ಬಿಸಿ ಬಿಸಿ ಸುದ್ದಿ

ದಲಿತರ ಒಲವು ಬಿಜೆಪಿ ಕಡೆಗೆ: ಛಲವಾದಿ ನಾರಾಯಣ್ ಸ್ವಾಮಿ

ಕಲಬುರಗಿ: ದಲಿತ ಸಮುದಾಯದ ಬೆಂಬಲ ಬಿಜೆಪಿ ಕಡೆಗೆ ವಾಲುತ್ತಿರುವುದನ್ನು ರಾಜ್ಯಾದ್ಯಂತ ಸಂಘಟನಾ ಪ್ರವಾಸ ಕೈಗೊಂಡಿರುವ ನಾನು ಗಮನಿಸಿದ್ದೆನೆ   ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ  ಛಲವಾದಿ ನಾರಾಯಣ್ ಸ್ವಾಮಿ ಹೇಳಿದ್ದಾರೆ.
ಕಲಬುರಗಿ ನಗರಕ್ಕೆ ಆಗಮಿಸಿದ  ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಗಿ ಹಾಗೂ  ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ  ಮತ್ತು ಬಿಜೆಪಿ ಕಾರ್ಯಕರ್ತರಿಂದ   ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ದಲಿತ ಸಂಘಟನೆಯ ನಾಯಕರನ್ನು ಭೇಟಿ ಮಾಡಿ ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡುತ್ತಿದ್ದೇನೆ, ಬಹುತೇಕರು ಸಕಾರಾತ್ಮಕವಾಗಿ ಸ್ವಂದಿಸುತ್ತಿದ್ದಾರೆ ಎಂದು ನಾರಾಯಣ ಸ್ವಾಮಿ ಹೇಳಿದರು.ವಿರೋಧಿಗಳು ಬಿಜೆಪಿಯನ್ನು ದಲಿತರ ವಿರೋಧಿ ಹಾಗೂ  ಮೀಸಲಾತಿ ತೆಗೆದು ಹಾಕುತ್ತಾರೆ ಎಂದು ಸುಳ್ಳಿನ ಕಂತೆ ಕಟ್ಟುತ್ತಿದ್ದು,ಇದನ್ನು ದಲಿತರು ಯಾರು ಕೂಡ ನಂಬಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರಿಗಾಗಿ ವಿಶೇಷ ಯೋಜನೆ ಹಮ್ಮಿಕೊಂಡಿದವೆ,ಇದರ ಸದುಪಯೋಗ ಪಡೆದುಕೊಳ್ಳಬೇಕು ದಲಿತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ  ಬಿಜೆಪಿ ಕಲಬುರಗಿ (ಗ್ರಾಮಾಂತರ) ಜಿಲ್ಲಾ ಅಧ್ಯಕ್ಷರಾದ  ಶಿವರಾಜ್ ಪಾಟೀಲ್ ರದ್ದೆವಾಡಗಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಯವರು ಜಂಟಿಯಾಗಿ ಮಾತನಾಡಿ, ಬಿಜೆಪಿ ಪಕ್ಷವು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮಗ್ರ ಜೀವನ ಹಾಗೂ ಹೋರಾಟದ  ಬಗ್ಗೆ ವಿಶ್ವದಾದ್ಯಂತ ಬೆಳಕು ಚೆಲ್ಲುವ ಪ್ರಯತ್ನವಾಗಿ ಅಂಬೇಡ್ಕರ್ ಜೀವನದೋಂದಿಗೆ ಅವಿನಾಭಾವ ಸಂಬಂಧ ಹೊಂದಿರುವ  “ಪಂಚ ತೀರ್ಥ” ಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು.
ನಾಗಪೂರ,ಮುಂಬೈ,ದೆಹಲಿ, ಮೌಹ  ಹಾಗೂ ಲಂಡನ್ ನಲ್ಲಿ ಡಾ ಅಂಬೇಡ್ಕರ್  ವಾಸವಿದ್ದ ಮನೆ  ಖರೀದಿಸಿ ಇವುಗಳನ್ನು ಅಭಿವೃದ್ಧಿ ಪಡಿಸವ ಕಾರ್ಯ ಬಿಜೆಪಿ ಮಾಡುತ್ತಿದೆ,ಹೀಗಾಗಿ ಬಿಜೆಪಿ ಯಾವತ್ತೂ ದಲಿತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಪಾಟೀಲ್ ಹಾಗೂ  ಅಷ್ಠಗಿ ಹೇಳಿದರು. ಈ ಸಂದರ್ಭದಲ್ಲಿ  ಈಶಪ್ಪ ಹೀರೆಮನಿ, ದಿವಾಕರ್, ನಾಮದೇವ  ರಾಠೋಡ  ಶಿವರಾಜ, ಲಕ್ಷ್ಮಿ ನಾರಾಯಣ್ ಚಿಮ್ಮನಚೋಡಕರ್, ಸುಖೇಂದ್ರ ತಾವಡೆ,ರವಿಚಂದ್ರ ಕಾಂತಿಕರ್,ರವಿ ಮದನಕರ್, ಅಂಬಾರಾಯ ಚಲಗೇರಿ, ದೇವೇಂದ್ರ ಸಿನ್ನುರ್,ಅವಿನಾಶ್ ಗಾಯಕವಾಡ,ಯಶವಂತರಾಯ್ ಅಷ್ಠಗಿ,ಅನೀಲ ಡೋಂಗರಗಾಂವ ವಿಕಾಸ ನೀಲಾ, ಶಿವಾ ಅಷ್ಠಗಿ ಮಹಾರಾಜ ಅರಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago