ಶಹಾಪುರ : 1947ರ ಸಮಯದಲ್ಲಿ ಒಂದೆಡೆ ದೇಶ ಪರಕೀಯರ ಅಧೀನದಿಂದ ಮುಕ್ತಿ ಪಡೆದು ಸ್ವಾತಂತ್ರ್ಯದ ವಿಜಯೋತ್ಸವದಲ್ಲಿದರೆ ಇನ್ನೊಂದೆಡೆ ನಿಜಾಮರ ದಾಸ್ಯದಿಂದ ನರಕಯಾತನೆಯ ಅನುಭವಿಸುತ್ತಿತ್ತು.ಈ ಪ್ರದೇಶ ಅಂದರೆ ಹೈದರಾಬಾದ್ ಕರ್ನಾಟಕದ ಕಲಬುರ್ಗಿ ಬೀದರ್ ಬಳ್ಳಾರಿ ರಾಯಚೂರು ಕೊಪ್ಪಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳು ನಿಜಾಮನ ಅಧೀನದಲ್ಲಿದ್ದವು.
ಆತನ ಸಾಮ್ರಾಜ್ಯವು ಭಾರತದೊಂದಿಗೆ ವಿಲೀನಗೊಳಿಸಲು ನಿರಾಕರಿಸಿದ್ದಕ್ಕಾಗಿ ಅಂದಿನ ಗೃಹಮಂತ್ರಿ ಸರದಾರ ವಲ್ಲಬಾಯಿ ಪಟೇಲರ ನೇತೃತ್ವದಲ್ಲಿ ಸಾವಿರಾರು ಜನ ನಿಜ ಅವರ ವಿರುದ್ಧ ಹೋರಾಟಕ್ಕೆ ಸಜ್ಜಾದರು.ಅಂದಿನ ಹೋರಾಟಗಾರರ ತ್ಯಾಗ ಬಲಿದಾನ ಪ್ರೀತಿ ಶೌರ್ಯ ನಿಜಕ್ಕೂ ಮೆಚ್ಚುವಂಥದ್ದು ಮುಂದೆ ಆತನ ಸಾಮ್ರಾಜ್ಯವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು.
ಆ ದಿನವನ್ನು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಿಸಲಾಯಿತು ರಜಾಕಾರರ ಹಾವಳಿಯಿಂದ ಜನತೆ ತತ್ತರಿಸಿ ಹೋಗಿ ಸಾವು ನೋವುಗಳು ಸಾಕಷ್ಟು ಅನುಭವಿಸಿದ್ದರು.
ರಜಾಕಾರರ ಹಾವಳಿಯಿಂದ ಜನರನ್ನು ಪಾರು ಮಾಡಲು ಅಚ್ಚಪ್ಪ ಗೌಡರು ನಿಜಾಮರ ವಿರುದ್ಧ ಟೊಂಕ ಕಟ್ಟಿ ನಿಂತು ಯುದ್ಧಭೂಮಿಯಲ್ಲಿ ಸೆಣಸಾಡಿ ಹೈದರಾಬಾದ್ ಕರ್ನಾಟಕದ ಗೆಲುವಿನ ಕಹಳೆ ಮೊಳಗಿಸಿದರು .ವೀರ ಕೆಚ್ಚೆದೆಯ ಧೀರ ನಾಯಕ ಅಚ್ಚಪ್ಪಗೌಡ ಸುಬೇದಾರ್ ಈ ಚಳವಳಿಯಲ್ಲಿ ಇವರ ಪಾತ್ರ ಮಹತ್ವದ್ದು.
ಅಚ್ಚಪ್ಪ ಗೌಡರು ಮೂಲತಃ ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಶರಣಪ್ಪಗೌಡ ಗಂಗಮ್ಮ ಸುಬೇದಾರ್ ಎಂಬ ದಂಪತಿಗಳ ಮಗನಾಗಿ 1925 ಫೆಬ್ರವರಿ18 ರಂದು ಜನಿಸಿದರು ಕಲಬುರ್ಗಿ ಮತ್ತು ಹೈದರಾಬಾದಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಮುಂದೆ ಬಂಟನೂರು ಗ್ರಾಮದಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು ಆ ದಿನಗಳಲ್ಲಿ ಆಂಗ್ಲರ ದಬ್ಬಾಳಿಕೆ ಮತ್ತು ರಜಾಕಾರರ ವಿರುದ್ಧ ಸಿಡಿದೆದ್ದರು.
