ಕಲಬುರಗಿ: ಹೈದ್ರಾಬಾದ್ ಕರ್ನಾಟಕದ ನೈಜ ವಿಮೋಚನಾ ದಿನಾಚರಣೆ ಅಂಗವಾಗಿ ಇಂದು 18.09.2020 ರಂದು ಬೆಳ್ಳೆಗ್ಗೆ 8.30 ಗಂಟೆಗೆ ಕರ್ನಾಟಕ ಯುವಜನ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಮರು ಸ್ವಾತಂತ್ರೋತ್ಸವ ದಿನ, ವೆಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಸಾಮಾಜಿಕ ಯುವ ಸಂಘಟನೆಯ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ಜೇನವೆರಿ ವಿನೋದಕುಮಾರ ನೇತೃತ್ವದಲ್ಲಿ ಸೇರಿದ ಪಧಾಧಿಕಾರಿಗಳು ಮೊದಲಿಗೆ ಮೂರ್ತಿಯನ್ನು ಪೂಜಿಸಿ, ಸರದಾರ ವಲ್ಲಭಾಯಿ ಪಟೇಲರ ಮೂರ್ತಿಗೆ ಮಾಲಾರ್ಪಣೆ ಮಾಡಿ, ರಾಷ್ಟ್ರ ಗೀತೆ ಹಾಡಿ ವಿಮೋಚನೆ ಯಲ್ಲಿ ಮಡಿದ ನೈಜ ಹುತಾತ್ಮರಿಗೆ ಹಾಗೂ ಹೋರಾಟಗಾರರಿಗೆ ಗೌರವ ಸಲ್ಲಿಸಿದರು.
ನಂತರ ಮಾತನಾಡಿದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರು ಹಾಗೂ ಹಿರಿಯರು ಅದ ಶ್ರೀ. ಗೋಪಾಲರಾವ ಗುಡಿ ಮಾತನಾಡುತ್ತಾ ಈ ಹಿಂದೆ 3 ವರ್ಷ್ ದಿ. 18 ರಂದೆ ಆಚರಿಸಿದ್ದು ನನಗೆ ನೆನಪು ಅಲ್ಲದೆ ಅದು ಸತ್ಯ ಘಟನೆ ಕೂಡಾ ಹೌದು, ಆದರೆ ಸರಕಾರ ಏಕೆ 17 ಎಂದು ಆಚರಿಸುತದೆ ತಿಳಿಯದಾಗಿದೆ. ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಚಿಂತೆಯಾಗಿದೆ ತಪ್ಪು ಯಾವುದು ಸರಿಯಾವುದು ಎಂದು ಸರಕಾರವೇ ಸ್ಪಷ್ಟ ವಾಗಿ ಉತ್ತರಿಸಬೇಕು ಎಂದು ಕೋರಿದರು.
ಅಲ್ಲದೆ ಮುಂದಿನ ವರ್ಷ 18 ಸೆಪ್ಟೆಂಬರ್ ಎಂದು ತಿದ್ದುಪಡಿ ಗೊಳಿಸಿ ಆಚರಿಸಬೇಕು ಎಂದು ಒಕ್ಕೂಟದ ಆಗ್ರಹವನ್ನು ಪುನರ್ ಪರಿಶೀಲಿಸಿ ಹಿಂದಿನ ಎಲ್ಲ ಅದೇಶಗಳನ್ನು ರದ್ದುಪಡಿಸಿ ಹೊಸ ಆದೇಶ ಹೊರಡಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ಒಕ್ಕೂಟದ ಕಾರ್ಯದರ್ಶಿ ಜಗನ್ನಾಥ ಮನಟಾಳೆ ಸಭೆಯಲ್ಲಿ ಸೇರಿದ ಎಲ್ಲರನ್ನು ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಸಂಚಾಲಕ ನ್ಯಾಯವಾದಿ ಜೇ. ವಿನೋದ ಕುಮಾರ ಮಾತನಾಡಿ, ಈ ಹಿಂದೆ ಬರಹಗಾರರ ಬಳಗದ ಅಧ್ಯಕ್ಷ ನಾಗಿ ಸೇವೆ ಸಲ್ಲಿಸುವಾಗ ಕೂಡಾ ಸತತ ಮೂರು ವರ್ಷ ಮನವಿ ಸಲ್ಲಿಸಲಾಗಿದೆ ಆದರೆ ಅದಕ್ಕೆ ಜಿಲ್ಲಾಡಳಿತದ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿಲ್ಲ ಎಂಭ ಕೊರಗು ಇದೆ. ಆದರೆ ನಾವು ಇದಕ್ಕೆ ಒಂದು ತಾರ್ಕಿಕ ಅಂತ್ಯ ಹೇಳಲು ಇಚ್ಚಿಸಿ, ಈಗಾಗಲೇ ಮಾನ್ಯ ಮುಖ್ಯಮಂತ್ರಿ ಹಾಗೂ ಜಿಲ್ಲಾಡಳಿತ ಕ್ಕೆ ಮನವಿ ಸಲ್ಲಿಸಿದ್ದೇವೆ ಅವರು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಯುವ ಜನತೆಯಲ್ಲಿ ಜಾಗ್ರತಿ ಮೂಡಿಸಿ, ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಕರೆ ನೀಡಿದರು.
ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದ ಶ್ರೀ. ಅನಂತ ಗುಡಿ ಮಾತನಾಡುತ್ತಾ ಕಳೆದ ಸುಮಾರು 7 ವರ್ಷಗಳಿಂದ ನಮ್ಮ ಸಂಘಟನೆಯು ಕೂಡಾ ಸಿಂಪಿ ಯವರ ಬಳಗದೊಂದಿಗೆ ಜೊತೆ ಗುಡಿ ಆಚರಿಸಲಾಗಿದೆ. ಅವರು ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಎನ್ನುವದರಲ್ಲಿ ಅನುಮಾನವಿಲ್ಲ, ಅವರ ಉದ್ದೇಶವೇ ನಮ್ಮ ಸಂಕಲ್ಪವಾಗಿದೆ ಎಂದು ಹೇಳಲು ಬಯಸುತೇನೆ. ನಮಗೆ ವಿವಾದ ಸೃಷ್ಟಿಸಿ ಪ್ರತಿಷ್ಠೆ ಬೆಳೆಸಿಕೊಳ್ಳಬೇಕು ಎಂಭ ಹಂಬಲವಿಲ್ಲಾ ಆದರೆ ಈ ನೆಲದ ಮೌಲ್ಯ, ಸ್ವಾಭಿಮಾನ ಮತ್ತು ಇತಿಹಾಸ ಮರೆಯ ಬಾರದು ಎನ್ನುವ ಕಳಕಳಿ ಇದೆ, ಇಲ್ಲಿನ ಅದ್ಯ ವಚನಕಾರ ದಾಸಿಮಯ್ಯ ನೀಡಿದ ವಚನ ಸಾಹಿತ್ಯ ಮತ್ತು ನ್ಯಾಯ ಶಾಸ್ತ್ರ ವೇ ಜಗತ್ತಿಗೆ ಮಾರ್ಗದರ್ಶಿಯಾಗಿರುವಾಗ ನಮ್ಮತನವನ್ನು ಉಳಿಸಲು ಮತ್ತು ಕಾಪಾಡಲು ನಾವು ಒಟ್ಟಾಗಿ ಇಂದು ಈ ನೈಜ ಮುಕ್ತಿ ದಿನ ವೆಂದು ಆಚರಿಸಿದ್ದೇವೆ. ಕೊನೆಯಲ್ಲಿ ರಾಜಕೀಯ ಧುರೀಣರು ಅದ ಶ್ರೀ ಉದಯ ಕುಮಾರ್ ಜೇವರ್ಗಿ ಯವರು ವಂದನಾರ್ಪಣೆ ಗೈದರು. ಕಾರ್ಯಕ್ರಮ ದಲ್ಲಿ. ಕ.ಸ.ಪಾ ಅಧ್ಯಕ್ಷ ಶ್ರೀ. ವೀರಭದ್ರ ಸಿಂಪಿ ಹಾಗೂ ಸಂಘಟನೆಯ ಕಾರ್ಯಾಧ್ಯಕ್ಷ ಶ್ರೀ. ಭೀಮರಾವ ಜೀರಗಿ ಉಪಾಧ್ಯಕ್ಷ ರಾದ ಶ್ರೀ. ನಾಗಣ್ಣ ಶೀಲವಂತ್ ಮಾಜಿ ಸೈನಿಕ ಶ್ರೀ. ಮಹಾಂತೇಶ ಸಂಗೊಳ್ಳಿ, ಹಿರಿಯರಾದ ಶ್ರೀ. ರತನ ಚಂದ ಕಾಸರ ಶ್ರೀ. ಬಸವರಾಜ ಪಟ್ಟೇದ, ಶಿಕ್ಷಕ ಸಂತೋಷ ಪಂಚಾಳ, ಗುಂಡು ಆವರಾದಿ, ಮೆಹಬೂಬ್ ಪಟೇಲ್, ಬಾಹುಬಲಿ ಕಾಸರ ಮತ್ತು ಇನ್ನಿತರರು ಪಾಲಗೊಂಡಿದ್ದದ್ದರು.
ಕರ್ನಾಟಕ ಯುವಜನ ಒಕ್ಕೂಟವು ಕೂಡಾ ಕಳೆದ 9 ವರ್ಷಗಳಿಂದ ಬರಹಗಾರರ ಬಳಗ ಜೊತೆಯಲ್ಲಿ ಈ ದಿನವನ್ನು ಆಚರಿಸುತ್ತಾ ಬರುತಿದೆ, ಈಗ ನಾವು ಹೊಸ ಕನಸಿನೊಂದಿಗೆ ಇಂದು ನಮ್ಮ ನಡೆ ಹೊಸ ಕಲ್ಯಾಣ ರಾಜ್ಯದಡೆಗೆ ಅನ್ನುವ ಸಂಕಲ್ಪದೊಂದಿಗೆ ಮುನ್ನಡಿ ಇಡುತ್ತಿದ್ದೇವೆ. ಕಳೆದ ವರ್ಷ ಸರಕಾರ ಹೇಗೆ ಹೊಸ ನಾಮಕರಣ ಮಾಡಿತೋ ಅದೇ ನಿಟ್ಟಿನಲ್ಲಿ ನಮ್ಮ ಈ ಬೇಡಿಕೆಯನ್ನು ಕೂಡ ಈಡೇರಿಸಲಿ ಎಂದು ಒತ್ತಾಯಿಸುತ್ತೆವೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…