ಬಿಸಿ ಬಿಸಿ ಸುದ್ದಿ

ಶಿಕ್ಷಣದ ಗುಣಮಟ್ಟ ಕುಸಿದಿದೆ: ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ರಾಜುಗೌಡ ಹೇಳಿಕೆ

ಸುರಪುರ: ಪ್ರತಿ ವರ್ಷದ ಹತ್ತನೆ ತರಗತಿ ಪಿಯುಸಿ ಫಲಿತಾಂಶ ನೋಡಿದಲ್ಲಿ ನಮ್ಮದು ಕೊನೆಯ ಸ್ಥಾನದಲ್ಲಿ ಇರುವುದು ಕಂಡು ನಿಜಕ್ಕೂ ಬೇಸರವಾಗುತ್ತದೆ.ಅದರಿಂದ ಕೇವಲ ನನಗೆ ಮಾತ್ರವಲ್ಲ ನಿಮಗೂ ಇದರಿಂದ ಬೇಸರವಾಗಿರಲಿದೆ.ಆದ್ದರಿಂದ ಈ ಮುಂದೆ ನಮ್ಮ ತಾಲೂಕು ಮತ್ತು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದೊರೆಯುವಂತೆ ಶಿಕ್ಷಣ ನೀಡಿ ಎಂದು ಶಾಸಕ ರಾಜುಗೌಡ ಮನವಿ ಮಾಡಿದರು.

ನಗರದ ಪ್ರೇರಣಾ ಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕ್ಷೇತ್ರ ಸಮನ್ವಾಯಾಧಿಕಾರಿಗಳ ಕಾರ್ಯಾಲಯ ಸರಕಾರಿ ನೌಕರರ ಸಂಘ ಹಾಗು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತಿತರೆ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ಕೊರೊನಾ ದಿಂದಾಗಿ ತರಗತಿಗಳು ನಡೆಯುತ್ತಿಲ್ಲ ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ.

ಆದ್ದರಿಂದ ತಾಲೂಕಿನಲ್ಲಿಯ ಎಲ್ಲಾ ೬೭ ಶಾಲೆಗಳಲ್ಲಿ ಮಕ್ಕಳ ಕಲಿಕೆಗಾಗಿ ಆನ್ಲೈನ್ ಶಿಕ್ಷಣಕ್ಕಾಗಿ ಪ್ರತಿ ಶಾಲೆಗೆ ಟಿ.ವಿ ಮತ್ತು ಕ್ಯಾಮರಾ ಕೊಡಿಸಿ ಇದಿರಿಂದ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.ಅಲ್ಲದೆ ಅನೇಕ ಶಾಲೆಗಳಲ್ಲಿ ಗಣಿತ ವಿಜ್ಞಾನ ಇಂಗ್ಲೀಷಿನಂತ ಕಠಿಣ ವಿಷಯಗಳಿಗೆ ಶಿಕ್ಷಕರ ಕೊರತೆ ಇರುವುದು ಗಮನಕ್ಕಿದೆ.ಆದ್ದರಿಂದ ಬೆಂಗಳೂರು ಮೈಸೂರು ಭಾಗದಲ್ಲಿನ ನುರಿತ ಉತ್ತಮ ಭೋದನಾ ಶಿಕ್ಷಕರನ್ನು ಸಂಪರ್ಕಿಸಿ ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲು ವಿನಂತಿಸುವುದಾಗಿ ತಿಳಿಸಿದರು.

ಎಸ್.ಸಿ ಮತ್ತು ಎಸ್.ಟಿ ಮಕ್ಕಳಿಗೆ ಮೋಬೈಲ್ ಕೊಡುವ ಬಗ್ಗೆ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.ಅವರಿಗೆ ಈ ಕಾರ್ಯಕ್ರಮದ ಮೂಲಕ ವಿನಂತಿಸಿ ಎಸ್‌ಸಿ ಎಸ್‌ಟಿ ಎಂದು ತಾರತಮ್ಯ ಬೇಡ ರಾಜ್ಯದಲ್ಲಿನ ಎಲ್ಲಾ ಮಕ್ಕಳಿಗೆ ಮೋಬೈಲ್ ಕೊಡುವಂತೆ ಮನವಿ ಮಾಡುವುದಾಗಿ ತಿಳಿಸಿ,ಮುಂದೆ ಸರಕಾರಿ ನೌಕರಿ ಸರಕಾರಿ ಶಾಲೆಯಲ್ಲಿ ಕಲಿತವರಿಗೆ ಸಿಗುವಂತ ಯೋಜನೆ ಜಾರಿಗೊಳಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ನಾನು ಒಳ್ಳೆಯದು ಮಾಡಿದಾಗ ಶಹಬ್ಬಾಶ್ ಅನ್ನಿ ನಾನು ಗೊತ್ತಿಲ್ಲದೆ ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿ ನಾನು ಇಂದು ಶಾಸಕನಾಗಲು ಮಂಡಳಿಯ ಅಧ್ಯಕ್ಷನಾಗಲು ಅಕ್ಷರ ಕಲಿಸಿದ ನೀವೆಲ್ಲ ಶಿಕ್ಷಕರೆ ಕಾರಣ ಎಂದು ಶಿಕ್ಷಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ನಮ್ಮ ಯಾದಗಿರಿ ಜಿಲ್ಲೆ ಈ ವರ್ಷದ ಫಲಿತಾಂಶದಲ್ಲಿ ೫೮% ತಲುಪಿದೆ ಮುಂದಿನ ವರ್ಷದ ಫಲಿತಾಂಶದಲ್ಲಿ ಶೇ ೬೫ ಫಲಿತಾಂಶ ತರುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಜಿ.ಪಂ ಅಧ್ಯಕ್ಷ ಬಸನಗೌಡ ಯಾಡಿಯಾಪುರ ಜಿ.ಪಂ ಮಾಜಿ ವಿರೋಧ ಪಕ್ಷದ ನಾಯಕ ಹೆಚ್.ಸಿ ಪಾಟೀಲ ಹಾಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ iಹಾದೇವರಡ್ಡಿ ಮಾತನಾಡಿದರು.

ನಂತರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ನಾಗನಗೌಡ ಸರಕಾರಿ ಪ್ರೌಢಶಾಲೆ ಹುಣಸಗಿ ಎಸ್.ಎಸ್.ಮಾರನಾಳ ಸರಕಾರಿ ಪ್ರೌಢ ಶಾಲೆ ಹಗರಟಿಗಿ ಸ್ಯಾಮುವೆಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖುರೇಶಿ ಮೊಹಲ್ಲಾ ಸುರೇಶ ಸರಕಾರಿ ಪ್ರಾಥಮಿಕ ಶಾಲೆ ಸಿದ್ದಾಪುರ ಹಾಗು ಸಿದ್ದಣ್ಣ ದನಗುಂಡ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಾಳಗಿ ಇವರುಗಳನ್ನು ಹಾಗು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ೧೭ ಜನ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ ತಾಲೂಕು ಅಧ್ಯಕ್ಷ ಸೋಮರಡ್ಡಿ ಮಂಗಿಹಾಳ ಆರ್.ಕೆ ಕೋಡಿಹಾಳ ಯಲ್ಲಪ್ಪ ಕಾಡ್ಲೂರ ಸಂಜೀವ ದರಬಾರಿ ಚಂದ್ರಶೇಖರ ವಕ್ರಾಣಿ ಶರಣಗೌಡ ಪಾಟೀಲ್ ಚುನ್ನು ಪಟೇಲ್ ಎಪಿಎಫ್‌ನ ವಿನೋದ ವೇದಿಕೆ ಮೇಲಿದ್ದರು.ಬಿಆರ್‌ಸಿ ಖಾದರ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಶರಣಬಸವ ಗೋನಾಲ ಸ್ವಾಗತಿಸಿದರು ಶಿವಶರಣಪ್ಪ ಶಿರೂರ ನಿರೂಪಿಸಿದರು ರಾಜಶೇಖರ ದೇಸಾಯಿ ನಿರ್ವಹಿಸಿದರು ಹಾಗು ಸಿಆರ್‌ಪಿ ಶಿವಾನಂದ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago