ಬಿಸಿ ಬಿಸಿ ಸುದ್ದಿ

ಶ್ರೀಮಂತ ಯುವಕನ ಅಪಹರಣ ಪ್ರಕರಣ: 7 ಆರೋಪಿಗಳ ಬಂಧನ

ಬೆಂಗಳೂರು: ಶ್ರೀಮಂತ ಯುವಕನೊಬ್ಬನನ್ನು ಅಪಹರಿಸಿ 30 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟುರುವ ಪ್ರಕರಣಕ್ಕೆ ಸಂಬಂಧಿಸಿದಂತೆ 7ಜನ ಆರೋಪಿಗಳನ್ನು ಬಂಧಿಸಿ ಬೆಂಗಳೂರಿನ ತಿಲಕನಗರ ಪೊಲೀಸರಿಗೊಪ್ಪಿಸಿದ ನಾಗಮಂಗಲ ಟೌನ್ ಪೊಲೀಸರು.

ಕಳೆದ ಎರಡು ದಿನಗಳ ಹಿಂದೆ ಅಪಹರಿಸಿ 30 ಲಕ್ಷ ರೂ ಗಳಿಗೆ ಬೇಡಿಕೆ ಇಟ್ಟ 7 ಜನ ಅಪಹರಣಕಾರರು, ಯುವಕನನ್ನು ಕರೆದುಕೊಂಡು ಬೆಂಗಳೂರಿನಿಂದ ನಾಗಮಂಗಲ ಬಂದು ಅಪಹರಣಕಾರರ ಸ್ನೇಹಿತರಾದ ನಾಗಮಂಗಲದ ನಿವಾಸಿಗಳಾದ ಸತೀಶ್, ಮಹೇಶ್, ಗಿರೀಶ್, ಎಂಬುವವರನ್ನು ಸಂಪರ್ಕಿಸಿ ಪಟ್ಟಣದ ಎಸ್.ಎಲ್.ಎನ್ ಗ್ರಾಂಡ್ ರೆಸಿಡೆನ್ಸಿ ಲಾಡ್ಜ್ ನಲ್ಲಿ ಎರಡು ರೂಮುಗಳನ್ನು ಪಡೆದು ಮಧ್ಯಪಾನ ಮಾಡುತ್ತಿದ್ದ ಸಂದರ್ಭದಲ್ಲಿ ಅಪಹರಣ ಗೊಂಡಿದ್ದ ಯುವಕನ ಕಡೆಯವರಿಂದ 30 ಸಾವಿರ ಬಂದಿದ್ದು ಅಪಹರಣ ಗೊಂಡಿದ್ದ ಹುಡುಗನನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಿಡುಗಡೆಗೊಂಡ ಯುವಕ ತನ್ನ ಪೋಷಕರಿಗೆ ಫೋನ್ ಮೂಲಕ ನನ್ನನ್ನು ಬಿಟ್ಟು ಕಳುಹಿಸಿರುವುದಾಗಿ ವಿಷಯ ತಿಳಿಸಿದ್ದಾನೆ. ನಂತರ ಪೋಷಕರು ಅಪಹರಣ ವಾಗಿರುವ ಬಗ್ಗೆ ದೂರು ನೀಡಿದ್ದ ಬೆಂಗಳೂರಿನ ತಿಲಕ ನಗರ ಪೊಲೀಸರಿಗೆ ಮಾಹಿತಿ ತಿಳಿಸಿ ಯುವಕ ಕರೆ ಮಾಡಿದ ಮೊಬೈಲ್ ನಂಬರನ್ನು ಪೊಲೀಸರಿಗೆ ನೀಡಿದ್ದಾರೆ.

ಪೊಲೀಸರು ಅಪಹರಣಕ್ಕೊಳಗಾಗಿದ್ದ ಯುವಕನಿಗೆ ಕರೆ ಮಾಡಿ ಅಪಹರಣಕಾರರು ಬಿಟ್ಟು ಕಳಿಸಿದ ಜಾಗದ ಬಗ್ಗೆ ಮಾಹಿತಿ ಕಲೆಹಾಕಿ ನಂತರ ನಾಗಮಂಗಲ ಟೌನ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿಕಿರಣ್ ರವರಿಗೆ ಕರೆ ಮಾಡಿ ಘಟನೆಯ ವಿವರಗಳನ್ನು ತಿಳಿಸಿ ಅಪಹರಣಕಾರರು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಾರೆ.

ಕಾರ್ಯಪ್ರವೃತ್ತರಾದ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿಕಿರಣ್, ಒಂದು ತಂಡ ರಚನೆ ಮಾಡಿಕೊಂಡು ಮಿಂಚಿನ ಕಾರ್ಯಾಚರಣೆ ನಡೆಸಿ ಎಸ್.ಎಲ್.ಎನ್ ಗ್ರಾಂಡ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ಮಾಡಿ ಅಪಹರಣಕಾರರದ ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿಗಳಾದ ಮಹೇಶ್, ಮೋಹನ್, ನವ್ಯಂತ್, ಭರತ್, ಜೋಸೆಫ್, ರವಿಕಿರಣ್, ರಾಜು, ಎಂಬ 7 ಜನ ಆರೋಪಿಗಳನ್ನು ಬಂದಿಸಿ ಬೆಂಗಳೂರಿನ ತಿಲಕ್ ನಗರ ಪೊಲೀಸರಿಗೆ ಒಪ್ಪಿಸಿದರು.

ಕಾರ್ಯಾಚರಣೆಯಲ್ಲಿ ಪ್ರೋಬೇಷನರಿ ಪಿಎಸ್ಐ ಶ್ರೀಧರ್, ಸಿಬ್ಬಂದಿ ರಮೇಶ್, ರೇವಣ್ಣ, ಶಂಕ್ರಯ್ಯ, ಸಿದ್ದಪ್ಪ, ಜಿಪ್ ಚಾಲಕ ರಾಜೇಶ್ ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago