ಕಲಬುರಗಿ: ಹೈದ್ರಾಬಾದ್ ಸಂಸ್ಥಾನದಿಂದ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳನ್ನು ಸೈನಿಕ ಕಾರ್ಯಾಚರಣೆಯಿಂದ ಸ್ವಾತಂತ್ರ್ಯ ಗೊಳಿಸಿದ ಧೀಮಂತ ಗೃಹ ಮಂತ್ರಿ,ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರನ್ನು ನಾಗನಹಳ್ಳಿ ಪೋಲಿಸ್ ತರಬೇತಿ ಕೇಂದ್ರಕ್ಕೆ ಇಡುವುದರ ಮೂಲಕ ಸರಕಾರ ಪಟೇಲರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿ ಒತ್ತಾಯಿಸಿದೆ.
ಮಾಜಿ ದಿವಂತಹ ಗೃಹ ಸಚಿವರಾಗಿದ್ದಾಗ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಆದರ್ಶ,ಅವರ ಶಿಸ್ತು,ಕಾರ್ಯಕ್ಷಮತೆ, ಧೃಡ ನಿರ್ಧಾರ, ನಿಖರ ಯೋಜನೆಗಳು,ಕ್ಲಿಷ್ಟಕರ ಸಂದರ್ಭದಲ್ಲಿ ತಗೆದು ಕೊಳ್ಳುತ್ತಿರುವ ಗಟ್ಟಿತನದ ನಿರ್ಧಾರಗಳು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಅನುಕರಣಿಯ.ಇಲಾಖೆಯ ಬಗ್ಗೆ ಪಟೇಲ್ ರಿಗಿದ್ದ ಕಳಕಳಿ ಕಾಳಜಿ ತರಬೇತಿಯಲ್ಲಿರುವ ನಮ್ಮ ಪೊಲೀಸ್ ರಿಗೂ ಬರಲಿ ಎನ್ನುವ ಸದುದ್ದೇಶದ ಆಶಯವಾಗಿದ್ದು, ನಿಜಾಮನ ಕೃಪಾ ಪೋಷಿತ ರಝಾಕರ ದಬ್ಬಾಳಿಕೆ,ದೌರ್ಜನ್ಯ ದಿಂದ ಬಸವಳಿದು,ಬೆಂದು ಹೋಗಿದ್ದ ಈ ನಾಡನ್ನು ಸ್ವಾತಂತ್ರ್ಯ ಗೋಳಿಸಿ ಇಲ್ಲಿಯ ಜನರ ನೆಮ್ಮದಿಗೆ ಕಾರಣರಾಗಿರುವ ಸರ್ದಾರ್ ಪಟೇಲ್ ರನ್ನು ಈ ಭಾಗದ ಜನ ಎಷ್ಟು ಸ್ಮರಿಸಿದರೂ ಸಾಲದು ಎಂದು ಸೇನೆಯ ಜಿಲ್ಲಾಧ್ಯಕ್ಷರಾದ ರವಿ ದೇಗಾಂವ ಹೇಳಿದ್ದರು.
೧೨ನೇ ಶತಮಾನದಲ್ಲಿ ಬಸವಾದಿ ಶರಣರಿಂದ ಶೋಭಿಸಿದ ಈ ನಾಡು ವಿಶ್ವಕ್ಕೆ ಮಾದರಿಯ ರಾಜ್ಯವಾಗಿತ್ತು.ವಚನ ಶಾಸ್ತ್ರದ ಮೂಲಕ ಸಾಮಾಜಿಕ ಸಮಾನತೆ ಸಾರಿದ ಈ ಮಣ್ಣಿನಲ್ಲಿ ದಯೆ ಎನ್ನುವುದು ಧರ್ಮದ ಮೂಲವಾಗಿತ್ತು.ಇಂಥಹ ಪವಿತ್ರ ಮಣ್ಣಿನಲ್ಲಿ ಮತಾಂಧತೆಯಿಂದ ವಿಜೃಂಭಿಸಿದ ನಿಜಾಮನ ಸೊಕ್ಕು ಮುರಿದು ಈ ನಾಡಿನ ಜನರ ಮಾನ,ಪ್ರಾಣ ಕಾಪಾಡಿದ ಪಟೇಲ್ ರನ್ನು ನಾವು ಎಂದಿಗೂ ಸ್ಮರಿಸುತ್ತೇವೆ ಎಂದರು
ನಾಗನಹಳ್ಳಿ ಪೋಲಿಸ್ ತರಬೇತಿ ಶಾಲೆಗೆ ಸರಕಾರ ’ ಸರ್ದಾರ್ ವಲ್ಲಭಭಾಯಿ ಪಟೇಲ್ ’ ಪೋಲಿಸ್ ತರಬೇತಿ ಶಾಲೆ ನಾಗನಹಳ್ಳಿ ಎಂದು ನಾಮಕರಣ ಮಾಡುವುದರ ಮೂಲಕ ಪಟೇಲರನ್ನು ನೆನೆಯುವ ಕೆಲಸ ಮಾಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಮನವಿ ಮೂಲಕ ಸರಕಾರಕ್ಕೆ ಒತ್ತಾಯಿಸಿದೆ.
ಸೇನೆಯ ಜಿಲ್ಲಾ ಉಪಾಧ್ಯಕ್ಷರ ಪ್ರಶಾಂತ ಮಠಪತಿ, ಕಾರ್ಯಾಧ್ಯಕ್ಷ ಸಂತೋಷ್ ಪಾಟೀಲ್ , ದಿಲೀಪ್ ಕಿರಿಸಾವಳಗಿ, ಮಹಿಳಾ ಘಟಕ ಅಧ್ಯಕ್ಷ ಮಂಜುಳಾ ಪಾಟೀಲ್, ಶ್ರೀಶೈಲ್ ಸಾಗರ್, ಮಹಾಂತೇಶ್ ಹರವಾಳ, ಧರ್ಮರಾಜ್ ಶಾಪುರ್, ಶರಣು ಮುನ್ನೊಳ್ಳಿ, ಕವಿತಾ ದೇಗಾಂವ, ಅಶೋಕ ಪಾಟೀಲ, ಮಾಂತೇಶ್ ಕೋಣೆ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…