ರಾಯಚೂರು: ವಿಕೋಪದಿಂದ ಸತ್ತ ಕುರಿಗಳಿಗೆ ಪರಿಹಾರ ಮತ್ತು ಔಷಧಿಗಳನ್ನು ವಿತರಣೆ ಮಾಡಬೇಕು ಎಂದು ಅಮೋಘ ಸಿದ್ದೇಶ್ವರ ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್ ಹೇಳಿದರು.
ಅವರಿಂದು ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವರ್ಷದಲ್ಲಿ ಅತಿಯಾದ ಮಳೆ ಯಿಂದಾಗಿ ಸುಮಾರು ಕುರಿಗಳು ಸಾವನ್ನಪ್ಪಿವೆ, ಇದರಿಂದ ಕುರಿಗಾರರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ಸರ್ಕಾರದಲ್ಲಿ ಸತ್ತ ಕುರಿಗಳಿಗೆ 5 ಸಾವಿರ ರೂ. ಗಳನ್ನ ಪರಿಹಾರ ಮತ್ತು ಔಷಧಿ ಗಳನ್ನ ನೀಡುವುದಾಗಿ ಹೇಳಿ ದ್ದರು.ಇದೀಗ ಬಿಜೆಪಿ ಸರ್ಕಾರದಲ್ಲಿ ಕುರಿಗಾರರಿಗೆ ಯಾವುದೇ ಔಷಧವನ್ನು ನೀಡಿಲ್ಲ ಎಂದರು.
ಕುರಿಗಾರರು ಹೆಚ್ಚಿನ ಹಣ ವೆಚ್ಚ ಮಾಡಿ ಔಷಧಗಳನ್ನು ಖರೀದಿಸಿ ಕುರಿಗಳಿಗೆ ಚಿಕಿತ್ಸೆ ಕೊಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುರಿಗಳಲ್ಲಿ ಚರ್ಮ ಗಂಟು ರೋಗ ಹಾಗೂ ಕಾಲು ಬಾಯಿ ರೋಗದಂತಹ ಮಾರಕ ರೋಗ ಹರಡಿದರೂ ಇದುವರೆಗೂ ಸಂಬಂಧಿಸಿದ ಇಲಾಖೆಯು ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು.
ಜಿಲ್ಲೆಗೆ 2018-19ನೇ ಸಾಲಿನಲ್ಲಿ ಕುರಿಗಾರರಿಗೆ ಸುಮಾರು 300 ಟೆಂಟ್ ಗಳು , ಬಲೆ ಮತ್ತು ಇನ್ನಿತರ ಪರಿಕರಗಳು ಹಾಗೂ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆ ಅಡಿಯಲ್ಲಿ 80 ಜನ ಕುರಿಗಾರರಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿತ್ತು. ಈ ವರ್ಷದಲ್ಲಿ ಸಂಚಾರಿ ಕುರಿಗಾರರಿಗೆ ಕೇವಲ 10 ಟೆಂಟ್‌ಗಳನ್ನು , ಬಲೆ ಮತ್ತು ಇನ್ನಿತರ ಪರಿಕರಗಳು ಹಾಗೂ ನೀಡಲಾಗಿದೆ ಎಂದು ತಿಳಿಸಿದರು.
ಉನ್ನತ ಪದವಿ ಪಡೆದ ನಿರುದ್ಯೋಗ ಯುವಕರು ಮತ್ತು ಸಾಫ್ಟ್ವೇರ್ ಗಳು ಹಾಗೂ ಇನ್ನಿತರ ವಿದ್ಯಾವಂತ ಯುವಕರು ಸ್ವಾವಲಂಬಿ ಜೀವನ ನಡೆಸಲು ಕುರಿಸಾಕಾಣಿಕೆಯಲ್ಲಿ ಆಸಕ್ತಿಯನ್ನು ಹೊಂದಿ ಸ್ವಾವಲಂಬಿ ಜೀವನ ನಡೆಸುವಂತಾ ಗಿದೆ. ಕುರಿಸಾಕಾಣಿಕೆ ಒಂದು ಕುರುಬ ಸಮಾಜಕ್ಕೆ ಮಾತ್ರ ಸೀಮಿತವಲ್ಲ ಎಲ್ಲಾ ಸಮುದಾಯದ ಯುವಕರು ಸಹ ಕುರಿಸಾಕಾಣಿಕೆ ಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಕುರಿಗಾರರ ರಕ್ಷಣೆ ಸಲುವಾಗಿ ಈ ಮೊದಲು ಹಿಂದಿನ ಸರ್ಕಾರವು ಬಂದೂಕಿನ ಪರವಾನಿಗೆ ನೀಡಬೇಕೆಂದು ಹೇಳಿತ್ತು. ಇದುವರೆಗೂ ಚಾರಿಯಾಗಿಲ್ಲ, ಕೂಡಲೇ ಕುರಿಗಾರರ ಜೀವ ರಕ್ಷಣೆಗಾಗಿ ಬಂದೂಕಿನ ಪರವಾನಿಗೆಯನ್ನು ಸಂಬಂಧಿಸಿದ ಇಲಾಖೆಯವರಿಗೆ ಆದೇಶಿಸಬೇಕು, ಯೋಜನೆಗಳನ್ನು ಮುಂದುವರೆಸಿ, ಹೆಚ್ಚಿನ ಸೌಲಭ್ಯ ಗಳನ್ನು ಒದಗಿಸಿ , ನಿರದ್ಯೋಗದ ಯುವಕರಿಗೆ ಕುರಿಸಾಕಾಣಿಕೆಯಂತಹ ಒಂದು ಉದ್ಯೋಗವನ್ನು ಒದಗಿಸಿಕೊಟ್ಟು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಣ್ಣ ವಕೀಲ ಮಂಜುನಾಥ, ವಿರೂಪಾಕ್ಷ ಗೌಡ,ಶ್ರೀನಿವಾಸ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…