ಯಾವ ಪ್ರದೇಶಗಳ ಮೇಲೆ ನಿಜಾಮರ ದಬ್ಬಾಳಿಕೆ ಕೊಲೆ ಸುಲಿಗೆ ಮಾಡಿದ್ದರು ಅಂತ ಗ್ರಾಮಗಳಿಗೆ ತಿರುಗಾಡಿ ಸಮೀಕ್ಷೆ ಮಾಡಿ ಅಲ್ಲಿಯ ನೊಂದ ಜನತೆಗೆ ಸಾಂತ್ವನ ಹೇಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಅವರ ವಿರುದ್ಧ ಹೋರಾಟಕ್ಕೆ ಬೆಂಬಲವಾಗಿ ನಿಂತು ಹುರಿದುಂಬಿಸಿದರು ಮನೆ ಬಿಟ್ಟು ಬಂದವರಿಗೆ ಆಶ್ರಯ ಕೊಟ್ಟು ಅವರಿಗೆ ಹಲವಾರು ರೀತಿಯ ವಿದ್ಯೆಗಳಾದ ಕುಸ್ತಿ ಗುಂಡು ಎತ್ತುವುದು ಎತ್ತರ ಜಿಗಿತ ಉದ್ದ ಜಿಗಿತ ಭಾರ ಹೊರುವುದು ಮುಂತಾದ ಸಾಹಸಮಯ ಕ್ರೀಡೆಗಳಲ್ಲಿ ತರಬೇತಿ ನೀಡುತ್ತಿದ್ದರು.
ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ಸ್ವಯಂ ಸೇವಕರನ್ನು ನೇಮಿಸಿಕೊಂಡು ಅವರಿಗೆ ಉತ್ತಮ ತರಬೇತಿ ನೀಡುವುದರ ಜೊತೆಗೆ ಸಾಹಸಮಯ ಕಥೆಗಳು ಹೇಳುತ್ತಿದ್ದರೂ ಗೌಡರ ಬಾಲ್ಯದಿಂದಲೂ ಅವರ ಆಪ್ತರಾಗಿ ಬಲಗೈ ಬಂಟರಾಗಿದ್ದ ಕ್ರಿಯಾಶೀಲರಾಗಿದ್ದ ರಾಯಪ್ಪ ಮತ್ತು ಹಣಮಂತ ಅಚ್ಚಪ್ಪ ಗೌಡರ ಆಪ್ತರಾಗಿದ್ದರು ಅವರೊಂದಿಗೆ ಕುದುರೆ ಸವಾರಿ ಶಸ್ತ್ರ ತರಬೇತಿಯಲ್ಲಿ ತೊಡಗುತ್ತಿದ್ದರೂ ಕಾಕಿ ಟೋಪಿ ಖಾಕಿ ಉಡುಪು ಕಾಲಲ್ಲಿ ಬಿಟ್ಟು ಕೈಯಲ್ಲಿ ಬಂದೂಕು ನಿತ್ಯವೂ ಪರೇಡ್ ನಡೆಸುತ್ತಿದ್ದರೂ ನೋಡೋದಕ್ಕೆ ನೇತಾಜಿ ರೂಪದಲ್ಲಿ ಕಾಣುತ್ತಿದ್ದರು ಅವರ ಅಮ್ಮ ಮಾತಂತೂ ಮಾಣಿಕ್ಯದಂತೆ ಅವರ ಜೀವನ ಶೈಲಿಯ ಮಾತಿಗೆ ಇಂದಿನ ಜನಪದ ಮಹಿಳೆಯರ ಗ್ರಾಮೀಣ ಭಾಗದಲ್ಲಿ ಬೀಸುವಾಗ ಕುಟ್ಟುವಾಗ ಹಾಡನ್ನು ಜಾನಪದ ಶೈಲಿಯಲ್ಲಿ ಹಾಡಿ ಸಂತೋಷ ಕೊಡುತ್ತಾರೆ ಆ ಹಾಡಿನ ತುಣುಕು ಒಂದು ಹೀಗಿದೆ
ಪುಂಡಿಯ ಕಟಿಗ್ಯಾಗ
ಕೆಂಡ ಒಗೆದವರ್ಯಾರ
ಪುಂಡ ಸಗರದ ಅಚ್ಚಪ್ಪಗೌಡ
ಆಡಿದ ಮಾತು ಬಂಡಿಗೆ
ಕೀಲ ಜಡಿದಂಗ.
