ಬಿಸಿ ಬಿಸಿ ಸುದ್ದಿ

ಆರ್‍ಎಸ್‍ಎಸ್ ಹಿಡಿತದ ಶಿಕ್ಷಣ ನೀತಿ ನಮಗೆ ಬೇಡ

ವಾಡಿ: ಸಂಸತ್ ಸಧನಗಳಲ್ಲಿ ಚರ್ಚೆಯಿಲ್ಲದೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಸಂಪೂರ್ಣ ಆರ್‍ಎಸ್‍ಎಸ್ ಹಿಡಿತದಲ್ಲಿದೆ. ವೃತ್ತಿ ಶಿಕ್ಷಣದ ಹೆಸರಿನಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಪೋಷಿಸುತ್ತ ಶ್ರೇಣೀಕೃತ ಸಮಾಜವನ್ನು ಮರುಸ್ಥಾಪಿಸುವ ಧ್ಯೇಯ ಹೊಂದಿರುವ ಕೆಟ್ಟ ಶಿಕ್ಷಣ ನಮಗೆ ಬೇಡ ಎಂದು ಸಾಹಿತಿ, ಅಂಕಣಕಾರ ಬಿ.ಶ್ರೀಪಾದ ಭಟ್ ಹೇಳಿದರು.

ಸಂಚಲನ ಸಾಹಿತ್ಯ ಸಾಂಸ್ಕøತಿಕ ವೇದಿಕೆ ವತಿಯಿಂದ ಸೋಮವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2020ರ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಆರ್‍ಎಸ್‍ಎಸ್‍ನ ಅಂಗಸಂಸ್ಥೆಗಳಾದ ಭಾರತೀಯ ಶಿಕ್ಷಣ ಮಂಡಲ್, ಶಿಕ್ಷ ಸಂಸ್ಕøತಿ ಉತ್ಥಾನ ನ್ಯಾಸ್ ಮತ್ತು ಭಾರತೀಯ ಭಾಷಾ ಮಂಚ್ ಜಂಟಿಯಾಗಿ ರಾಷ್ಟ್ರಾಧ್ಯಾಂತ 40 ಸೆಮಿನಾರ್‍ಗಳನ್ನು ಸಂಘಟಿಸಲಾಗಿತ್ತು. ಆರ್‍ಎಸ್‍ಎಸ್ ಪದಾಧಿಕಾರಿಗಳೊಂದಿಗೆ ಮತ್ತು ಬಿಜೆಪಿ ಸರಕಾರವಿರುವ ರಾಜ್ಯಗಳೊಂದಿಗೆ ಚರ್ಚಿಸಲಾಗಿತ್ತು.

ಸಂಘಪರಿವಾರದ ಅಂಗಸಂಸ್ಥೆಗಳು ತಮ್ಮ ಅಭಿಪ್ರಾಯಗಳನ್ನು ಸುಬ್ರಮಣ್ಯ ಸಮಿತಿ ಹಾಗೂ ನಂತರದ ಕಸ್ತೂರಂಗನ್ ಸಮಿತಿಗೆ ಸಲ್ಲಿಸಿದ್ದವು. ಭಾರತದ ಮೌಲ್ಯಗಳು, ಭಾಷೆ, ಕಲೆ ಸಂಸ್ಕøತಿ ಎನ್‍ಇಪಿ-2020 ಮುಖ್ಯಭಾಗಗಳಾಗಿರುತ್ತವೆ ಎಂದು ಎಸ್‍ಎಸ್‍ಯುಎನ್‍ನ ರಾಷ್ಟ್ರೀಯ ಕಾರ್ಯದರ್ಶಿ ಕೊಠಾರಿ ಪ್ರತಿಪಾದಿಸಿದ್ದರು. ಆದರೆ ಪ್ರಭುತ್ವ ಮಾತ್ರ ಪ್ರಜಾತಾಂತ್ರಿಕ ನಿಲುವುಗಳನ್ನು ಗಾಳಿಗೆ ತೂರುವ ಮೂಲಕ ಜನವಿರೋಧಿ ಶಿಕ್ಷಣ ನೀತಿ ಜಾರಿಗೆ ಹಟ ತೊಟ್ಟಿದೆ ಎಂದು ಆಪಾದಿಸಿದರು.

ಉಪನ್ಯಾಸಕಿ ಹಾಗೂ ಹೋರಾಟಗಾರ್ತಿ ಅಶ್ವಿನಿ ಮಾತನಾಡಿ, ಶಿಕ್ಷಣ ತಜ್ಞರು, ಲೇಖಕರು, ವಿದ್ಯಾರ್ಥಿ ಸಂಘಟನೆಗಳು, ಪ್ರಜ್ಞಾವಂತರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೋಮುವಾದ ಸಿದ್ಧಾಂತ ಪಾಲಿಸಿರುವುದು ಸ್ಪಷ್ಟವಾಗಿದೆ.

