ಬಿಸಿ ಬಿಸಿ ಸುದ್ದಿ

ಗ್ರಾ.ಪಂ ನೌಕರರ ಧರಣಿ: ಸಮಸ್ಯೆಗಳಿಗೆ ಸ್ಪಂದಿಸದ ಸರಕಾರ

ಕಲಬುರಗಿ: ಬಾಕಿವೇತನ ಪಾವತಿಗಾಗಿ ಇಎಫ್‍ಎಮ್‍ಎಸ್‍ಗೆ ssssಸೇರದ ಸಿಬ್ಬಂಧಿಗಳ ಸೇರ್ಪಡೆ,ಕನಿಷ್ಟ ವೇತನ, ಅನುಮೋದನೆ, ಪಂಪ ಆಪರೇಟರ್ ದಿಂದ ಬಿಲ್‍ಕಲೆಕ್ಟರ್ ಹುದ್ದೆಗೆ ಬಡ್ತಿ ಹಾಗೂ ಬಿಲ್ ಕಲೆಕ್ಟರ ದಿಂದ ಕಾರ್ಯದರ್ಶಿ ಗ್ರೇಡ್-2, ಲೆಕ್ಕ ಸಹಾಯಕ ಹುದ್ದೆಗೆಳ ಬಡ್ತಿ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್ ಕಛೇರಿ ಎದುರುಗಡೆ ಎಂಟನೇ ದಿನದ ಧರಣಿ ಹಮ್ಮಿಕೊಳ್ಳಲಾಯಿತು.

ಗ್ರಾಮ ಪಂಚಾಯತ್ ನೌಕರರ ಧರಣಿ ಸತ್ಯಾಗ್ರಹವು ಸುಮಾರು 8ನೇ ದಿನಕ್ಕೇ ಕಾಲಿಟ್ಟರು ಧರಣಿ ನಿರತ ಸ್ಥಳಕ್ಕೆ ಬರದೇ ಕ್ಯಾರೆ ಎನ್ನದೆ ಸರಕಾರ ಹಾಗೂ ಸರಕಾರದ ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎನ್ನುವುದೇ ಧರಣಿ ನಿರತರ ವ್ಯಾಖ್ಯ ಕೇಳಿ ಬರುತ್ತಿದೆ.

ಕೊರೋನಾ ದೇಶವ್ಯಾಪಿ ಆವರಿಸಿದೆ ನಮ್ಮ ರಾಜ್ಯದಲ್ಲಿಯೂ ಹೆಚ್ಚಳವಾಗಿದೆ. ಕೊರೋನಾ ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯತಿ ನೌಕರರು ಹಗಲಿರುಳು ದುಡಿಯುತ್ತಿದ್ದಾರೆ. ಕುಡಿಯುವ ನೀರು ಸ್ವಚ್ಛತೆ, ಲಾಕಡೌನ, ಸೀಲ್‍ಡೌನ ಮುಂತಾದ ಕೆಲಸಗಳಲ್ಲಿ ವಿಶೇಷವಾಗಿ ಕ್ವಾರೆಂಟೈನ್ ಕ್ಯಾಂಪಗಳಲ್ಲಿ ಪಂಚಾಯತ ನೌಕರರು ಶ್ರಮಿಸಿದ್ದಾರೆ. ಪಂಚಾಯತ ಸಿಬ್ಬಂದಿಗಳಿಗೆ 2017,2018, 2019 ಹಾಗೂ 2020 ರಲ್ಲಿಯೂ ಕೂಡ ಸಂಬಳ ಬಾಕಿ ಉಳಿದಿದೆ. ಬಾಕಿ ಉಳಿದ ಸಂಬಳ ಕೊಡಿಸಲು ಸರಕಾರ ತೆರಿಗೆ ಸಂಗ್ರಹದಲ್ಲಿ 14ನೇ ಹಣಕಾಸು ಯೋಜನೆ, 15ನೇ ಹಣಕಾಸಿನ ಯೋಜನೆಯಲ್ಲಿ ಸಂಬಳ ಕೊಡಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಪಂಚಾಯತ ಪಿ.ಡಿ.ಓ ಗಳು ಸರಕಾರ ನಿಗಧಿಪಡಿಸಿದ ಕನಿಷ್ಠ ವೇತನ ಜಾರಿ ಮಾಡದೇ ಬಾಕಿ ಉಳಿಸಿಕೊಂಡಿದ್ದಾರೆ. ಸಂಬಳ ಕೊಡಿಸಲು ಹಲವಾರು ಸಾರಿ ಮನವಿ ಮಾಡಿದ್ದೇವೆ.