ಒಂದು ದಿನ ಬಂಟನೂರು ಕ್ಯಾಂಪಿನಲ್ಲಿ ಬ್ಯಾರಿಸ್ಟರ್ ವೆಂಕಟಪ್ಪ ನಾಯಕ ಮತ್ತು ಅಪ್ಪಾರಾವ್ ವಕೀಲ ಹಾಗೂ ಸುಬೇದಾರರು ರಜಾಕಾರರ ವಿರುದ್ಧ ಹೋರಾಟದ ಯೋಜನೆ ರೂಪಿಸುತ್ತಿದ್ದರು.ಸುತ್ತ ಮುತ್ತಲಿನ ಹಳ್ಳಿಗಳ ಮೇಲೆ ರಾತ್ರೋ ರಾತ್ರಿ ಗಸ್ತು ತಿರುಗುತ್ತಿದ್ದರೂ ರಜಾಕಾರರ ವಿರುದ್ಧ ನೇರವಾಗಿ ಸಂಘರ್ಷಕ್ಕಿಳಿದು ಅವರೊಂದಿಗೆ ಸೆಣಸಾಡಿ ಏಟಿಗೆ ಪ್ರತಿ ಏಟು ಕೊಡುತ್ತಿದ್ದರೂ ಕೈಯಲ್ಲಿ ಯಾವಾಗಲೂ ಬಂದೂಕು ಸಿಡಿ ಮದ್ದು ಗುಂಡುಗಳು ಹಿಡಿದು ತಿರುಗುತ್ತಿದ್ದರೂ ರಜಾಕಾರರ ಲೂಟಿ ಮಾಡಿದ ಹಣ ದವಸ ಧಾನ್ಯಗಳು ಬಂಡಿಗಳಲ್ಲಿ ಕ್ಯಾಂಪಿಗೆ ಸಾಗಿಸುತ್ತಿದ್ದರು.ಈ ವಸ್ತುಗಳನ್ನು ನೊಂದ ಬಡ ಜನರಿಗೆ ಹಂಚುತ್ತಿದ್ದರು ಎಂದು ಇಂದಿಗೂ ಕೆಲವರು ಹೇಳಿಕೊಳ್ಳುತ್ತಿದ್ದಾರೆ.
ಅಚ್ಚಪ್ಪ ಗೌಡರ ಮೊದಲಿನಿಂದಲೂ ಬಳ್ಳಾರಿಯ ಉಮರ್ ಕಣ್ಣಿನಲ್ಲಿ ನೆಟ್ಟಿದ್ದರೂ ಗೌಡರನ್ನು ಹತ್ಯೆಗೈಯುವುದಾಗಿ ಬಳ್ಳಾರಿ ಉಮರ್ ಒಳಸಂಚು ಆಗಾಗ ರೂಪಿಸಿ ವಿಫಲನಾಗುತ್ತಿದ್ದ.ಒಂದು ದಿನ ಸಗರ ಚಾವಡಿ ಕಟ್ಟೆಯಲ್ಲಿ ಕುಳಿತಿದ್ದ ಗೌಡರ ಮೇಲೆ ಹಠಾತ್ತನೆ ಉಮರ್ ದಾಳಿ ಮಾಡಿದ ಗೌಡರನ್ನು ತಳವಾರದ ಸಭೆ ಬಡಿಯುವುದಕ್ಕೆ ಪ್ರಯತ್ನಿಸಿದ ಗೌಡರು ತಮ್ಮ ಕೈಯಲ್ಲಿನ ಖಡ್ಗದಿಂದ ತಪ್ಪಿಸಿಕೊಳ್ಳುತ್ತಾ ಉಮರ್ ನ ವಿರುದ್ಧ ಹೋರಾಡಿದರು. ಅಷ್ಟಾದರೂ ಕುಮಾರ್ನಿಂದ ಗೌಡರ ಮುಖದ ಮೇಲೆ ಬಲವಾದ ಏಟು ಬೀಳುತ್ತೆ ರಕ್ತ ಗಾಯಗಳಾಗುತ್ತಿವೆ ಅಷ್ಟರಲ್ಲಿ ಗಲಾಟೆ ನೀಡಿದ್ದನ್ನು ಕೇಳಿದ ಪಕ್ಕದ ಬಜಾರಿನಲ್ಲಿರುವ ಹೊನಕಲ್ ಅವರ ಕಿರಾಣಿ ಅಂಗಡಿಯ ಗುಮಾಸ್ತನಾದ ಅಡಿವಪ್ಪ ಕೆಂಭಾವಿ ಎಂಬುವರು ಅಂಗಡಿಯಲ್ಲಿರುವ ತೂಕದ ಕಲ್ಲಿನಿಂದ ನೇರವಾಗಿ ಗುರಿಯಿಟ್ಟು ಉಮರನ ತಲೆಗೆ ಹೊಡೆಯುತ್ತಾನೆ ಆಗ ಉಮರನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಆತ ದಿಗ್ಭ್ರಮೆಗೊಂಡು ಕಕ್ಕಾಬಿಕ್ಕಿಯಾಗಿ ಅಲ್ಲಿಂದ ಕಾಲು ಕೆತ್ತುತ್ತಾನೆ ಆಗ ಅಲ್ಲಿ ನೆರೆದಿದ್ದ ಗ್ರಾಮದ ಜನ ಅವನನ್ನು ಬೆನ್ನಟ್ಟಿಕೊಂಡು ಹೋಗುತ್ತಾರೆ ಊರಿನ ಶಂಕರನಾರಾಯಣ ಕೆರೆಯ ಒಡ್ಡಿನ ಮೇಲೆ ಆತ ದಮ್ಮು ಗಿಟ್ಟಿ
