ಬಿಸಿ ಬಿಸಿ ಸುದ್ದಿ

ರೊಪೋಸೋದಲ್ಲಿ ಡ್ಯಾನಿಶ್ ಸೇಠ್ ಕ್ರಿಕೆಟೇನ್ಮೆಂಟ್ ಸರಣಿ

ಬೆಂಗಳೂರು: ಗ್ಲಾನ್ಸ್ ತನ್ನ ಮೊದಲ ಇಂಟಲೆಕ್ಚುವಲ್ ಪ್ರಾಪರ್ಟಿ (IP) ಸರಣಿಯಾದ “ಡ್ಯಾನಿಷ್ ಕಿ ಗೂಗ್ಲಿ’’ಯನ್ನು ರೊಪೋಸೋದಲ್ಲಿ ಬಿಡುಗಡೆ ಮಾಡಿದೆ. ಈ ಐಪಿ ಸರಣಿಯಲ್ಲಿ ಸ್ಟಾಂಡ್-ಅಪ್ ಹಾಸ್ಯಗಾರ, ಟಿವಿ ನಿರೂಪಕ, ರೇಡಿಯೋ ಜಾಕಿ, ನಟ ಮತ್ತು ಲೇಖಕ ಡ್ಯಾನಿಶ್ ಸೇಠ್ ಮುಖ್ಯ ಭೂಮಿಕೆಯಲ್ಲಿ ಇರುತ್ತಾರೆ.

ಕ್ರಿಕೆಟ್ ಮತ್ತು ಮನೋರಂಜನೆಯನ್ನು ಒಟ್ಟಿಗೆ ತರುವ ನಿಟ್ಟಿನಲ್ಲಿ ಕ್ರಿಕೆಟ್ ಆಟಗಾರರು, ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಅವರ ಸಾಧನೆ, ತಂಡಗಳ ಮಾಲೀಕರು, ಚಿಯರ್ ಲೀಡರ್ಗಳು, ಪ್ರೇಕ್ಷಕರ ಕೊರತೆ ಸೇರಿದಂತೆ ಹಲವು ರೀತಿಯಲ್ಲಿ ಮತ್ತು ಆಯಾಮಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಈ ಸರಣಿಯು ಎಕ್ಸ್ಕ್ಲೂಸಿವ್ ಆಗಿ Roposo@danishsait and Glance Lockfeed, ನಲ್ಲಿ ಬಿಡುಗಡೆಯಾಗಲಿದೆ. 2020 ರ ಸೆಪ್ಟೆಂಬರ್ 19 ರಂದು ಐಪಿಎಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ದೊರೆಯುತ್ತಿದ್ದಂತೆಯೇ ಈ ಸರಣಿ ಆರಂಭಗೊಳ್ಳಲಿದೆ.

ರೊಪೋಸೋ ಭಾರತದ ನಂಬರ್ ಒನ್ ಸಾಮಾಜಿಕ ವಿಡಿಯೋ ಆಪ್ ಆಗಿದ್ದು, ತಿಂಗಳಿಗೆ 100 ದಶಲಕ್ಷ ಡೌನ್ಲೋಡ್ಗಳು ಮತ್ತು 55 ದಶಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಕ್ರಿಕೆಟ್ ಸೀಸನ್ನಲ್ಲಿ ಇನ್ನೂ ಹೆಚ್ಚಿನ ಬಳಕೆದಾರರನ್ನು ಹೊಂದುವ ನಿರೀಕ್ಷೆ ಇದೆ. ಈ ಸರಣಿಯು ಪ್ರತಿದಿನ 100 ದಶಲಕ್ಷಕ್ಕೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ Glance Lockfeed ನಲ್ಲಿಯೂ ಲಭ್ಯವಾಗಲಿದೆ.

ರೊಪೋಸ್ ಮತ್ತು ಗ್ಲಾನ್ಸ್ನಲ್ಲಿ ತಮ್ಮ ಹೊಸ ಸರಣಿ ಆರಂಭವಾಗುತ್ತಿರುವ ಬಗ್ಗೆ ಮಾತನಾಡಿದ ಡ್ಯಾನಿಶ್, “ಭಾರತದ ನಂಬರ್ ಒನ್ ಸಾಮಾಜಿಕ ವಿಡಿಯೋ ಆಪ್ ಮತ್ತು ಭಾರತದ 3 ನೇ ಅತಿ ದೊಡ್ಡ ಕಂಟೆಂಟ್ ಪ್ಲಾಟ್ಪಾರ್ಮ್ ಆಗಿರುವ ಗ್ಲಾನ್ಸ್ ಜತೆ ಸೇರುತ್ತಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ರೊಪೋಸೋ ಮತ್ತು ಗ್ಲಾನ್ಸ್ ಈ ಕ್ರಿಕೆಟ್ ಋತುವಿನ ವೇಳೆ 200 ದಶಲಕ್ಷ ಬಳಕೆದಾರರನ್ನು ತಲುಪಲು ಮತ್ತು ಅವರಿಗೆ ಮನೋರಂಜನೆಯನ್ನು ನೀಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ’’ ಎಂದರು.

ಗ್ಲಾನ್ಸ್ನ ಸಿಎಂಒ ಬಿಕಾಶ್ ಚೌಧರಿ ಅವರು ಮಾತನಾಡಿ, “ಈ ಬಾರಿಯ ಕ್ರಿಕೆಟ್ ಟೂರ್ನಿಯ ವೇಳೆ ಅತ್ಯದ್ಭುತವಾದ ವಿವರಣೆಗಳನ್ನು ನಮ್ಮ ಬಳಕೆದಾರರಿಗೆ ತಲುಪಿಸುವುದರತ್ತ ಗಮನ ಹರಿಸಿದ್ದೇವೆ. ಎಲ್ಲಾ ಬಗೆಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡಿದ್ದೇವೆ ಮತ್ತು ಅತ್ಯದ್ಭುತವಾದ ವೀಕ್ಷಕ ವಿವರಣೆಗಳನ್ನು ಹೊಂದಿದ್ದೇವೆ. ಇದಕ್ಕೆ ರೊಪೋಸೋ ಜತೆ ಮಾಡಿಕೊಂಡಿರುವ ಪಾಲುದಾರಿಕೆ ಬೆಂಬಲವಾಗಿ ನಿಲ್ಲುತ್ತಿದೆ’’ ಎಂದು ತಿಳಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago