ಸುರಪುರ: ಇಂದು ವಿಕಲಚೇತನರು ಅನೇಕ ಸಮಸ್ಯೆಗಳನ್ನು ಹೆದರಿಸುತ್ತಿದ್ದೆವೆ,ಸರಕಾರ ಸೌಲಭ್ಯಗಳನ್ನು ನೀಡಿದರು ಅವುಗಳು ಸಮರ್ಪಕವಾಗಿ ವಿಕಲಚೇತನರಿಗೆ ತಲಪುತ್ತಿಲ್ಲ.ಆದ್ದರಿಂದ ನಾವೆಲ್ಲರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ನಮಗೆ ಸೌಲಭ್ಯಗಳು ದೊರೆಯಲು ಸಾಧ್ಯ ಎಂದು ವಿಕಲಚೇತನರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಗನಗೌಡ ಧನರಡ್ಡಿ ರಾಜನಕೊಳೂರ ಮಾತನಾಡಿದರು.
ನಗರದ ಶ್ರೀ ಪ್ರಭು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ನಾವೆಲ್ಲರು ಇಂದು ತಾಲೂಕು ಘಟಕ ರಚನೆ ಮಾಡಿಕೊಂಡಂತೆ ಹೋಬಳಿ ಮತ್ತು ಗ್ರಾಮೀಣ ಘಟಕಗಳನ್ನು ರಚನೆ ಮಾಡಿ ನಮ್ಮ ಹಕ್ಕಿಗಾಗಿ ಜಾಗೃತಿಗೊಳಿಸಬೇಕಿದೆ.ಎಲ್ಲಾ ಇಲಾಖೆಗಳಲ್ಲಿ ವಿಕಲಚೇತನರಿಗಾಗಿ ಪ್ರತಿಶತ ೫ ರಷ್ಟು ಅನುದಾನ ಮೀಸಲಿದೆ.ಆದರೆ ಅದು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಬೇಕಿದೆ,ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗು ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸೋಣ ಎಂದರು.
ನಂತರ ನಡೆದ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಯಿತು. ಶರಣಯ್ಯಸ್ವಾಮಿ ಹಿರೇಮಠ ದೇವಾಪುರ (ಗೌರವಾಧ್ಯಕ್ಷ) ನಾಗೇಂದ್ರ ದೊರೆ ಚಂದ್ಲಾಪುರ (ಅಧ್ಯಕ್ಷ) ದೇವಣ್ಣ ಬೊಮ್ಮನಹಳ್ಳಿ ದೇವಿಂದ್ರಪ್ಪ ಬಾಚಿಮಟ್ಟಿ(ಉಪಾಧ್ಯಕ್ಷರು) ಬಸವರಾಜ ಬನ್ನೆಟ್ಟಿ ಬೈರಿಮರಡಿ (ಪ್ರಧಾನ ಕಾರ್ಯದರ್ಶಿ) ದೊಡ್ಡಪ್ಪಗೌಡ ಪಾಟೀಲ ನಾಗರಾಳ (ಸಹ ಕಾರ್ಯದರ್ಶಿ) ಶಂಕ್ರಯ್ಯಸ್ವಾಮಿ ನರಸಿಂಗಪೇಟೆ ಮಲ್ಲು ಪೂಜಾರಿ ದೇವಪುರ(ಸಂಘಟನಾ ಕಾರ್ಯದರ್ಶಿ) ಪ್ರದೀಪಗೌಡ ಕುಂಬಾರಪೇಟೆ ಮಾಳಪ್ಪ ಮಾಚಗುಂಡಾಳ (ಸಂಚಾಲಕರು) ನಿಂಗಣ್ಣ ವಂಟೂರ ಚಂದ್ಲಾಪುರ (ಖಜಾಂಚಿ) ಮಾನಪ್ಪ ಕೂಡಲಗಿ (ಕಾನೂನು ಸಲಹೆಗಾರ) ಹಾಗು ಶರಣಪ್ಪ ಖಾನಾಪುರ ಶಿವರುದ್ರಪ್ಪ ನರಸಿಂಗಪೇಟೆ ಭಾಗಪ್ಪ ಆಲ್ದಾಳ ಜಟ್ಟೆಪ್ಪ ಉದ್ದಾರ ಓಣಿ ಸದಸ್ಯರನ್ನಾಗಿ ನೇಮಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಎಮ್.ಆರ್.ಡಬ್ಲೂ ಮಾಳಪ್ಪ ಪೂಜಾರಿ ಯು.ಆರ್.ಡಬ್ಲೂ ರಾಮಕೋಟೆಪ್ಪ ಹಾಗು ಪರಶುರಾಮ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…