ಜನರ ಕೈಗೆ ಸಿಕ್ಕಿ ಬೀಳುತ್ತಾನೆ ಆಗ ಎಲ್ಲರೂ ಆಳಿಗೊಂದು ಏಟು ಎಂಬಂತೆ ಕಲ್ಲು ದೊಣ್ಣೆಗಳಿಂದ ಉಮರ್ನನ್ನು ಕಳಿಸಿ ಹತ್ಯೆಗೈದು ಆತನ ಮೃತದೇಹವನ್ನು ಕೆರೆಯ ದಂಡೆಗೆ ಎಳೆದು ತಂದು ಸುಡುತ್ತಾರೆ.ಮುಂದೆ ಗೌಡರನ್ನು ಪಲ್ಲಕ್ಕಿಯಲ್ಲಿ ಹೊತ್ತು ಹತ್ತಿಗೂಡೂರು ಮಾರ್ಗವಾಗಿ ಚಿಕಿತ್ಸೆಗೆಂದು ಹೈದರಾಬಾದಿಗೆ ಕರೆದುಕೊಂಡು ಹೋಗುತ್ತಾರೆ ಬಂಟನೂರು ಕ್ಯಾಂಪ್ ಹಾಗೂ ಅನಿಸಿಕೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಇಷ್ಟೆಲ್ಲ ಕಥನಗಳಾದ ಸುರಪುರದಲ್ಲಿ ಇದರ ಸುದ್ದಿಯೇ ಇರಲಿಲ್ಲ ಹೀಗೆ ಸ್ವಾತಂತ್ರ್ಯದ ಸಲುವಾಗಿ ಮನೆಯ ಮಾರು ಹೆಂಡತಿ ಮಕ್ಕಳು ಬಿಟ್ಟು ಬಂಟನೂರ ಕ್ಯಾಂಪಿನಲ್ಲಿ ಸೇನೆ ಕಟ್ಟಿಕೊಂಡು ನಿರಂತರವಾಗಿ ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ ಮತ್ತು ಏಳಿಗೆಗಾಗಿ ಗೌಡರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಗೌಡರು ತಮ್ಮ ಜೀವನ ಗೌಡರ ನಿರಂತರ ಹೋರಾಟ ಜೀವನದ ಆದರ್ಶ ತತ್ವಗಳು ಇಂದಿಗೂ ಬದುಕುಳಿದಿವೆ ಆದರೆ ಗೌಡರ ಹೋರಾಟದ ಪರಿ ಇಂದಿನ ಯುವಕರಿಗೆ ತಲುಪಿಸುವ ಕೆಲಸ ನಾವು ನೀವೆಲ್ಲರೂ ಮಾಡಬೇಕಾಗಿದೆ.
ಸಾರ್ಥಕ ಬದುಕಿನಿಂದ ಬಾಳಿದ ಅಚ್ಚಪ್ಪ ಗೌಡರು 1983 ಡಿಸೆಂಬರ್ 3 ರಂದು ವಿಧಿವಶರಾದಾಗ ಸಗರ ನಾಡಿಗೆ ಕತ್ತಲಾವರಿಸಿ ದಂತಾಗಿ ಜನರೆಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದ್ದರು ಅವರು ಅಗಲಿ 35 ವರ್ಷಗಳ ಕ್ಕೂ ಹೆಚ್ಚು ಕಾಲ ಗತಿಸಿದರೂ ಅವರ ಸಾಹಸ ವೀರಗಾಥೆ ಧೈರ್ಯ ಇಂದಿಗೂ ಜೀವಂತವಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…