ಬಿಸಿ ಬಿಸಿ ಸುದ್ದಿ

ಜನ ಸಂರಕ್ಷಣೆಯ ಹಕ್ಕೊತ್ತಾಯಗಳನ್ನು ಪರಿಗಣಿಸಲು ಸಿಪಿಐಎಂ ಆಗ್ರಹ

ಕಲಬುರಗಿ: ಕೋವಿಡ್ ಹಾಗೂ ಆರ್ಥಿಕ ಸಂಕಷ್ಠದಲ್ಲಿರುವಾಗ, ಅವರ ಬದುಕಿನ ಮೇಲೆಯೇ ಮಾರಾಣಾಂತಿಕ ಧಾಳಿಗಳನ್ನು ಈ ಅವಧಿಯಲ್ಲಿ ಸುಮಾರು 11 ಸುಗ್ರೀವಾಜ್ಞೆ ವಾಪಸ್ ಪಡೆಯಬೇಕೆಮದು ಸಿಪಿಐಎಂ ಜಿಲ್ಲಾ ಸಮಿತಿ ಶರಣಬಸಪ್ಪ ಮಮಶೇಟ್ಟಿ ಅವರ ನೇತೃತ್ವದಲ್ಲಿ ಕಲಬುರಗಿ ಲೋಕಸಭಾ ಸದಸ್ಯರ ಕಾರ್ಯಾಲಯದ ಮುಂದೆ ಪ್ರತಿಭಟನೆ ಆಗ್ರಹಿಸಿದರು.

ದೇಶ ಕಳೆದ ಒಂದು ದಶಕದಿಂದ ಗಂಭೀರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ಎಳೆಂಟು ತಿಂಗಳಿಂದ ಕೋವಿಡ್ – 19 ರ ವೈರಾಣು ಸಾಂಕ್ರಾಮಿಕ ಧಾಳಿಗೆ ಸಿಲುಕಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇದರ ಹಾವಳಿಯನ್ನು ತಡೆಯಲು ಸಾಧ್ಯವಿರುವಾಗ ನಮ್ಮ ದೇಶದಲ್ಲಿ ಅದು ವೇಗವಾಗಿ ವಿಸ್ಥರಿಸಲ್ಪಡುತ್ತಿದೆ. ಕರ್ನಾಟಕ ರಾಜ್ಯವು ಈ 2020 ರಲ್ಲಿ  ಬರ ಹಾಗೂ 2-3 ಬಾರಿ ಅತೀವೃಷ್ಠಿ ಹಾಗೂ ಪ್ರವಾಹಗಳಿಗೆ ತುತ್ತಾಗಿದೆ. ಈ ಎಲ್ಲಾ ಸಂದರ್ಭಗಳಿಂದಲೂ ದೇಶದ ಹಾಗೂ ರಾಜ್ಯದ ಸಾಮಾನ್ಯ ಜನತೆಯ ಹಿತವನ್ನು ರಕ್ಷಿಸುವಲ್ಲಿ ಕೇಂದ್ರ ಸರಕಾರ ಘೋರವಾಗಿ ವಿಫಲವಾಗಿದೆ.  ಬದಲಿಗೆ ದೇಶದ ಹಾಗೂ ವಿದೇಶಗಳ ಬಹುರಾಷ್ಟ್ರೀಯ ಸಂಸ್ಥೆಗಳ ವ್ಯಾಪಕವಾದ ಲೂಟಿಗೆ ದೇಶವನ್ನು ತೆರೆಯುತ್ತಿರುವುದು ಖಂಡನೀಯವಾಗಿದೆ ಎಂದು ಮಮಶೇಟಿ ಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ – 19 ರ ಪರಿಹಾರವಾಗಿ ಮುಂದಿನ ಆರು ತಿಂಗಳ ಕಾಲ ಎಲ್ಲಾ ಆದಾಯ ತೆರಿಗೆ ವ್ಯಾಪ್ತಿ ಕೆಳಗೆ ಬಾರದಿರುವ  ಕುಟುಂಬಗಳಿಗೆ ತಲಾ ಮಾಸಿಕ 7,500 ರೂಗಳ ಹಾಗೂ ತಲಾ ವ್ಯಕ್ತಿಗೆ 10 kg ಸಮಗ್ರ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ನಗರ ಪ್ರದೇಶಕ್ಕೂ ಮತ್ತು ಕನಿಷ್ಟ 200 ದಿನಗಳಿಗೆ ವಿಸ್ತರಿಸಬೇಕು. ಕೂಲಿಯನ್ನು ಹೆಚ್ಚಿಸಬೇಕು. ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಘೋಷಿಸುವಂತೆ, ಕೇಂದ್ರ ಸರಕಾರ ಆಸ್ಪತ್ರೆ ಸೌಕರ್ಯಗಳನ್ನು ವಿಸ್ತರಿಸಬೇಕು ಮತ್ತು ಉಚಿತ ಶುಶ್ರೂಷೆಗೆ ವ್ಯವಸ್ಥೆ ಮಾಡಬೇಕು ಹಾಗೂ ಖಾಸಗಿ ಆರೋಗ್ಯ ಸೌಕರ್ಯಗಳಿಗೆ ತರ್ಕ ಬದ್ಧ ದರಗಳನ್ನು ನಿಗದಿ ಮಾಡಬೇಕು ಎಂದು ಆಗ್ರಹಿಸಿರು.

ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ  ಬರ ಬೇಕಾಗಿರುವ ಜಿ.ಎಸ್.ಟಿ ಬಾಕಿ, ಬಜೆಟ್ ಅನುದಾನದ ಬಾಕಿ, ಬರ ಹಾಗೂ ಅತೀವೃಷ್ಟಿ ಪರಿಹಾರ, ಕೋವಿಡ್ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ,  ಸಾರ್ವಜನಿಕ ಉದ್ಯಮಗಳ ಹಾಗೂ ಸಂಸ್ಥೆಗಳ ಖಾಸಗೀಕರಣವನ್ನು ಹಿಂಪಡೆಯಬೇಕು. ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿ ಸಾರ್ವಜನಿಕ ರಂಗವನ್ನು ಬಲಪಡಿಸಿ, ಭಾರತೀಯ ಸಂವಿಧಾನವನ್ನು ಮತ್ತು ಅದರ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಯ ಮೂಲಭೂತ ಅಂಶಗಳ ಖಾತರಿಯನ್ನು ರಕ್ಷಿಸಬೇಕು

ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ರಾಜಕೀಯ ಚಟುವಟಿಕೆಗಳನ್ನು, ರಾಜ್ಯದ ಸ್ಥಾನಮಾನವನ್ನು ಹಾಗೂ ಕಲಮು 370ನ್ನು ಮರುಸ್ಥಾಪಿಸಬೇಕು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೇರಿದಂತೆ ಎಲ್ಲ ನಿರ್ಬಂಧಿತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಸಾರ್ವಜನಿಕ ಸಾರಿಗೆ ಮತ್ತು ಇತರ ಸೇವೆಗಳೊಂದಿಗೆ ಸಂಪೂರ್ಣ ಸಂಪರ್ಕಗಳನ್ನು ಮತ್ತೆ ಸ್ಥಾಪಿಸಿ ಸೇರಿದಂತೆ ಮುಂತಾದ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಪ್ರಧಾನಿ ಮಂತ್ರಿಗಳಿಗೆ ಮನವಿ ಮಾಡಿದರು.

ಈ ವೇಳೆಯ ಅಶೋಕ್ ಮ್ಯಾಗೆರಿ, ಭಿಮಶೇಟ್ಟಿ ಯಂಪಳಿ,  ಮಹಮ್ಮದ್ ಮೋಖದ್ದಮ್, ಗುರುನಂದೇಶ ಕೋಣಿನ ಸೇರಿದಂತೆ ಮುಂತಾದವರು ಇದ್ದರು.

emedialine

Recent Posts

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

3 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago