ಕಲಬುರಗಿ: ಕೋವಿಡ್-19 ನಿಯಂತ್ರಣದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ದಿನಾಂಕ: 14-03-2020 ರಿಂದ ಕಲಬುರಗಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಏನಾದರೂ ನ್ಯೂನ್ಯತೆಗಳು ಕಂಡುಬಂದಲ್ಲಿ ಜಿಲ್ಲೆಯ ಗ್ರಾಮಸ್ಥರು / ಸಾರ್ವಜನಿಕರು ಸಂಬಂಧಪಟ್ಟ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬೇಕು. ಅಂಗನವಾಡಿ ಫಲಾನುಭವಿಗಳಿಗೆ ವಿತರಿಸಲಾಗುವ ಆಹಾರದ ವಿವರ ಇಂತಿದೆ.
6 ತಿಂಗಳಿಂದ 3 ವರ್ಷದ ಮಕ್ಕಳಿಗೆ: ಪೂರಕ ಪೌಷ್ಠಿಕ ಅಹಾರ ಕಾರ್ಯಕ್ರಮದಡಿ ಪುಷ್ಠಿ ಪೌಷ್ಠಿಕ ಆಹಾರ, ಕೆನೆಸಹಿತ ಹಾಲಿನಪುಡಿ, ಸಕ್ಕರೆ, ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ ಮೂರು ದಿನ ಕೋಳಿಮೊಟ್ಟೆ ವಿತರಿಸಲಾಗುತ್ತಿದೆ.
3 ವರ್ಷದಿಂದ 6 ವರ್ಷದ ಮಕ್ಕಳಿಗೆ: ರೋಸ್ಟೆಡ್ ಗೋದಿ ನುಚ್ಚು, ಬೆಲ್ಲ, ಹೆಸರು ಕಾಳು, ಒಣ ಮೆಣಸಿನಕಾಯಿ, ಅಯೋಡಿನ್ ಉಪ್ಪು, ಸಾಸಿವೆ, ಎಣ್ಣೆ, ಅಕ್ಕಿ, ತೊಗರಿಬೆಳೆ, ಸಾಂಬಾರ ಮಸಾಲಾ, ಕಡಲೆ ಬೇಳೆ, ಶೇಂಗಾ ಬೀಜ, ಕೆನೆಸಹಿತ ಹಾಲಿನಪುಡಿ, ಸಕ್ಕರೆ. ವಾರದಲ್ಲಿ ಎರಡು ದಿನ ಕೋಳಿ ಮೊಟ್ಟೆ, ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ ಮೂರು ದಿನ ಕೋಳಿಮೊಟ್ಟೆ ವಿತರಿಸಲಾಗುತ್ತಿದೆ.
ಗರ್ಭಿಣಿ ಮತ್ತು ಬಾಣಂತಿಯರಿಗೆ: ಅಕ್ಕಿ, ತೊಗರಿಬೇಳೆ, ಎಣ್ಣೆÉ, ಸಾಸಿವೆ, ಅಯೋಡಿನ್ ಉಪ್ಪು, ಒಣ ಮೆಣಸಿನಕಾಯಿ, ಸಾಂಬಾರ ಮಸಾಲಾ, ಶೇಂಗಾ ಬೀಜ, ಬೆಲ್ಲ, ಕೋಳಿಮೊಟ್ಟೆ, ಕೆನೆಸಹಿತ ಹಾಲಿನಪುಡಿ, ಸಕ್ಕರೆ ಹಾಗೂ ಕಡಲೇ ಬೇಳೆ ವಿತರಿಸಲಾಗುತ್ತಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…