ಇದು ಇಡೀ ಶಿಕ್ಷಣದ ವಿಶ್ವಾರ್ಹತೆಗೆ ಧಕ್ಕೆಯುಂಟು ಮಾಡಿದೆ. ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಮಾತನಾಡುತ್ತಲೇ ಬಹುಸಂಖ್ಯಾತರನ್ನು ಹೊರಗಿಡುವ ರಹಸ್ಯ ಬಯಲಿಗೆ ಬಿದ್ದಿದೆ. ಬಂಡವಾಳಶಾಹಿ ಹಿತಾಸಕ್ತಿ ಮತ್ತು ಸನಾತನವಾದಿ ಚಿಂತನೆಗಳನ್ನು ಬೆಸೆಯುವ ಮೂಲಕ ಇಡೀ ದೇಶವನ್ನು ಪ್ರಭುತ್ವ ಪ್ರಣೀತವಾದ ಚಿಂತನೆಗಳಲ್ಲಿ ಠಂಕಿಸುವುದೇ ಆಗಿದೆ. ಇದು ಬಡ ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ದೊಡ್ಡ ಹೊಡೆತ ಹಾಕಲಿದೆ. ಇದು ಜನರ ಐಕ್ಯತೆಯನ್ನು ಜಾತಿ ಧರ್ಮದ ಹೆಸರಿನಲ್ಲಿ ಒಡೆದುಹಾಕಲಿದೆ. ಕಡ್ಡಾಯ ಶಿಕ್ಷಣ ಹಕ್ಕು ತೆಗೆದುಹಾಕಿ ಬಾಲ್ಯದಲ್ಲಿಯೇ ಕುಲಕಸುಬಿನತ್ತ ನೂಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಈ ಹೊಸ ಶಿಕ್ಷಣ ನೀತಿ ವಿರುದ್ಧ ಬ್ರಹತ್ ಹೋರಾಟವೇ ನಡೆಯಬೇಕಿದೆ ಎಂದರು.

ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಲನ ಸಾಹಿತ್ಯ ವೇದಿಕೆಯ ಕಾಶಿನಾಥ ಹಿಂದಿನಕೇರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ವಿಕ್ರಮ ನಿಂಬರ್ಗಾ ಪ್ರಾಸ್ತಾವಿಕ ನುಡಿದರು.

ಸಿದ್ಧಯ್ಯಶಾಸ್ತ್ರಿ ನಂದೂರಮಠ ಮತ್ತು ಬಸವರಾಜ ಯಲಗಟ್ಟಿ ಅವರು ಪ್ರಗತಿಪರ ಗೀತೆಗಳನ್ನು ಹಾಡಿದರು. ಡಾ.ಮಲ್ಲಿನಾಥ ತಳವಾರ, ಶ್ರವಣಕುಮಾರ ಮೊಸಲಗಿ, ರಮೇಶ ಮಾಶಾಳ, ದಯಾನಂದ ಖರ್ಜಗಿ, ದೇವಿಂದ್ರ ಕರದಳ್ಳಿ, ವೀರಣ್ಣ ಯಾರಿ, ಇಮಾನ್ವೆಲ್, ಸಿದ್ದಲಿಂಗ ಬಾಳಿ, ಅಶ್ವಿನಿ ಮದನಕರ, ಭೀಮಶಾ ಜಿರೊಳ್ಳಿ, ಚಂದ್ರಸೇನ ಮೇನಗಾರ, ಪದ್ಮರೇಖಾ ವೀರಭದ್ರಪ್ಪ, ಪೂಜಾ ಸಿಂಗೆ, ರವಿ ಕೋಳಕೂರ, ಚಂದ್ರು ಕರಣಿಕ, ಖೇಮಲಿಂಗ ಬೆಳಮಗಿ, ಸಂದೀಪ ಕಟ್ಟಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಹೋರಾಟಗಾರರು, ಪ್ರಗತಿಪರ ಚಿಂತಕರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಂಚಲನ ವೇದಿಕೆ ನಿಕಟಪೂರ್ವ ಅಧ್ಯಕ್ಷ ಮಡಿವಾಳಪ್ಪ ಹೇರೂರ ನಿರೂಪಿಸಿದರು. ಮಲ್ಲೇಶ ನಾಟೇಕರ ವಂದಿಸಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

8 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

8 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

10 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

10 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

10 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

11 hours ago