ಸುರಪುರ: ನಮ್ಮ ಕೆಂಭಾವಿಗಿಂತಲೂ ಚಿಕ್ಕ ಚಿಕ್ಕ ಸ್ಥಳಗಳನ್ನು ತಾಲೂಕುಗಳನ್ನಾಗಿ ಘೋಷಣೆ ಮಾಡಿರುವ ಸರಕಾರ ಕೆಂಭಾವಿ ಜನರಿಗೆ ದ್ರೋಹವೆಸಗುತ್ತಿದೆ.ಕೆಂಭಾವಿ ತಾಲೂಕು ಕೇಂದ್ರವೆಂದು ಶೀಘ್ರದಲ್ಲಿ ಘೋಷಣೆ ಮಾಡದಿದ್ದಲ್ಲಿ ಕೆಂಭಾವಿಯಿಂದ ಬೆಂಗಳೂರಿಗೆ ಪಾದಾಯಾತ್ರೆ ಮಾಡುವುದಾಗಿ ಕೆಂಭಾವಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ಹದನೂರ ತಿಳಿಸಿದರು.
ತಾಲೂಕಿನ ಕೆಂಭಾವಿಯ ಮಹಾಸಾದ್ವಿ ಹೆಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕೆಂಭಾವಿ ತಾಲೂಕು ಹೋರಾಟ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಕೆಂಭಾವಿಗಿಂತಲು ಕಡಿಮೆ ಸಂಖ್ಯೆಯ ಗ್ರಾಮಗಳನ್ನು ಮತ್ತು ಜನಸಂಖ್ಯೆ ಹೊಂದಿರುವ ಕಾಳಗಿ ಶಹಾಬಾದನಂತಹ ಊರುಗಳನ್ನು ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.ಆದರೆ ಕೆಂಭಾವಿ ವ್ಯಾಪ್ತಿಯಲ್ಲಿ ಸುಮಾರು 64 ಗ್ರಾಮಗಳಿವೆ ಅಲ್ಲದೆ 90 ಸಾವಿರ ವರೆಗೆ ಜನಸಂಖ್ಯೆ ಇದೆ.
ಆದರೆ 12 ಗ್ರಾಮಗಳ ಶಹಾಬಾದ ತಾಲೂಕು ಆಗುತ್ತದೆ ಕೆಂಭಾವಿಗೆ ದ್ರೋಹ ಮಾಡಲಾಗುತ್ತದೆ.ಇದನ್ನು ಖಂಡಿಸಿ ಹಾಗು ಕೂಡಲೆ ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಹೋರಾಟ ಚುರುಕುಗೊಳಿಸಲಾಗುವದು ಸರಕಾರ ಅದೇ ನಿರ್ಲಕ್ಷ್ಯ ಮುಂದುವರೆಸಿದಲ್ಲಿ ಕೆಂಭಾವಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಮೂಲಕ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಮಾಜಿ ಜಿ.ಪಂ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಬಸವಂತ್ರಾಯ ಚೌಧರಿ ಶರಣಬಸವ ಡಿಗ್ಗಾವಿ ಬಸವರಾಜಪ್ಪಗೌಡ ಬೊಮ್ಮನಹಳ್ಳಿ ಶರಣಪ್ಪ ಪೂಜಾರಿ ಯಾಳಗಿ ಅಮ್ಮಣ್ಣ ಧರಿ ಆದಮ್ ಖಾಜಿ ಚಾಂದಪಾಶಾ ಹಣಮಂತ ಬಡಿಗೇರ ಅಯ್ಯನಗೌಡ ನಗನೂರ ವಿಕಾಸ ಸೊನ್ನದ ಅಯ್ಯಣಗೌಡ ವಂದಗನೂರ ದೇವಪ್ಪ ಮ್ಯಾಗೇರಿ ಪರಶುರಾಮ ಬಳಬಟ್ಟಿ ಮಹ್ಮದಸಾ ಢಾಲಾಯತ್ ಶಿವಶರಣ ಯಾಳಗಿ ಸಚಿನ್ ದೊರೆ ರಮೇಶ ಕಾಚಾಪುರ ಸಿದ್ದಣ್ಣ ನಡಹಳ್ಳಿ ಇದ್ದರು.ಪತ್ರಕರ್ತ ಡಿ.ಸಿ ಪಾಟೀಲ ನಿರೂಪಿಸಿದರು,ಬಂದೇನವಾಜ ನಾಲತವಾಡ ಸ್ವಾಗತಿಸಿದರು ನಿಂಗನಗೌಡ ಅಮಲಿಹಾಳ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…