ಸರಕಾರದಿಂದ ವೇತನ ಪಾವತಿಗೆ ಸಂಬಂಧಿಸಿದಂತೆ ಹಲವಾರು ತಿಂಗಳುಗಳು ಕಳೆದರೂ ಕೂಡ ಗ್ರಾಮ ಪಂಚಾಯತಿಗಳಲ್ಲಿ ಆದೇಶಗಳು ಜಾರಿಯಾಗುತ್ತಿಲ್ಲ. ಇಎಫ್‍ಎಮ್‍ಎಸ್ ಸೇರ್ಪಡೆ ಮಾಡುವುದು ನಿವೃತ್ತಿಯಾದವರಿಗೆ ಉಪಧನ ನೀಡದಿರುವುದು, ತೆರಿಗೆ ಸಂಗ್ರಹದಲ್ಲಿ 40% ವೇತನ ನೀಡದಿರುವುದು, ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವುದು, 14ನೇ ಹಣಕಾಸು ಆಯೋಗದಲ್ಲಿ ಶೇಕಡ 10% ರ ಆಡಳಿತ ವೆಚ್ಚದಲ್ಲಿ ಸಿಬ್ಬಂಧಿ ವೇತನ ನೀಡದಿರುವ ಕಡೆ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ವೇತನ ನೀಡುವಂತೆ ಇತ್ಯಾದಿ ಸರಕಾರಿ ಆದೇಶಗಳನ್ನು ಗ್ರಾಮ ಪಂಚಾಯತಿಗಳು ಜಾರಿ ಮಾಡದೇ ಇರುವುದರಿಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳು ತೊಂದರೆ ಅನುಭವಿಸುತ್ತಿದ್ದಾರೆ. ತಾವು ಈ ಎಲ್ಲಾ ಆದೇಶಗಳು ಜಾರಿ ಮಾಡಬೇಕೆಂದು ಮಾನ್ಯ ಪ್ರಧಾನ ಕಾರ್ಯದರ್ಶಿಗಳು ನಾಲ್ಕೈದು ಸಲ ವಿ.ಸಿ ಮಾಡಿದರೂ ಕೂಡ ಇಎಫ್‍ಎಮ್‍ಎಸ್ ಸೇರ್ಪಡೆ ಅನುಮೋದನೆ ಮಾಡಿಸಲು ಕೂಡ ಸಾಧ್ಯವಾಗಿಲ್ಲ ಎಂಬುವುದು ಖೇದಕರ ಸಂಗತಿ. ತಾವು ಈ ಎಲ್ಲಾ ಆದೇಶಗಳನ್ನು ಜಾರಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಮ್ಮಗಳ ಬೇಡಿಕೆಯಾಗಿದೆ.

ಗ್ರಾಮ ಪಂಚಾಯತಿ ಕಾಯ್ದೆ ಸೆಕ್ಷನ್ 113ರಡಿಯಲ್ಲಿ ಉಪ ಕಲಂ 1,2,3 ರಲ್ಲಿ ಪಿ.ಡಿ.ಓ ರವರು ಪಂಚಾಯತ ನೌಕರರ ವಿಷಯಗಳನ್ನು ತೀರ್ಮಾನ ಮಾಡಲು ಅಧಿಕಾರ ಉಳ್ಳವರಾಗಿದ್ದಾರೆ. ಪಿ.ಡಿ.ಓ ರವರು ಸರಕಾರಿ ಆದೇಶಗಳನ್ನು ಜಾರಿ ಮಾಡುತ್ತಿಲ್ಲ. ಪಂಚಾಯತಿ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ.

ತಾವುಗಳೇ ಈ ಎಲ್ಲಾ ವಿಷಯಗಳನ್ನು ಮೇಲ್ವಿಚಾರಣೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಸರಕಾರಿ ಆದೇಶಗಳನ್ನು ಚಾಚು ತಪ್ಪದೇ ಜಾರಿ ಮಾಡುವಂತೆ ಪಿ.ಡಿ.ಓ ರವರ ಮೇಲೆ ಕ್ರಮ ಕೈಗೊಳ್ಳಬೇಕು. ಆದೇಶಗಳು ಬಂದು ವರ್ಷಾನುಗಟ್ಟಲೇ ಆದರೂ ಆದೇಶಗಳನ್ನು ಜಾರಿ ಮಾಡದೇ ಇರುವುದರಿಂದ ಜಿಲ್ಲಾ ಪಂಚಾಯತ ಮುಂದೆ ದಿನಾಂಕ: 14/09/2020 ರಿಂದ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಜಿಲ್ಲಾ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಪಾಟೀಲ್ ಹರಸೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕಡಣಿ, ಜಿಲ್ಲಾ ಖಜಾಂಚಿ ಶಿವಾನಂದ ಕವಲಗಾ ಬಿ. ಸೇರಿದಂತೆ ಇನ್ನಿತರರು ಇದ್ದರು.

emedialine

View Comments

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

3 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

3 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

5 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

5 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

5 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

5 hours ago