ಬಿಸಿ ಬಿಸಿ ಸುದ್ದಿ

ಜೆಓಸಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ-ಪಿಂಚಣಿ ಸೌಲಭ್ಯ ನೀಡುವಂತೆ ಸಿಎಂಗೆ ಮನವಿ

ಕಲಬುರಗಿ: ವಿವಿಧ ಇಲಖೆಗಳಲ್ಲಿ ಜೆಓಸಿ ವಿಲೀನಗೊಂಡ ವೃತ್ತಿ ಶಿಕ್ಷಣ ಸಿಬ್ಬಂದಿಯವರು ೨೦-೩೦ ವರ್ಷಗಳ ದೀರ್ಘಕಾಲ ಅರೆಕಾಲಿಕೆ ಸಿಬ್ಬಂದಿಗಳಿಗಾಗಿ ಅಲ್ಪ ಮೊತ್ತದ ಸಂಭಾವನೆ ಪಡೆಯುತಿದ್ದು, ಸಿಬ್ಬಂದಿಗಳಿಗೆ ಸೇವೆಗೆ ಸೇರಿದ ದಿನದಿಂದ ಸೇವಾಭದ್ರತೆಯನ್ನು ನೀಡುವಂತೆಆದೇಶವನ್ನು ಹೊರಡಿಸಬೇಕೆಂದು ಕಲ್ಯಾಣ ಕರ್ನಾಟಕ ವೃತ್ತಿ ಶಿಕ್ಷಣ ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಂಘದ ಅಧ್ಯಕ್ಷ ಮಲ್ಲಿನಾಥ ಪಿ. ಕಳಸ್ಕರ್ ನೇತೃತ್ವದಲ್ಲಿ ಸಿಎಂಗೆ ಮನವಿ ಸಲ್ಲಿಸಿದರು.

ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ ಅವರು, ೨೦೧೨-೧೩ ರಲ್ಲಿ ಖಾಯಂ ಆಗಿದ್ದು, ಸೇವೆಗೆ ಸೇರಿದ ದಿನಾಂಕದಿಂದ ಸೇವಾ ಭದ್ರತೆ ಆಗಿರುವುದಿಲ್ಲ. ಪಿಂಚಣಿಯು ಇಲ್ಲ ಮತ್ತು ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡುವಂತಿಲ್ಲ ಈ ಸಿಬ್ಬಂದಿ ವರ್ಗದವರಿಗೆ ಖಾಯಂ ಆದಾಗಿನಿಂದ ಕೆಲವರಿಗೆ ಅನಾರೋಗ್ಯದಿಂದ ಕೆಲವರು ಕೋವಿಡ್-೧೯ ನಿಂದ ಮರಣ ಹೊಂದಿದ್ದು, ಇನ್ನು ಕೆಲವರು ತೀರಾ ಅನಾರೋಗ್ಯ ಬಳಲುತ್ತಿದ್ದಾರೆ ಇದಕ್ಕೆ ಮೂಲ ಕಾರಣ ಕುಟುಂಬದವರು ಇತರೆ ಸರ್ಕಾರಿ ನೌಕರರಿಗಿರುವಂತೆ ತಮಗೂ ಸವಲತ್ತುಗಳು ಬೇಕೆಂದು ಕಾಡುವ ಮಾನಸಿಕ ಒತ್ತಡ ಕರ್ತವ್ಯದಲ್ಲಿ ನಾವು ಖಾಯಂ ಆದ ಕಾರಣ ಅಧಿಕಾರಿಗಳಿಂದಲೂ ಬೇರೆಯವರಂತೆ ಸವಲತ್ತು ಇದೆ ಎಂದು ಭಾವಿಸಿ ಕೆಲಸದ ಒತ್ತಡ ವಿನಾಕಾರಣ ಹಾಕುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಿವೃತ್ತಿ ಆಗಿರುವ ಹಾಗೂ ನಿವೃತ್ತಿ ಆಗುತ್ತಿರುವವರು ಇದ್ದಾರೆ, ಇವರಿಗೆ ಮುಂದಿನ ದಿನಗಳಲ್ಲಿ ಆಗುವ ಘನಘೊರ ಆರ್ಥಿಕ ಸಂಕಷ್ಠಗಳ ತೊಂದರೆ, ಸರ್ಕಾರದ ಅಧಿಕಾರಿಗಳಿಗಾಗಲಿ, ಆಡಳಿತ ಮಂಡಳಿಯವರಿಗಾಗಲಿ ಇಲ್ಲ, ಮರಣ ಹೊಂದಿದ ಕುಟುಂಬದವರಿಗೆ ಮತ್ತು ಅಲ್ಪ ಸ್ವಲ್ಪ ಸೇವೆ ಮಾಡಿ ನಿವೃತ್ತಿ ಆದ ಸಿಬ್ಬಂದಿಯವರಿಗೆ ಮಾತ್ರ ತೊಂದರೆಯಾಗುತ್ತಿದೆ ಆದ್ದರಿಂದ ಮನವಿಗೆ ಸ್ಪಂಧಿಸಬೇಕೆಂದು ಒತ್ತಾಯಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago