ಚಿಂಚೋಳಿ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಹಸಿಲ್ದಾರರ ಪ್ರಾಣದ ಹಂಗನ್ನು ತೊರೆದು ರಕ್ಷಿಸಿದ ಸಾಹಸಿ ಸಿಬ್ಬಂದಿಗಳಿಗೆ ಇಂದು ಭಾರತ ಮುಕ್ತಿ ಮೊರ್ಚಾ ಸಂಘಟನೆ ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು .
ಸುರಿಯುವ ಧಾರಾಕಾರ ಮಳೆಯಲ್ಲಿಯೆ ಯಾದಗಿರಿ ತಹಸಿಲ್ದಾರರಾದ ಪಂಡಿತ್ ಬೀರಾದರ್ ರವರು ತಮ್ಮ ಕರ್ತವ್ಯ ಮುಗಿಸಿಕೊಂಡು ಸೇಡಮ್ ಮಾರ್ಗವಾಗಿ ಬೀದರಗೆ ತೆರಳುತ್ತಿರುವಾಗ ಗಣಾಪೂರದ ಹತ್ತಿರ ನೀರಿನ ರಭಸಕ್ಕೆ ಕಾರು ಸಮೇತ ತಹಸಿಲ್ದಾರರು ಕೊಚ್ಚಿಕೊಂಡು ಹೋಗಿದರು.
ಹರಸಾಹಸ ಪಟ್ಟು ಗಿಡದ ಮೇಲೇರಿ ಕುಳಿತ ದ್ರಶ್ಯ ನೋಡುಗರ ಮನಕಲುಕುವಂತಿತ್ತು ಪೋಲಿಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಿಯರು ತಮ್ಮ ಪ್ರಾಣದ ಹಂಗನ್ನು ತೋರೆದು ತಹಸಿಲ್ದಾರರಿಗೆ ಪ್ರಾಣಾಪಾಯದಿಂದ ಪಾರು ಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಯುವಕರಾದ ಜಾವೇದ್ ಸಿರೊಳ್ಳಿ, ರಘುರೆಡ್ಡಿ, ಅಗ್ನಿಶಾಮಕದಳದ ಆನಂದಕುಮಾರ್ ದುಖಾನ್ದಾರ್, ಸುನೀಲ್ ಸೋನಾರ್ ರವರಿಗೆ ಇಂದು ಚಿಂಚೋಳಿಯ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ, ಕಾಶಿರಾಮ್ ದೇಗಲ್ಮಡಿ, ಗೋಪಾಲ ಗಾರಂಪಳ್ಳಿ, ಉಲ್ಲಾಸ ಕೆರೊಳ್ಳಿ, ನಂದಕುಮಾರ ಹೂಡದಳ್ಳಿ, ನಂದುಕುಮಾರ ಭಕ್ತಂಪಳ್ಳಿ, ನಾಗೇಂದ್ರ ಗರಗಪಳ್ಳಿ, ಹರ್ಷವರ್ಧನ ಚಿಮ್ಮನಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…