ಬಿಸಿ ಬಿಸಿ ಸುದ್ದಿ

ಬುದ್ಧ ಬಸವ ಅಂಬೇಡ್ಕರ ಜಯಂತಿ ಆಚರಣೆಗೆ ಶ್ರಮಿಸಿದ ಎಲ್ಲರಿಗೂ ಗೌರವ ಸಮರ್ಪಣೆ

ಸುರಪುರ: ಯಾವುದೆ ಒಂದು ಕಾರ್ಯಕ್ರಮವನ್ನು ಕೇವಲ ಒಬ್ಬರಿಂದ ಮಾಡಲಾಗದು,ಅದಕ್ಕೆ ನೂರಾರು ಜನರ ಶ್ರಮದಿಂದ ಸಾಧ್ಯ.ಅದರಂತೆ ಮೊನ್ನೆ ಆಚರಿಸಲಾದ ಬುದ್ಧ ಬಸವ ಹಾಗು ಡಾ. ಬಾಬಾ ಸಾಹೇಬ ಅಂಬೇಡ್ಕರರ ೧೨೮ನೇ ಜಯಂತಿ ಆಚರಣೆ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರವೆ ಮುಖ್ಯವಾದದು ಎಂದು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸಮನಿ ಮಾತನಾಡಿದರು.

ಮೇ ೨೦ರಂದು ನಗರದಲ್ಲಿ ಜರುಗಿದ ಬುದ್ಧ ಬಸವರ ಸ್ಮರಣೆಯ ಡಾ: ಬಿ.ಆರ್.ಅಂಬೇಡ್ಕರರ ೧೨೮ನೇ ಜಯಂತಿ ಕಾರ್ಯಕ್ರಮದಲ್ಲಿ ಶ್ರಮಿಸಿದ ಮತ್ತು ತನು ಮನ ಧನ ಸಹಕರ ನೀಡಿದ ಎಲ್ಲರಿಗಾಗಿ ನಡೆಸಿದ ಅಭಿನಂಧನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಕಾರ್ಯಕ್ರಮವನ್ನು ಎರಡು ವಾರಗಳಿಂದ ನಿತ್ಯವು ವಿವಿಧ ರೂಪದಲ್ಲಿ ಶ್ರಮವಹಿಸಲಾಗಿತ್ತು.ಹಲವಾರು ಮಹನಿಯರುಗಳು ತನು ಮನ ಧನ ಸಹಕಾರ ನೀಡುವ ಮೂಲಕ ಬುದ್ಧ ಬಸವ ಹಾಗು ಅಂಬೇಡ್ಕರರ ಆಶಯಗಳನ್ನು ಸಮಜಕ್ಕೆ ತಲುಪಿಸಲು ಸಹಕರಿಸಿದ್ದಾರೆ.ಆ ಕಾರ್ಯಕ್ಕೆ ತಾಅವುಗಳೆಲ್ಲರು ಕೂಡ ಅನೇಕ ದಿನಗಳಕಾಲ ಶ್ರಮಿಸಿದ್ದಿರಿ.ತಮಗೆಲ್ಲರಿಗೂ ಅಭಿನಂಧನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಬುದ್ಧನ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಪಂಚಶೀಲ ಪಠಣದ ಮೂಲಕ ಚಾಲನೆ ನೀಡಲಾಯಿತು.ನಂತರ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರಿಗೂ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ನಂತರ ಕಾರ್ಯಕ್ರಮದ ಹಣಕಾಸು ಸಮಿತಿ ಅಧ್ಯಕ್ಷ ರಾಹುಲ್ ಹುಲಿಮನಿ ಹಾಗು ಜಯಂತ್ಯೋತ್ಸವ ಸಮಿತಿ ಖಜಾಂಚಿ ಮಾಳಪ್ಪ ಕಿರದಹಳ್ಳಿ ಕಾರ್ಯಕ್ರಮದ ಸಮಗ್ರ ಖರ್ಚು ವೆಚ್ಚದ ಮಾಹಿತಿ ಒದಗಿಸಿದರು.

ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷರಾದ ನಾಗಣ್ಣ ಕಲ್ಲದೇವನಹಳ್ಳಿ,ನಿಂಗಣ್ಣ ಗೋನಾಲ,ಪ್ರಧಾನ ಕಾರ್ಯದರ್ಶಿ ರಾಜು ಕುಂಬಾರ,ಭೀಮರಾಯ ಸಿಂಧಗೇರಿ,ಮಲ್ಲಿಕಾರ್ಜುನ ವಾಗಣಗೇರಾ,ರಾಮಣ್ಣ ಕಲ್ಲದೇವನಹಳ್ಳಿ,ರಾಮಚಂದ್ರ ವಾಗಣಗೇರಾ,ರಾಮಣ್ಣ ಶೆಳ್ಳಿಗಿ,ರಮೇಶ ಅರಕೇರಿ,ಚಂದಪ್ಪ ಪಂಚಮ್,ಆಕಾಶ ಕಟ್ಟಿಮನಿ,ರಮೇಶ ಬಡಿಗೇರ,ಆನಂದ ಅರಕೇರಿ, ವೀರಭದ್ರ ತಳವಾರಗೇರಾ,ಮಲ್ಲು ಮುಷ್ಟಳ್ಳಿ,ಗಿರೀಶ ಡ್ಯಾನಿ,ಪಾರಪ್ಪ ದೇವತ್ಕಲ್,ಗೌತಮ್ ಬಡಿಗೇರ, ಮೌನೇಶ ಮೂಲಿಮನಿ,ಬಸ್ಸು ಅರಕೇರಿ,ವಿಶ್ವನಾಥ ಹೊಸಮನಿ,ಪರಮಣ್ಣ ನಾಗರಾಳ,ವಿಜಯ ಕರಡಕಲ್,ಅರುಣ ಚಿಂಚೋಡಿ,ಹಣಮಂತ ರತ್ತಾಳ.ಹಣಮಂತ ಚಲುವಾದಿ ಇದ್ದರು

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago