ಬಿಸಿ ಬಿಸಿ ಸುದ್ದಿ

ಹಿಂದಿ ದೇಶದ ಐಕ್ಯತೆ, ಭಾವೈಕ್ಯತೆಯನ್ನು ಸಾರುವ ಭಾಷೆ-ಅನಿತಾ ಶರ್ಮಾ

ಶಹಾಬಾದ:ರಾಷ್ಟ್ರೀಯ ಭಾಷೆಯಾಗಿರುವ ಹಿಂದಿಯು ದೇಶದ ಐಕ್ಯತೆ ಹಾಗೂ ಭಾವೈಕ್ಯತೆಯನ್ನು ಸಾರುವ ಭಾಷೆಯಾಗಿದ್ದು,ಎಲ್ಲರೂ ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಎಂದು ಎಸ್.ಜಿ.ವರ್ಮಾ ಹಿಂದಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನಿತಾ ಶರ್ಮಾ ಹೇಳಿದರು.

ಅವರು ಸೋಮವಾರ ನಗರದ ಎಸ್.ಜಿ.ವರ್ಮಾ ಹಿಂದಿ ಶಾಲೆಯಲ್ಲಿ ಆಯೋಜಿಸಿದ ಹಿಂದಿ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಪಡೆದ ನಂತರ ರಾಷ್ಟ್ರ ಭಾಷೆಯಾಗಿ ಯಾವ ಮಟ್ಟದಲ್ಲಿ ಬೆಳೆಯಬೇಕಾಗಿತ್ತೋ, ಆ ಮಟ್ಟದಲ್ಲಿ ಹಿಂದಿ ಭಾಷೆಯು ಬೆಳೆಯದೇ ಇರುವದು ವಿಷಾದನೀಯವಾಗಿದೆ.ಪ್ರತಿಯೊಬ್ಬರಿಗೂ ಅವರದೇ ಆದ ಮಾತೃಭಾಷೆ ಬಗ್ಗೆ ಹೆಚ್ಚಿನ ಪ್ರೀತಿ ಇರುವುದು ಸಹಜ ಗುಣ. ಆದರೆ ರಾಷ್ಟ್ರದ ಪ್ರಶ್ನೆ ಬಂದಾಗ ಹಿಂದಿಯನ್ನು ನಾವು ಅನಿವಾರ್ಯವಾಗಿ ನಮ್ಮದಾಗಿಸಿಕೊಳ್ಳಬೇಕಾಗಿದೆ.ಸರಕಾರ ಹಿಂದಿ ಭಾಷೆಯ ಬೆಳವಣಿಗೆಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತವಾಗಿದೆ.ಸಾಹಿತ್ಯಿಕವಾಗಿ ಸಮೃದ್ಧ ಭಾಷೆಯಾಗಿರುವ ಹಿಂದಿಯಲ್ಲಿ ಅತೀ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇದೆ.ಇಂತಹ ದೇಶ ಜನರೊಂದಿಗೆ ಬಾಂಧವ್ಯ ಬೆಸೆಯುವ ಹಿಂದಿ ಭಾಷೆಗೆ ನಾವೆಲ್ಲರೂ ಗೌರವಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಮಾತನಾಡಿ, ಪಾಚೀನಕಾಲದಿಂದಲೂ ತನ್ನದೆಯಾದ ಪರಂಪರೆ, ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವ ಸುಂದರ, ಸ್ವಾರಸ್ಯಕರ ಹಾಗೂ ಕೇಳುವುದಕ್ಕೂ ಹಿತವಾಗಿರುವ ಸಂಪರ್ಕ ಭಾಷೆಯೇ ಹಿಂದಿ ಭಾಷೆಯಾಗಿದೆ ಎಂದರು.

ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರುಮಾತೆ ದಮಯಂತಿ ಸೂರ್ಯವಂಶಿ,ಮುಖ್ಯಗುರು ಸುಧೀರ ಕುಲಕರ್ಣಿ, ಉಪನ್ಯಾಸಕರಾದ ರಾಜಕುಮಾರ ಬಾಸೂತ್ಕರ್,ರಮೇಶ ವಾಲಿ, ಪ್ರಕಾಶ ಕೋಸಗಿಕರ್, ಪದ್ಮಶ್ರೀ ಜೋಷಿ,ಸಾಬಣ್ಣ ಗುಡ್ಲಾ, ಶರಣಪ್ಪ ಹಲಕರ್ಟಿ,ಶಿಕ್ಷಕರಾದ ಬಾಬಾ ಸಾಹೇಬ ಸಾಳುಂಕೆ,ಚನ್ನಬಸಪ್ಪ ಕೊಲ್ಲೂರ,ಮಹೇಶ್ವರಿ ಗುಳಿಗಿ,ವಸಂತ ಪಾಟೀಲ, ಅನೀಲಕುಮಾರ ಕುಲಕರ್ಣಿ,ಜಗದೇವಿ ಅಗಸ್ಥ್ಯತೀರ್ಥ,ಶಿರೋಮಣಿ ದಯಾಲ,ಸೂಗಯ್ಯ ಘಂಟಿಮಠ,ರಮೇಶ ಮಹೀಂದ್ರಕರ್, ಶ್ರೀರಾಮ ಚವ್ಹಾಣ ಇತರರು ಇದ್ದರು.

emedia line

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

51 mins ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

1 hour ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

1 hour ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

2 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

2 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago