್ಲ ಗ್ರಾಮೀಣ ರಂಗಭೂಮಿ ಕಲಾವಿದರನ್ನು ರಂಗಾಯಣಕ್ಕೆ ಕರೆಸಿ ವೇದಿಕೆ ಕಲ್ಪಿಸಿಕೊಟ್ಟಿರುವುದಕ್ಕೆ ಸಂತಸವಾಗಿದೆ ಎಂದರು.
ಕರ್ನಾಟಕದ ಅನೇಕ ಊರುಗಳಲ್ಲಿ ಮತ್ತು ಮಹಾರಾಷ್ಟ್ರದ ಗ್ರಾಮಗಳಲ್ಲಿ ಕನ್ನಡ ನಾಟಕಗಳನ್ನೆ ಮಾಡಿಸುತ್ತಾ ಬಂದಿದ್ದೇನೆ. ಅನೇಕ ಕವಿಗಳ ನಾಟಕಗಳನ್ನು ನಿರ್ದೇಶನ ಮಾಡಿದ್ದು, ೪೦೦ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ ಕಲೆಗಳಲ್ಲಿ ಬೇರೆ ಬೇರೆ ಪ್ರಕಾರಗಳಿವೆ ಆದರೆ ಕಲಾವಿದರೆಲ್ಲ ರೂಮನುಷ್ಯರೇಎಂಬುದನ್ನು ಮರೆಯ ಬಾರದು ಎಂದರು. ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಕಪಿಲ್ ಚಕ್ರವತಿ ನಿರೂಪಿಸಿವಂದಿಸಿದರು. ಇದಕ್ಕೂಮುನ್ನ ಸಿದ್ಧಾರ್ಥ ಚಿಮ್ಮಾಇದ್ಲಾಯಿ ಅವರು ರಂಗಗೀತೆಗಳ ಪ್ರಸ್ತುತಪಡಿಸಿದರು. ಬಾಕಿವೇತನ ಪಾವತಿ ರಂಗಾಯಣದ ಹಿಂದಿನ ಅವಧಿಯಲ್ಲಿದ್ದ ಕೆಲವು ಕಲಾವಿದರಿಗೆ ನೀಡಬೇಕಾಗಿದ್ದ ಬಾಕಿ ವೇತನವನ್ನು ಇದೇ ಸಂದರ್ಭದಲ್ಲಿಪಾವತಿಸಲಾಯಿತು.
ಬಹುಮಾನವಿತರಣೆ ಕಳೆದ ಸಾಲಿನಲ್ಲಿ ಆಯೋಜಿಸಿದ್ದ ನಾಟಕರ ಚನಾಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ಹಣಮಂತಘಂಟೇಕರ್, ದ್ವಿತೀಯಸ್ಥಾನ ಪಡೆದ ಕಪಿಲ್ ಚಕ್ರವರ್ತಿ ಮತ್ತು ತೃತೀಯಸ್ಥಾನಪಡೆದ ಲಕ್ಷ್ಮೀಕಾಂತ ಜೋಶಿ ಅವರಿಗೆ ಕ್ರಮವಾಗಿ ೫,೩ ಮತ್ತು ೨ ಸಾವಿರ ರೂಪಾಯಿಗಳ ಚೆಕ್ಕನ್ನು ಬಹುಮಾನವಾಗಿ ನೀಡಲಾಯಿತು.
ರಂಗಾಂತರಾಳ ಕಾರ್ಯಕ್ರಮದಲ್ಲಿ ನಾಟಕಕಾರ ಈಶ್ವರಇಂಗನ್, ಹಿರಿಯನಟಿ ಶೋಭಾ ರಂಜೋಳ್ಕರ್, ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ. ಸಂದೀಪಬಿ, ಶಾಂತಲಿಂಗ ಪಠಪತಿ, ರಾಘವೇಂದ್ರ ಹಳಿಪೇಟ್ಟೆ, ವಕೀಲರಾದ ಧರ್ಮಣ ಕೋನೆಕ ರ್ಹಾಗೂ ಇತರರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…