ಕಲಬುರಗಿ: ನಗರದ ವಾರ್ಡ ನಂ 28 ಹೀರಾಪೂರ ಬಡಾವಣೆಯ ಮಖ್ಯ ರಸ್ಸೆಯ ಮೇಲೆ ಸಂಚಾರ ಮಾಡುವ ಮರಳು ತುಂಬಿದ ಲಾರಿಯ ಟೈರ್ ಒಡೆದು ಕಲ್ಲಿನ ಹಳ್ಳ ಸಿಡಿದು ಮನೆಯ ಎದುರು ಕುಳಿತಿದ್ದ ಇಬ್ಬರು ವಯಸ್ಸಾದ ಮಹಿಳೆಯರಿಗೆ ಕಣ್ಣಿನ ಪಕ್ಕ, ಮುಖಕ್ಕೆ, ಕೈಗೆ ಮತ್ತು ಕಾಲಿಗೆ ರಕ್ತ ಗಾಯವಾದ ಪರಿಣಾಮ ಘಟನೆ ಖಂಡಿಸಿ ಬಡಾವಣೆಯ ಮಹಿಳೆಯರು ಮಕ್ಕಳು ಎಲ್ಲರೂ ರೊಚ್ಚಿಗೆದ್ದು ಸುಮಾರು ೩-೪ ಗಂಟೆ ವರೆಗೆ ಮುಖ್ಯ ರಸ್ಸೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಮುಖ್ಯ ರಸ್ತೆ ಮೇಲೆ ಸಂಚರಿಸುವ ಎಲ್ಲ ಭಾರಿ ವಾಹನಗಳ ಸಂಚಾರ ತಕ್ಷಣವೇ ನಿಲ್ಲಿಸಬೇಕೆಂದು ಗ್ರಾಮೀಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷರಿಗೆ ಮತ್ತು ಟ್ರಾಫಿಕ ಪೋಲಿಸ ಠಾಣೆ ವೃತ್ತ ನಿರೀಕ್ಷಕರಿಗೆ ಆಗ್ರಹಿಸಲಾಯಿತು.
ಕಳೆದ ವರ್ಷ ಜಿಲ್ಲಾಧಿಕಾರಿ ಬಿ ಶರತ್ ಸರ್ ಅವರು ಖುದ್ದು ಹೀರಾಪೂರಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಕೇಂದ್ರ ಉಗ್ರಾಣಕ್ಕೆ ಬರುವ ಮತ್ತು ಹೋಗುವ ಲಾರಿಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವುದನ್ನು ಮನಗಂಡಿದ್ದು ಅ? ಅಲ್ಲ ಲಾರಿಗಳ ಸಂಚಾರದಿಂದಲೇ ಇಲ್ಲಿನ ರಸ್ತೆ ಕೆಟ್ಟು ಹೋಗುತಿರುವುದನ್ನು ತಿಳಿದುಕೊಂಡು ಹೀರಾಪೂರ ಮುಖ್ಯ ರಸ್ಸೆಯ ಮೇಲೆ ಲಾರಿ ಸಂಚಾರ ಬಂದ ಮಾಡಬೇಕೆಂದು ಸ್ಪ? ನಿರ್ದೇಶನ ನೀಡಿದರೆಂದು ಪೊಲೀಸ್ ಅಧಿಕಾರಿಗಳಿಗೆ ಮನದಟ್ಟು ಮಾಡಲಾಯಿತು.
ತಕ್ಷಣವೆ ಪೋಲಿಸರು ಮರಳು ತುಂಬಿದ ಲಾರಿಗಳು ಹಾಗೂ ಕೇಂದ್ರ ಉಗ್ರಾಣದ ಲಾರಿಗಳನ್ನು ಬಂದ ಮಾಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಖ್ಯ ರಸ್ತೆಗೆ ಅಡ್ಡಲಾಗಿ ಭಾರಿ ವಾಹನಗಳು ಸಂಚರಿಸದಂತೆ ಗುಣಮಟ್ಟದ ಕಬ್ಬಿಣದ ಬ್ಯಾರಿಕೇಡನ್ನು ಅಳವಡಿಸಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮುಖ್ಯ ರಸ್ತೆಯಲ್ಲಿ ಭಾರಿ ತೂಕದ ವಾಹನಗಳ ಸಂಚಾರದಿಂದ ಒಳಚರಂಡಿ ಮ್ಯಾನಹೋಲಗಳು ಪ್ರತಿ ೧೦-೧೫ ದಿನಗಳಲ್ಲಿ ಒಡೆದು ಹೋಗುತ್ತಿವೆ ಇದರಿಂದ ಪದೆ ಪದೆ ಮ್ಯಾನಹೋಲಗಳ ದುರಸ್ಥಿ ಮಾಡಿಸುವುದು ಕೂಡ ಸಮಸ್ಯೆಯಾಗುತ್ತಿದೆ ಅದೇ ರೀತಿ ಕುಡಿಯುವ ಪೈಪಲೈನಗಳು ಪದೆ-ಪದೆ ಒಡೆದು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಪ್ರತಿಭಟನಾ ನಿರತರ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…