ಶಹಾಬಾದ: ನಗರಸಭೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಶೂಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜೋತ್ಸ್ನಾ ಮತ್ತು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ವೀಕ್ಷಿಸಿ, ಹಠಾತನೇ ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಕೊಠಡಿಗೆ ಪ್ರವೇಶಿಸಿ, ವೈದ್ಯಾಧಿಕಾರಿ ಡಾ.ರಹೀಮ್ ಅವರಿಗೆ ಹಾಜರಿ ಪುಸ್ತಕ ತೋರಿಸುವಂತೆ ತಾಕೀತು ಮಾಡಿದರು.ತಕ್ಷಣವೇ ಡಾ.ರಹೀಮ್ ಹಾಜರಿ ಪುಸ್ತಕ ಹಾಜರುಪಡಿಸಿದರು. ಹಾಜರಿ ಪುಸ್ತಕವನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜೋತ್ಸ್ನಾ ಗೈರು ಹಾಜರಾದ ವೈದ್ಯರ ಬಗ್ಗೆ ಕೇಳಿದರು. ಡಾ.ಸಂಧ್ಯಾ ಅವರು ಆರಾಮವಿಲ್ಲದ ಕಾರಣ ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದು ನನಗೆ ತಿಳಿಸಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ರಹೀಮ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳು ಹಾಜರಿ ಪುಸ್ತಕದಲ್ಲಿ ಡಾ.ಚಂದ್ರಿಕಾ ಹಾಗೂ ಡಾ.ಸಂಧ್ಯಾ ಅವರನ್ನು ಗೈರು ಹಾಜರಿ ಹಾಕಿ, ಅದರ ಫೋಟೋ ತೆಗೆದುಕೊಂಡರು.
ನಂತರ ವಾರ್ಡಗಳಿಗೆ ತೆರಳಿ ರೋಗಿಗಳ ಜತೆ ಮಾತನಾಡಿದರು.ನಂತರ ಆಸ್ಪತ್ರೆಯ ಪರಿಸರ ಅಷ್ಟೊಂದು ಚೆನ್ನಾಗಿಲ್ಲ. ಆಸ್ಪತ್ರೆಯ ಒಳಗಿನ ಸ್ವಚ್ಛತೆ ಕಾಪಾಡುವುದು ನಿಮ್ಮ ಕರ್ತವ್ಯ. ಹೊರಗಿನ ಸ್ವಚ್ಛತೆ ಕಾಪಾಡುವುದು ನಗರಸಭೆಯ ಕೆಲಸ. ಒಂದು ವೇಳೆ ಸ್ವಚ್ಛತೆ ಕಾಪಾಡದಿದ್ದರೇ ನಿವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದರು.ಅಲ್ಲದೇ ಆಸ್ಪತ್ರೆಯ ಒಳಗಿನ ವಾರ್ಡಗಳನ್ನು ತಕ್ಷಣವೇ ಶುಚಿಗೊಳಿಸಿ, ನನ್ನ ವಾಟ್ಸಪಗೆ ಭಾವಚಿತ್ರಗಳನ್ನು ಕಳುಹಿಸಿ ಎಂದು ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪನವರಿಗೆ ತಾಕೀತು ಮಾಡಿದರು.
ಆಸ್ಪತ್ರೆಗೆ ಬರುವ ರೋಗಿಗಳ ಸೇವೆ ಮಾಡುವುದು ವೈದ್ಯರಾದ ತಮ್ಮ ಕರ್ತವ್ಯ. ಅದರಿಂದ ನುಣುಚಿಕೊಂಡು ಹೋದರೆ ಅವರ ವಿರುದ್ಧ ಕ್ರಮಕೈಗೊಳ್ಳುವುದು ಖಚಿತ.ಆದ್ದರಿಂದ ಸಿಬ್ಬಂದಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ರಹೀಮ ಅವರಿಗೆ ಶಾಸಕ ಬಸವರಾಜ ಮತ್ತಿಮಡು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪ, ಕಾರ್ಯನಿವರ್ಾಹಕ ಅಭಿಯಂತರ ಶಿವನಗೌಡ ಪಾಟೀಲ,ಡಾ.ರಶೀದ್ ಮರ್ಚಂಟ್, ಅಣವೀರ ಇಂಗಿನಶೆಟ್ಟಿ, ಸುಭಾಷ ಜಾಪೂರ, ನಾಗರಾಜ ಮೇಲಗಿರಿ, ಡಾ.ಅಹ್ಮದ್ ಪಟೇಲ್,ನಿಂಗಣ್ಣ ಹುಳಗೋಳಕರ್,ಸದಾನಂದ ಕುಂಬಾರ, ಭೀಮಯ್ಯ ಗುತ್ತೆದಾರ, ಶ್ರೀಧರ ಜೋಷಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…